twitter
    For Quick Alerts
    ALLOW NOTIFICATIONS  
    For Daily Alerts

    ಹೀರೋ ಯಶ್ ಹೇಳಿದ ಮಾತು ಸತ್ಯವಾಗಿದೆ : ದರ್ಶನ್

    |

    Recommended Video

    ಸುಮಲತಾ ಗೆಲುವಿನ ಬಗ್ಗೆ ದಾಸ ಮತ್ತೇನಂದ್ರು ಗೊತ್ತಾ? | FILMIBEAT KANNADA

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ರಾಬರ್ಟ್' ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇಂದು ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ. ಮಂಡ್ಯದಲ್ಲಿ ಅಂಬರೀಶ್ ಹುಟ್ಟುಹಬ್ಬವನ್ನು ಸ್ವಾಭಿಮಾನಿಗಳ ವಿಜಯೋತ್ಸವ ಹೆಸರಿನಲ್ಲಿ ಆಚರಿಸಲಾಗುತ್ತಿದೆ.

    ಈ ಬೃಹತ್ ಸಮಾವೇಶದಲ್ಲಿ ಜೋಡೆತ್ತುಗಳಾದ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಲಿದ್ದಾರೆ. ಸಮಾವೇಶಕ್ಕು ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಮತ್ತು ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ. ಸುಮಲತಾ ಅವರನ್ನು ಗೆಲ್ಲಿಸಿಕೊಟ್ಟ ಮಂಡ್ಯ ಜನರಿಗೆ ಕೃತಜ್ಞತೆ ಪದ ಚಿಕ್ಕದಾಗುತ್ತೆ ಅಂತ ಹೇಳಿದ್ದಾರೆ.

    ಅಂಬರೀಶ್ ಹುಟ್ಟುಹಬ್ಬಕ್ಕೆ ದರ್ಶನ್ ಶುಭಕೋರಿದ್ದು ಹೀಗೆ ಅಂಬರೀಶ್ ಹುಟ್ಟುಹಬ್ಬಕ್ಕೆ ದರ್ಶನ್ ಶುಭಕೋರಿದ್ದು ಹೀಗೆ

    ಸಂದರ್ಶನ ಒಂದರಲ್ಲಿ ಮಾತನಾಡಿದ ದರ್ಶನ್ ಸಾಯುವವರೆಗೂ ಮಂಡ್ಯ ಜನರಿಗೆ ಋಣಿಯಾಗಿರುತ್ತೇವೆ ಎಂದು ಹೇಳಿದ್ದಾರೆ. ಇಂದು ಅಂಬಿ ಹುಟ್ಟುಹಬ್ಬದಲ್ಲಿ ಭಾಗಿಯಾಗುವ ದರ್ಶನ್ ಮಂಡ್ಯದ ಬಗ್ಗೆ, ಚುನಾವಣೆಯ ಬಗ್ಗೆ ಏನೆಲ್ಲ ಹೇಳಿದ್ದಾರೆ?ಮುಂದೆ ಓದಿ..

    ವಿರೋಧಿಗಳಿಗೆ ತಲೆಕೆಡಿಸಿ ಕೊಳ್ಳುವುದಿಲ್ಲ

    ವಿರೋಧಿಗಳಿಗೆ ತಲೆಕೆಡಿಸಿ ಕೊಳ್ಳುವುದಿಲ್ಲ

    ಮಂಡ್ಯ ಚುನಾವಣೆ ವೇಳೆ ನಡೆದ ಟೀಕೆ ಟಿಪ್ಪಣಿಗಳ ಬಗ್ಗೆ ಮಾತನಾಡಲು ದರ್ಶನ್ ನಿರಾಕರಿಸಿದ್ದಾರೆ. ವಿರೋಧಿಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಪ್ರಚಾರದ ವೇಳೆ ಇದೆಲ್ಲ ಸಹಜ. ಅವೆಲ್ಲ ಅಲ್ಲಿಗೆ ಮುಗಿಯಿತು ಅಷ್ಟೆ. ಅದರ ಬಗ್ಗೆ ಈಗ ಮಾತನಾಡುವುದು ಬೇಡ. ಇದಕ್ಕೆಲ್ಲ ಮಂಡ್ಯದ ಜನರೆ ಉತ್ತರಿಸಿದ್ದಾರೆ ಎಂದು ದರ್ಶನ್ ಹೇಳಿದ್ದಾರೆ.

    ಸೆಂಚುರಿಯತ್ತ ಮುನ್ನುಗ್ಗುತ್ತಿರುವ 'ಯಜಮಾನ' ಚಿತ್ರದ ಟೈಟಲ್ ಸಾಂಗ್ ರಿಲೀಸ್ ಸೆಂಚುರಿಯತ್ತ ಮುನ್ನುಗ್ಗುತ್ತಿರುವ 'ಯಜಮಾನ' ಚಿತ್ರದ ಟೈಟಲ್ ಸಾಂಗ್ ರಿಲೀಸ್

    ಮಂಡ್ಯ ಚುನಾವಣೆಯೆ ಬೇರೆಯಾಗಿತ್ತು

    ಮಂಡ್ಯ ಚುನಾವಣೆಯೆ ಬೇರೆಯಾಗಿತ್ತು

    ಇಡೀ ಇಂಡಿಯಾಗೆ ಒಂದು ಚುನಾವಣೆಯಾಗಿದ್ರೆ ಮಂಡ್ಯ ಚುನಾವಣೆಯೆ ಬೇರೆಯಾಗಿತ್ತು. ಅಷ್ಟರ ಮಟ್ಟಿಗೆ ಮಂಡ್ಯ ಜಿಲ್ಲೆಯ ಚುನಾವಣೆ ಕುತೂಹಲ ಕೆರಳಿಸಿತ್ತು. ಚುನಾವಣೆ ಅಂದ್ಮೇಲೆ ಸೋಲು ಗೆಲುವು ಇದ್ದಿದ್ದೆ. ಗೆದ್ದ ಮೇಲೆ ಅದನ್ನು ಉಳಿಸಿಕೊಂಡು ಹೋಗಬೇಕು ಅಷ್ಟೆ ಎಂದಿದ್ದಾರೆ.

