For Quick Alerts
  ALLOW NOTIFICATIONS  
  For Daily Alerts

  ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್

  |

  ರಾಬರ್ಟ್ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ ಹೈದರಾಬಾದ್‌ನ ಫಿಲ್ಮ್ ನಗರದಲ್ಲಿ ಬಹು ಅದ್ಧೂರಿಯಾಗಿ ನಡೆದಿದೆ.

  ನಟ ದರ್ಶನ್, ನಟಿ ಆಶಾ ಭಟ್, ನಿರ್ದೇಶಕ ತರುಣ್ ಸುಧೀರ್, ನಟ ವಿನೋದ್ ಪ್ರಭಾಕರ್, ನಿರ್ಮಾಪಕ ಉಮಾಪತಿ ಇನ್ನೂ ಹಲವಾರು ಮಂದಿ ಹಾಜರಿದ್ದ ಸಮಾರಂಭದಲ್ಲಿ ನಟ ದರ್ಶನ್ ಭಾಷಣ ಮಾಡಿ ತೆಲುಗು ಪ್ರೇಕ್ಷಕರ ಮನಗೆದ್ದಿದ್ದಾರೆ.

  ಕನ್ನಡದಲ್ಲಿ ಭಾಷಣ ಆರಂಭಿಸಿದ ನಟ ದರ್ಶನ್, ತೆಲುಗಿನಲ್ಲಿಯೇ ಭಾಷಣ ಮಾಡಿದರು. ಮೊದಲಿಗೆ ತೆಲುಗು ಪ್ರೇಕ್ಷಕರಿಗೆ, ತೆಲುಗಿನ ವಿತರಕರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು ನಟ ದರ್ಶನ್.

  ಜಗಪತಿ ಬಾಬು ಬಗ್ಗೆ ವಿಶೇಷವಾಗಿ ಮಾತನಾಡಿದ ನಟ ದರ್ಶನ್, 'ಸಿನಿಮಾದಲ್ಲಿ ರಾಬರ್ಟ್ ಅಲ್ಲ ಹೀರೋ ನಿಜವಾದ ಹೀರೋ ಜಗಪತಿ ಬಾಬು ನಿರ್ವಹಿಸಿರುವ ನಾನಾ ಪಾತ್ರ' ಎಂದರು ದರ್ಶನ್.

  'ನಾವೆಲ್ಲ ಹಣ ಪಡೆದುಕೊಂಡು ನಟಿಸಿಬಿಟ್ಟಿದ್ದೇವೆ ಅಷ್ಟೆ. ಆದರೆ ಸಿನಿಮಾದ ನಿಜವಾದ ಹೀರೋ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು. ಅವರೇ ಈ ಸಿನಿಮಾದ ಜೀವ' ಎಂದು ಹೊಗಳಿದರು.

  'ಕಾರ್ಯಕ್ರಮದಲ್ಲಿ ನಮ್ಮ ತಂದೆ ವಿಲನ್ ಆಗಿದ್ದವರು ಎಂದೆಲ್ಲಾ ವಿಡಿಯೋ ತೋರಿಸಿದರು. ಆದರೆ ನಾನು ಸಿನಿಮಾಕ್ಕೆ ಬರುವ ಮುನ್ನವೇ ತಂದೆಯನ್ನು ಕಳೆದುಕೊಂಡೆ. ಆದರೆ ಅವರೊಟ್ಟಿಗೆ ನಟಿಸಿದ ಹಿರಿಯರೆಲ್ಲಾ ನನಗೆ ತಂದೆ ಸಮಾನ. ನಟ ದೇವರಾಜ್ ಅವರು ನನಗೆ ತಂದೆ ಸಮಾನ, ನಮ್ಮನ್ನು ಹೊಡೆಯುವ, ತಿದ್ದುವ ಅಧಿಕಾರ ಅವರಿಗೆ ಇದೆ. ಅವರೊಟ್ಟಿಗೆ ಈ ಸಿನಿಮಾದಲ್ಲಿ ನಟಿಸಿರುವುದು ನನ್ನ ಭಾಗ್ಯ' ಎಂದಿದ್ದಾರೆ ದರ್ಶನ್.

  ವಿನೋದ್ ಪ್ರಭಾಕರ್ ಗೆ ವಂದಿಸಿದ ಚಾಲೆಂಜಿಂಗ್ ಸ್ಟಾರ್ | Darshan | Vinod Prabhakar | Filmibeat Kannada

  ಬಹು ವಿನಯದಿಂದ ಮಾತನಾಡಿದ ನಟ ದರ್ಶನ್, ವೇದಿಕೆ ಮೇಲಿದ್ದ ಹಿರಿಯರಿಗೆ, ಸಹ ನಟರಿಗೆ ಬಹು ಗೌರವದಿಂದ ಕೈಮುಗಿದು ಮಾತನಾಡಿದರು ನಟ ದರ್ಶನ್. ವಿನೋದ್ ಪ್ರಭಾಕರ್ ಬಗ್ಗೆ ಹಾಗೂ ಅವರ ತಂದೆ ಬಗ್ಗೆಯೂ ಬಹು ಪ್ರೀತಿಯಿಂದ ಮಾತನಾಡಿದರು ನಟ ದರ್ಶನ್.

  English summary
  Darshan speech at Robert pre release program in Hyderabad yesterday. Darshan thanked all seniors and his co actors and actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X