'ಸ್ವಾಭಿಮಾನ' ವೇದಿಕೆಯಲ್ಲಿ ಮಂಡ್ಯ ಜನರ ಪಾದಕ್ಕೆ ನಮಸ್ಕರಿಸಿದ ದರ್ಶನ್
Recommended Video
ಮಂಡ್ಯದಲ್ಲಿ ನಡೆದ 'ಸ್ವಾಭಿಮಾನ ವಿಜಯೋತ್ಸವ' ಕಾರ್ಯಕ್ರಮದಲ್ಲಿ ನೂತನ ಸಂಸದೆ ಮತ್ತು ಜೋಡೆತ್ತುಗಳು ಸ್ವಾಭಿಮಾನದ ವಿಜಯ ಕಹಳೆ ಊದಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನ ಗೆಲ್ಲಿಸಿಕೊಟ್ಟ ಮಂಡ್ಯ ಜನತೆಗೆ ನಟ ದರ್ಶನ್, ಯಶ್, ಅಭಿಷೇಕ್ ಹೃದಯಪೂರ್ವಕವಾಗಿ ಧನ್ಯವಾದ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ''ಮಂಡ್ಯದ ಪ್ರತಿಯೊಬ್ಬರಿಗೂ, ದೊಡ್ಡವರಿಗೆ, ಚಿಕ್ಕವರಿಗೆ ಎಲ್ಲರ ಪಾದಕ್ಕೂ ನಮಸ್ಕಾರ '' ಎಂದು ಕೃತಜ್ಞತೆ ಸಲ್ಲಿಸಿದರು.
'ಸುಮಲತಾ ಅವರನ್ನ ಗೆಲ್ಲಿಸಿ ನಮಗೆ ಪುನಃ ಜನ್ಮ ನೀಡಿದ್ದೀರಾ. ನಿಮ್ಮ ಅಭಿಮಾನಕ್ಕೆ ನಾವು ಸದಾ ಚಿರ ಋಣಿ. ಸಾಯೋವರೆಗೂ ನಿಮಗೆ ಋಣಿಯಾಗಿರುತ್ತೇವೆ' ಎಂದು ಡಿ ಬಾಸ್ ಧನ್ಯವಾದ ತಿಳಿಸಿದರು.

''ಸುಮಲತಾ ಅಮ್ಮ ಸಂಸದೆಯಾಗಿ ಆಯ್ಕೆಯಾಗಿ ಐದು ದಿನ ಆಗಿದೆ. ಇನ್ನು ಪ್ರಮಾಣವಚನ ಕೂಡ ಸ್ವೀಕರಿಸಿಲ್ಲ. ಅವರಿಗೆ ಸಮಯವಕಾಶ ಕೊಡಬೇಕು. ಮಂಡ್ಯ ಅಭಿವೃದ್ದಿಗಾಗಿ ಅವರ ಎಲ್ಲ ರೀತಿಯಲ್ಲೂ ಕೆಲಸ ಮಾಡ್ತಾರೆ'' ಎಂದು ಭರವಸೆ ನೀಡಿದರು.
ಇದಕ್ಕೂ ಮುಂಚೆ ಮಾತನಾಡಿದ ಯಶ್ ಕೂಡ ಮಂಡ್ಯ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಸುಮಲತಾ, ಅಭಿಷೇಕ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ನಟ ಪ್ರೇಮ್ ಸೇರಿದಂತೆ ಹಲವು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


Click it and Unblock the Notifications