    ಹೀರೋ ಯಶ್ ಹೇಳಿದ್ದರು ಅವತ್ತೇ

    ಹೀರೋ ಯಶ್ ಹೇಳಿದ್ದರು ಅವತ್ತೇ

    ಇವತ್ತು ಅಂಬರೀಶ್ ಹುಟ್ಟುಹಬ್ಬ. ಹೀರೋ ಯಶ್ ಅವತ್ತೆ ಹೇಳಿದ್ದರು. ಮೇ 29 ಅಂಬಿ ಹುಟ್ಟುಹಬ್ಬಕ್ಕೆ ಮಂಡ್ಯದ ಜನ 23ಕ್ಕೆ ದೊಡ್ಡ ಗಿಫ್ಟ್ ಕೊಡಲಿದ್ದಾರೆ ಎಂದು. ಆ ಮಾತು ಸತ್ಯ ಆಗಿದೆ. ಅಂಬರೀಶ್ ಹುಟ್ಟುಹಬ್ಬಕ್ಕೆ ದೊಡ್ಡ ಗಿಫ್ಟ್ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಯಶ್ ಮಾತನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ ದರ್ಶನ್.

    ಸಂಸತ್ ಪ್ರವೇಶಿಸಿದ ಚಾಲೆಂಜಿಂಗ್ ಸ್ಟಾರ್ 'ದರ್ಶನ್' ಚಿತ್ರದ ನಾಯಕಿ ಸಂಸತ್ ಪ್ರವೇಶಿಸಿದ ಚಾಲೆಂಜಿಂಗ್ ಸ್ಟಾರ್ 'ದರ್ಶನ್' ಚಿತ್ರದ ನಾಯಕಿ

    ನಮಗೆ ನೀರಿಲ್ಲ, ಇನ್ನ ಕೊಡುವುದೆಲ್ಲಿ

    ನಮಗೆ ನೀರಿಲ್ಲ, ಇನ್ನ ಕೊಡುವುದೆಲ್ಲಿ

    ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುವ ಬಗ್ಗೆ ಪ್ರಧಾಕಾರ ನೀಡಿರುವ ಆದೇಶದ ಬಗ್ಗೆ ದರ್ಶನ್ ಮಾತನಾಡಿದ್ದಾರೆ. ನಮಗೆ ಹೊಟ್ಟೆ ತುಂಬಿದ್ರೆ ಮಾತ್ರ ಬೇರೆಯವರಿಗೆ ಕೊಡಲು ಸಾದ್ಯ. ನಮಗೆ ಇಲ್ಲಿ ಕುಡಿಯಲು ನೀರಿಲ್ಲ. ಇನ್ನ ಕೊಡುವುದೆಲ್ಲಿ. ಒಬ್ಬರ ಊಟವನ್ನು ಹತ್ತು ಜನರಿಗೆ ಹಂಚೋಕೆ ಆಗಲ್ಲ ಎಂದು ಹೇಳಿದ್ದಾರೆ.

    ರಾಜಕೀಯಕ್ಕೆ ಬರ್ತೀರಾ ದರ್ಶನ್?

    ರಾಜಕೀಯಕ್ಕೆ ಬರ್ತೀರಾ ದರ್ಶನ್?

    ಮಂಡ್ಯ ಚುನಾವಣೆ ಪ್ರಚಾರಕ್ಕಾಗಿ ಹಗಲು ರಾತ್ರಿ ಶ್ರಮಮಿಸಿದ ದರ್ಶನ್ ಅವರನ್ನು ನೋಡಿ ಅನೇಕರು ರಾಜಕೀಯ ಬರ್ತಾರಾ ಎನ್ನುವ ಕುತೂಹಲದಲ್ಲಿದ್ದರು. ಈ ಬಗ್ಗೆ ರಾಜಕೀಯಕ್ಕೆ ಬರ್ತೀರಾ ದರ್ಶನ್ ಎಂದು ಕೇಳಿದ್ರೆ, ಈ ಬಗ್ಗೆ ಆಮೇಲೆ ಮಾತಾನೋಣ ಎಂದು ಹೇಳಿದ್ದಾರೆ. ಆದ್ರೆ ಈ ಹಿಂದೆಯಿಂದನೂ ರಾಜಕೀದಿಂದ ದೂರ ಇರುವ ದಚ್ಚು ಯಾವುದೆ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳುತ್ತಲೆ ಬಂದಿದ್ದಾರೆ.

    English summary
    Challenging star Darshan spoke about Ambareesh and Mandya election after sumalatha won the election. He refuse to speak about oppositions parties comments.
    Wednesday, May 29, 2019, 13:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X