»   » ವೀಕೆಂಡ್ ವಿತ್ ಚಾಲೆಂಜಿಂಗ್ ಸ್ಟಾರ್ 'ದಾಸ' ದರ್ಶನ್

ವೀಕೆಂಡ್ ವಿತ್ ಚಾಲೆಂಜಿಂಗ್ ಸ್ಟಾರ್ 'ದಾಸ' ದರ್ಶನ್

Posted By:
Subscribe to Filmibeat Kannada
ವೀಕೆಂಡ್ ವಿತ್ ಚಾಲೆಂಜಿಂಗ್ ಸ್ಟಾರ್ 'ದಾಸ' ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್.... ಸದ್ಯ 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಾಯಕ. ಹೈದರಾಬಾದ್ ನಲ್ಲಿ 'ಕುರುಕ್ಷೇತ್ರ' ಚಿತ್ರೀಕರಣ ನಡೆಯುತ್ತಿದೆ. ವಾರ ಪೂರ್ತಿ ಶೂಟಿಂಗ್ ನಲ್ಲಿರುವ ದರ್ಶನ್, ವೀಕೆಂಡ್ ನಲ್ಲಿ ಮಾತ್ರ ಬೆಂಗಳೂರಿಗೆ ಹಾಜರ್ ಆಗ್ತಾರೆ.

ಬೆಂಗಳೂರಿಗೆ ಬಂದು ದರ್ಶನ್ ಏನ್ ಮಾಡ್ತಾರೆ.. ಎನ್ನುವ ಪ್ರಶ್ನೆ ಕಾಮನ್ ಆಗಿ ಎಲ್ಲರಲ್ಲೂ ಕಾಡುತ್ತೆ. ದರ್ಶನ್ ಬೆಂಗಳೂರಿಗೆ ಬರೋದು ತಾವು ಪ್ರೀತಿಸೋ ಪ್ರಾಣಿಗಳ ಯೋಗಕ್ಷೇಮ ವಿಚಾರಿಸಲು ಅಂದ್ರೆ ತಪ್ಪಿಲ್ಲ.

ನಿನ್ನೆಯೂ ಕೂಡ ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳ ಜೊತೆ ಕಾಲ ಕಳೆದಿದ್ದಾರೆ. ದರ್ಶನ್ ಜೊತೆಯಲ್ಲಿ ಸ್ನೇಹಿತರು ಕೂಡ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದಾರೆ. ಅಲ್ಲಿಯ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ.

ಫಾರ್ಮ್ ಹೌಸ್ ನಲ್ಲಿ ಬ್ಲಾಕ್ ಹಾರ್ಸ್

ದರ್ಶನ್ ಅವ್ರ ಬಳಿ ಕುದುರೆ ಇರುವ ವಿಚಾರ ಎಲ್ಲರಿಗೂ ತಿಳಿದಿದೆ. ಸಾಮಾನ್ಯವಾಗಿ ಸದಾ ಬಿಳಿ ಕುದುರೆ ಜೊತೆ ಫೋಟೋ ತೆಗೆಸಿಕೊಳ್ತಿದ್ದ ಚಾಲೆಂಜಿಂಗ್ ಸ್ಟಾರ್ ಈ ಬಾರಿ ಬ್ಲಾಕ್ ಬ್ಯೂಟಿ ಜೊತೆ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ.

ವಾರಾಂತ್ಯದಲ್ಲಿ ಸ್ನೇಹಿತರನ್ನ ಭೇಟಿ ಮಾಡುವ ದರ್ಶನ್

ವಾರಾಂತ್ಯದಲ್ಲಿ ದರ್ಶನ್ ತಮ್ಮ ಫಾರ್ಮ್ ಹೌಸ್ ಗೆ ಭೇಟಿ ನೀಡಿ ಪ್ರಾಣಿಗಳ ಯೋಗಕ್ಷೇಮ ವಿಚಾರಿಸುವುದರ ಜೊತೆಗೆ ತಮ್ಮ ಸ್ನೇಹಿತರನ್ನೂ ಮೀಟ್ ಮಾಡಿದ್ದಾರೆ. ಸ್ನೇಹಿತರೆಲ್ಲರ ಜೊತೆಯಲ್ಲೇ ಫೋಟೋ ತೆಗೆಸಿಕೊಂಡಿದ್ದಾರೆ

50 ದಿನಗಳ ಸಂಭ್ರಮದಲ್ಲಿ ತಾರಕ್

ಪ್ರಕಾಶ್ ನಿರ್ದೇಶನದ 'ತಾರಕ್' ಸಿನಿಮಾ ಐವತ್ತು ದಿನಗಳನ್ನ ಪೂರೈಸಿದೆ. ಮೈಸೂರು-ಮಂಡ್ಯದಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇಂದಿಗೂ ಕೆಲ ಚಿತ್ರಮಂದಿರಗಳಲ್ಲಿ 'ತಾರಕ್' ತುಂಬು ಪ್ರದರ್ಶನ ಕಾಣ್ತಿದೆ.

ವಿಡಿಯೋ ಸಾಂಗ್ ಗಾಗಿ ಅಭಿಮಾನಿಗಳಿಂದ ಮನವಿ

'ತಾರಕ್' ಸಿನಿಮಾ ಅರ್ಧ ಶತಕ ಬಾರಿಸಿದೆ. ಅಭಿಮಾನಿಗಳು ಸಿನಿಮಾದ ಹಾಡುಗಳನ್ನ ರಿಲೀಸ್ ಮಾಡುವಂತೆ ಮನವಿ ಮಾಡ್ತಿದ್ದಾರೆ. ಫೇಸ್ ಬುಕ್ ನಲ್ಲಿ ವಿಡಿಯೋ ಸಾಂಗ್ ರಿಲೀಸ್ ಮಾಡಿ ಎಂದು ಕೇಳಿಕೊಳ್ತಿದ್ದಾರೆ.

English summary
Kannada Actor Darshan spends his weekend time with his pets.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada