ಅಭಿಮಾನಿಗಳು ಹಾಗೂ ಹುಟ್ಟುಹಬ್ಬದ ಬಗ್ಗೆ ದರ್ಶನ್ ಅಭಿಪ್ರಾಯ ಹೀಗಿದೆ
42 ನೇ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿರುವ ದರ್ಶನ್ ಇದೇ ಮೊದಲ ಬಾರಿಗೆ ದಿನ ಪೂರ್ತಿ ಅಭಿಮಾನಿಗಳ ಜೊತೆ ಸಮಯ ಕಳೆಯಲು ನಿರ್ಧಾರ ಮಾಡಿದ್ದಾರೆ. ಪ್ರತಿ ವರ್ಷ ಮಧ್ಯಾಹ್ನನ ವರೆಗೂ ಬರ್ತಡೇ ಮಾಡಿಕೊಂಡು ನಂತರ ಸಿನಿಮಾ ಕೆಲಸಗಳಲ್ಲಿ ಭಾಗಿ ಆಗುತ್ತಿದ್ದರು.
ಈ ಬಾರಿ ರಾಜ್ಯದ ಅನೇಕ ಕಡೆಗಳಿಂದ ಅಭಿಮಾನಿಗಳು ಡಿ ಬಾಸ್ ನೋಡಲು ಬಂದಿದ್ದಾರೆ. ಇದೇ ಕಾರಣದಿಂದಾಗಿ ದರ್ಶನ್ ಬಂದಿರುವ ಪ್ರತಿ ಅಭಿಮಾನಿಯನ್ನು ಭೇಟಿ ಮಾಡಿಯೇ ಕಳುಹಿಸುವ ನಿರ್ಧಾರ ಮಾಡಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದರ್ಶನ್ ತಮ್ಮ ಅಭಿಮಾನಿಗಳ ಬಗ್ಗೆ ಹಾಗೂ ಹುಟ್ಟುಹಬ್ಬದ ಬಗ್ಗೆ ಮಾತನಾಡಿದ್ದಾರೆ. ಇತ್ತಿಚಿಗಷ್ಟೇ ಸಾವನ್ನಪ್ಪಿದ ರೇವಂತ್ ಬಗ್ಗೆಯೂ ಡಿ ಬಾಸ್ ಮಾತನಾಡಿದ್ದಾರೆ. ಹಾಗಾದರೆ ದರ್ಶನ್ ಏನೆಲ್ಲಾ ಮಾತನಾಡಿದ್ದಾರೆ ಎಂದು ತಿಳಿಯಲು ಮುಂದೆ ಓದಿ.

ಅಭಿಮಾನಿಗಳು ಇಲ್ಲಾ ಅಂದರೆ ನಾನು ಝೀರೋ
ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳ ಬಗ್ಗೆ ದರ್ಶನ್ ತಮ್ಮ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ. "ಅವರ ಪ್ರೀತಿಯ ಮುಂದೆ ನಾನು ಏನು ಇಲ್ಲ. ಡಿ ಉತ್ಸವ ಎನ್ನುವ ಹೆಸರಿನಲ್ಲಿ ಹುಟ್ಟುಹಬ್ಬದ ಆಚರಣೆ ನಡೆಯುತ್ತಿದೆ. ಅದು ಅಭಿಮಾನಿಗಳು ಹಾಕಿದ ಭಿಕ್ಷೆ" ಎಂದಿದ್ದಾರೆ.

ಹಚ್ಚೆ ಹಾಕಿದವರನ್ನ ಭೇಟಿ ಮಾಡಲು ಇಷ್ಟವಿಲ್ಲ
ಇದೇ ಸಮಯದಲ್ಲಿ ಮೈ ತುಂಬಾ ಹಚ್ಚೆ ಹಾಕಿಸಿಕೊಂಡವರನ್ನ ಭೇಟಿ ಮಾಡಲು ಇಷ್ಟ ಪಡುವುದಿಲ್ಲ ಎಂದು ದರ್ಶನ್ ತಿಳಿಸಿದ್ದಾರೆ. ನೋವು ಮಾಡಿಕೊಂಡು ನನ್ನನ್ನು ಖುಷಿ ಪಡಿಸುವ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ ಡಿ ಬಾಸ್.

ಸಾವಿಗೀಡಾದ ಅಭಿಮಾನಿಯ ಬಗ್ಗೆ ಬೇಸರ
ಶಿವಮೊಗ್ಗದಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ ರೇವಂತ್ ಅವರನ್ನ ನೆನಪು ಮಾಡಿಕೊಂಡು ದರ್ಶನ್ ಬೇಸರ ವ್ಯಕ್ತ ಪಡಿಸಿದ್ದಾರೆ. ಮನೆಯ ಬಳಿ ಬಂದಾಗ ರೇವಂತ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದಿದ್ದಾರೆ.

ಯಾರಿಗೂ ತೊಂದರೆ ಆಗಬಾರದು
ಅಭಿಮಾನಿಗಳೆಲ್ಲರೂ ಸೇರಿ ಡಿ ಉತ್ಸವ ಹೆಸರಿನಲ್ಲಿ ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವ ಮುಖ್ಯ ಉದ್ದೇಶ ಅಕ್ಕ ಪಕ್ಕದ ಮನೆಯವರಿಗೆ ಯಾವುದೇ ರೀತಿ ತೊಂದರೆ ಆಗಬಾರದು ಎಂದು. ಅಷ್ಟೇ ಅಲ್ಲದೆ ನೆರೆ ಮನೆಯವರ ಆಸ್ತಿಗಳಿಗೆ ಹಾನಿ ಮಾಡದಂತೆ ಖುದ್ದು ದರ್ಶನ್ ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದಾರಂತೆ.


Click it and Unblock the Notifications











