ಮೊಟ್ಟ ಮೊದಲ ಸಲ 'ಅಭಿಮನ್ಯು' ನಿಖಿಲ್ ಬಗ್ಗೆ ಮಾತನಾಡಿದ ಡಿ-ಬಾಸ್

Recommended Video

Kurukshetra Movie: ಮೊಟ್ಟ ಮೊದಲ ಸಲ 'ಅಭಿಮನ್ಯು' ನಿಖಿಲ್ ಬಗ್ಗೆ ಮಾತನಾಡಿದ ಡಿ-ಬಾಸ್

ಕುರುಕ್ಷೇತ್ರ ಸಿನಿಮಾ ಆರಂಭವಾದಾಗ ಎಲ್ಲವೂ ಸರಿಯಿತ್ತು. ದರ್ಶನ್ ಅವರ 50ನೇ ಸಿನಿಮಾ ಎಂದೇ ಕುರುಕ್ಷೇತ್ರ ಘೋಷಣೆ ಆಯಿತು. ಅಭಿಮನ್ಯು ಪಾತ್ರದಲ್ಲಿ ನಿಖಿಲ್ ನಟಿಸಿದರು. ಬಹುಶಃ ನಿಖಿಲ್ ಅವರ ಪಾತ್ರ ಈ ಚಿತ್ರದಲ್ಲಿ 10 ನಿಮಿಷ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ನಿರ್ಮಾಪಕರು ಉದ್ದೇಶಪೂರ್ವಕವಾಗಿ ನಿಖಿಲ್ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂತು.

ದರ್ಶನ್ ಅವರ ಚಿತ್ರದಲ್ಲಿ ನಿಖಿಲ್ ಎರಡನೇ ಹೀರೋ ಎಂಬಂತೆ ಬಿಂಬಿಸುತ್ತಿದ್ದಾರೆ ಎಂಬ ಅಭಿಪ್ರಾಯಗಳು ಹುಟ್ಟಿಕೊಂಡವು. ಇಲ್ಲಿಂದ ಡಿ ಫ್ಯಾನ್ಸ್ ಮತ್ತು ನಿಖಿಲ್ ಕುಮಾರ್ ಅಭಿಮಾನಿಗಳ ನಡುವೆ ಸಣ್ಣದಾಗಿ ವಾದ-ಚರ್ಚೆ ನಡೆಯಿತು. ಈ ವಿಚಾರದಲ್ಲಿ ಖುದ್ದು ದರ್ಶನ್ ಅವರೇ ಬೇಸರ ಮಾಡಿಕೊಂಡಿದ್ದಾರೆ ಎನ್ನಲಾಯಿತು. ಬಳಿಕ ಮಂಡ್ಯದಲ್ಲೂ ಇಬ್ಬರು ಎದುರಾಳಿಗಳಂತೆ ಬಿಂಬಿತವಾದರು.

ಆ ಬಳಿಕ ದರ್ಶನ್ ಎಲ್ಲಿಯೂ ಈ ಬಗ್ಗೆ ಮಾತನಾಡಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ನಿಖಿಲ್ ಕುಮಾರ್ ಸ್ಪಷ್ಟನೆ ನೀಡಿದರೂ, ಅದು ನಿರ್ದೇಶಕ ಮತ್ತು ನಿರ್ಮಾಪಕರಿಗೆ ಬಿಟ್ಟಿದ್ದು ನಮಗೆ ಗೊತ್ತಿಲ್ಲ ಎಂದಿದ್ದರು. ಇದೀಗ, ನಿಖಿಲ್ ಬಗ್ಗೆ ಮೊಟ್ಟ ಮೊದಲ ದುರ್ಯೋಧನ ಪ್ರತಿಕ್ರಿಯಿಸಿದ್ದಾರೆ. ಏನಂದ್ರು? ಮುಂದೆ ಓದಿ...

ದುರ್ಯೋಧನ-ಅಭಿಮನ್ಯು ಮುಖಾಮುಖಿ ಇಲ್ಲ

ದುರ್ಯೋಧನ-ಅಭಿಮನ್ಯು ಮುಖಾಮುಖಿ ಇಲ್ಲ

''ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನ ಮತ್ತು ಅಭಿಮನ್ಯು ಎಲ್ಲಿಯೂ ಮುಖಾಮುಖಿ ಆಗಲ್ಲ. ಎಲ್ಲಿಯೂ ಸಂಪರ್ಕವೂ ಇಲ್ಲ. ಅಭಿಮನ್ಯು ಶೂಟಿಂಗ್ ಬೇರೆ ಕಡೆ ಆಗಿದೆ. ದುರ್ಯೋಧನ ಭಾಗದ ಶೂಟಿಂಗ್ ಬೇರೆ ಕಡೆ ಆಗಿದೆ'' ಎಂದು ಹೇಳುವ ಮೂಲಕ ತಮ್ಮಿಬ್ಬರ ನಡುವೆ ಯಾವುದೇ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಬ್ಬಿಂಗ್ ನಲ್ಲಿ ಅಭಿಮನ್ಯು ನೋಡಿದೆ

