ಮಲ್ಟಿಸ್ಟಾರ್ ಸಿನಿಮಾ ಮಾಡೋಕೆ ದರ್ಶನ್ ಹಿಂದೇಟು ಹಾಕುತ್ತಿರುವುದು ಇದೇ ಕಾರಣಕ್ಕೆ!

Recommended Video

Darshan says no to multistarer movies , But why ?

ಬೇರೆ ಇಂಡಸ್ಟ್ರಿಗೆ ಹೋಲಿಸಿಕೊಂಡರೆ ಕನ್ನಡದಲ್ಲಿ ಮಲ್ಟಿಸ್ಟಾರ್ ಚಿತ್ರಗಳು ಬಹಳ ಅಪರೂಪ. ಅಲ್ಲೊಂದು ಇಲ್ಲೊಂದು ಸಿನಿಮಾ ಬಂದ್ರೆ ಅದೇ ಹೆಚ್ಚು. ಕನ್ನಡದಲ್ಲಿ ಮಲ್ಟಿಸ್ಟಾರ್ ಸಿನಿಮಾ ಮಾಡೋಕೆ ಯಾವ ನಟರು ಮುಂದಾಗಲ್ಲ ಎಂದು ಹುಡುಕುತ್ತಾ ಹೋದರೆ ಹಲವು ಕಾರಣಗಳು ಸಿಗುತ್ತೆ.

ಆದರೆ, ಮಲ್ಟಿಸ್ಟಾರ್ ಚಿತ್ರದ ಕುರಿತು ನಟ ದರ್ಶನ್ ಬಹಳ ಮುಕ್ತವಾಗಿ ಮಾತನಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಯಾಕೆ ಇತರೆ ಸ್ಟಾರ್ ನಟರ ಜೊತೆಯಲ್ಲಿ ಸಿನಿಮಾ ಮಾಡಲು ಆಸಕ್ತಿ ತೋರಲ್ಲ ಎನ್ನುವುದಕ್ಕೆ ಇದೇ ಕಾರಣ ಎನ್ನಬಹುದು. ಅಷ್ಟಕ್ಕೂ, ದರ್ಶನ್ ಹೇಳಿದ್ದೇನು? ಮುಂದೆ ಓದಿ....

ಡೈರೆಕ್ಟರ್ ಮೇಲೆ ನಂಬಿಕೆ ಕಮ್ಮಿ

ಡೈರೆಕ್ಟರ್ ಮೇಲೆ ನಂಬಿಕೆ ಕಮ್ಮಿ

ದರ್ಶನ್ ಅವರಿಗೆ ಹೊಸ ನಿರ್ದೇಶಕರ ಮೇಲೆ ನಂಬಿಕೆ ಕಮ್ಮಿ. ಯಾಕಂದ್ರೆ, ಅವರ ಕೆಲಸ ಏನು ಎಂದು ನೋಡಿರುವುದಿಲ್ಲ, ಕಥೆ ಕೇಳುವ ಸಮಯದಲ್ಲಿದ್ದಂತೆ ಸ್ಕ್ರಿಪ್ಟ್ ಸಿನಿಮಾ ಮುಗಿದಮೇಲೆ ಬಂದಿರುವುದಿಲ್ಲ. ಇಂತಹ ಅನುಭವ ಕೆಲವು ಚಿತ್ರಗಳಲ್ಲಿ ದರ್ಶನ್ ಅವರಿಗೆ ಎದುರಾಗಿದೆ. ಹಾಗಾಗಿ, ದರ್ಶನ್ ಅವರು ನಂಬಿಕಸ್ಥ ನಿರ್ದೇಶಕರಿಗೆ ಮಾತ್ರ ಕಾಲ್ ಶೀಟ್ ನೀಡುವುದು ಪದ್ದತಿ.

ಸೆಲೆಕ್ಟೆಡ್ ನಿರ್ದೇಶಕರಿಗೆ ಮಾತ್ರ

ಸೆಲೆಕ್ಟೆಡ್ ನಿರ್ದೇಶಕರಿಗೆ ಮಾತ್ರ

ಹಾಗ್ನೋಡಿದ್ರೆ, ದರ್ಶನ್ ಅವರು ಹಿಂದೂ ಮುಂದೆ ನೋಡದೆ ಎಲ್ಲ ನಿರ್ದೇಶಕರಿಗೂ ಕಾಲ್ ಶೀಟ್ ನೀಡಲ್ಲ. ಅವರ ಕೆಲಸದ ಬಗ್ಗೆ ಗೊತ್ತಿದ್ದು, ಅವರ ಜೊತೆಯಲ್ಲಿ ಕೆಲಸ ಮಾಡಿದ್ದ ಕೆಲವರಿಗೆ ಮಾತ್ರ ಮಣೆ ಹಾಕ್ತಾರೆ. ದರ್ಶನ್ ಅವರ ಚಿತ್ರಗಳನ್ನ ಗಮನಿಸಿದರೆ, ರೆಗ್ಯುಲರ್ ನಿರ್ದೇಶಕರ ಜೊತೆ ಸಿನಿಮಾ ಮಾಡಿರುವುದೇ ಹೆಚ್ಚು.