ಡಬ್ಬಿಂಗ್ ನಲ್ಲಿ ಅಭಿಮನ್ಯು ನೋಡಿದೆ

''ಡಬ್ಬಿಂಗ್ ಮಾಡುವಾಗ ಅಭಿಮನ್ಯು ಪಾತ್ರ ನೋಡಿದೆ. ಒಳ್ಳೆಯ ಅವಕಾಶ ಸಿಕ್ಕಾಗ ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ'' ಎಂದು ಡಿ ಬಾಸ್ ನಿಖಿಲ್ ಬಗ್ಗೆ ಮಾತನಾಡಿದ್ದಾರೆ. ಬಟ್, ನಿಖಿಲ್ ಕುಮಾರ್ ಅವರು ಈ ಸುದ್ದಿಗೋಷ್ಠಿಯಲ್ಲೂ ಭಾಗವಹಿಸಿಲ್ಲ ಎಂಬುದು ಮತ್ತೆ ಚರ್ಚೆಗೆ ಕಾರಣವಾಗಿದೆ.

ಫ್ಯಾನ್ಸ್ ವಾರ್ ಬಗ್ಗೆಯೂ ಟಾಕ್

ಫ್ಯಾನ್ಸ್ ವಾರ್ ಬಗ್ಗೆಯೂ ಟಾಕ್

ದರ್ಶನ್ ಫ್ಯಾನ್ಸ್ ಮತ್ತು ನಿಖಿಲ್ ಕುಮಾರ್ ಫ್ಯಾನ್ಸ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾದ ಮತ್ತು ವಿವಾದಗಳು ನಡೆದಿವೆ, ನಡೆಯುತ್ತಿವೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ದಾಸ ''ಸಿನಿಮಾ ರಿಲೀಸ್ ಆಗುವವರೆಗೂ ಮಾತನಾಡದೇ ಇರುವುದು ಉತ್ತಮ'' ಎಂದು ಅಭಿಮಾನಿಗಳನ್ನ ತಣ್ಣಗಾಗಿಸುವ ಪ್ರಯತ್ನ ಮಾಡಿದ್ರು.

ಡಿ ಬಾಸ್ ಬಗ್ಗೆ ನಿಖಿಲ್ ಮಾತನಾಡಿದ್ದರು

ಡಿ ಬಾಸ್ ಬಗ್ಗೆ ನಿಖಿಲ್ ಮಾತನಾಡಿದ್ದರು

''ನಾನು ಈಗ ಕಣ್ಣು ಬಿಡುತ್ತಿರುವ ಕಲಾವಿದ, ದರ್ಶನ್ ಅವರ ಬಗ್ಗೆ ಗೌರವ ಇದೆ. ದರ್ಶನ್ ಅವರ ಕೊಡುಗೆ ಬಹಳ ದೊಡ್ಡದಿದೆ. ಇಂಡಸ್ಟ್ರಿಗೆ ಬಹಳಷ್ಟು ದೊಡ್ಡ ದೊಡ್ಡ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಕೆಲವು ಸಂದರ್ಭಗಳಲ್ಲಿ ಹಾಗೆ ಆಗುತ್ತದೆ. ಮಂಡ್ಯ ಚುನಾವಣೆ ಸಮಯದಲ್ಲಿ ನನ್ನ ಮತ್ತು ದರ್ಶನ್ ನಡುವೆ ವೈಯಕ್ತಿಕವಾಗಿ ಮನಸ್ತಾಪ ಇದೆಯೇ ಎನ್ನುವ ಪ್ರಶ್ನೆ ಉದ್ಭವ ಆಗುತ್ತದೆ. ಆದರೆ, ಚುನಾವಣೆಯನ್ನು ಅದರ ರೀತಿಯೇ ನಡೆಸಬೇಕಾಗುತ್ತದೆ. ಅದೇ ರೀತಿ ಇರಬೇಕಾಗುತ್ತದೆ. ನನಗೆ ಅವರ ಮೇಲೆ ಗೌರವ ಇದೆ. ಅವರಿಗೂ ನನ್ನ ಮೇಲೆ ಗೌರವ ಇದೆ'' ಎಂದು ನಿಖಿಲ್ ಹೇಳಿದ್ದರು.

More from Filmibeat

English summary
Kannada actor darshan spoke about his co star nikhil kumar. nikhil done abhimanyu character in kurukshetra, darshan played duryodhana role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X