ನಮ್ಮನ್ನು ಹ್ಯಾಂಡಲ್ ಮಾಡೋ ನಿರ್ದೇಶಕರಿಲ್ಲ

ನಮ್ಮನ್ನು ಹ್ಯಾಂಡಲ್ ಮಾಡೋ ನಿರ್ದೇಶಕರಿಲ್ಲ

ಶಿವರಾಜ್ ಕುಮಾರ್ ಅವರ ಅತ್ತೆ ಮಗ ಧ್ರುವನ್ ಅವರ ಚಿತ್ರದ ಮುಹೂರ್ತಕ್ಕೆ ಡಿ ಬಾಸ್ ಮತ್ತು ಶಿವಣ್ಣ ಒಟ್ಟಿಗೆ ಬಂದಿದ್ದರು. ಈ ವೇಳೆ ಮಾಧ್ಯಮದವರು, ''ಶಿವಣ್ಣ-ದರ್ಶನ್ ಅವರ ಜೋಡಿಯಲ್ಲಿ ಸಿನಿಮಾ ಯಾವಾಗ ನೋಡಬಹುದು'' ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ದರ್ಶನ್ ''ನಮ್ಮನ್ನು ಹ್ಯಾಂಡಲ್ ಮಾಡುವ ನಿರ್ದೇಶಕರಿಲ್ಲ, ಮೊದಲು ಅಂತಹ ಕತೆ ತಗೊಂಡು ಬರಲಿ, ಮಾಡೋಣ'' ಎಂದರು.

ದರ್ಶನ್ ಮಾತು ನಿಜ ಎನಿಸುತ್ತೆ

ದರ್ಶನ್ ಮಾತು ನಿಜ ಎನಿಸುತ್ತೆ

ಒಂದೇ ಚಿತ್ರದಲ್ಲಿ ಇಬ್ಬರು ಸ್ಟಾರ್ ಗಳು ನಟಿಸುತ್ತಿದ್ದಾರೆ ಅಂದ್ರೆ ಆ ಎರಡು ನಟರಿಗೂ ಸಮಾನ ಪಾತ್ರ, ಸಮಾನ ಮಹತ್ವ ಇರಬೇಕು. ಇಲ್ಲ ಅಂದ್ರೆ ಅವರ ಅಭಿಮಾನಿಗಳು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅದರಿಂದ ಫ್ಯಾನ್ಸ್ ವಾರ್ ಹೆಚ್ಚಾಗಬಹುದು. ಹಾಗಾಗಿ, ಇದನ್ನೆಲ್ಲಾ ಬ್ಯಾಲೆನ್ಸ್ ಮಾಡುವ ಸ್ಕ್ರಿಪ್ಟ್ ಮತ್ತು ನಿರ್ದೇಶಕರಿದ್ದರೆ ಮಾತ್ರ ಡಿ ಬಾಸ್ ಸಿನಿಮಾ ಮಾಡ್ತೀನಿ ಅಂತಾರೆ.

'ದಿ ವಿಲನ್' ಸಮಯದಲ್ಲೂ ಆದ ಘಟನೆ ಸ್ಮರಿಸಬಹುದು

'ದಿ ವಿಲನ್' ಸಮಯದಲ್ಲೂ ಆದ ಘಟನೆ ಸ್ಮರಿಸಬಹುದು

ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ನಟನೆಯ ದಿ ವಿಲನ್ ಸಿನಿಮಾ ಬಹಳ ನಿರೀಕ್ಷೆ ಹುಟ್ಟಿಹಾಕಿತ್ತು. ಇವರಿಬ್ಬನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಕಾದು ಕುಂತಿದ್ದರು. ಆದರೆ, ದಿ ವಿಲನ್ ಸಿನಿಮಾ ರಿಲೀಸ್ ಆದ್ಮೇಲೆ, ಶಿವಣ್ಣ ಅಭಿಮಾನಿಗಳು ಮತ್ತು ನಿರ್ದೇಶಕ ಪ್ರೇಮ್ ನಡುವೆ ಕೆಲವು ವಾದ-ವಿವಾದ ಉಂಟಾಗಿತ್ತು. ಈ ಘಟನೆ ಆದ್ಮೇಲೆ ಇಂತಹ ಮಲ್ಟಿಸ್ಟಾರ್ ಚಿತ್ರಗಳು ಬರುವುದು ಈಗ ಕನಸಾಗಿ ಉಳಿದಿದೆ.

More from Filmibeat

English summary
Challenging star darshan dont have intrest to do multi star movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X