ಅಂದು-ಇಂದು ಕನ್ನಡಕ್ಕೆ ಒಬ್ಬರೇ ಯಜಮಾನ !

By Pavithra

Recommended Video

ದರ್ಶನ ಅವರ 51ನೇ ಸಿನಿಮಾದ ಹೆಸರು ಏನು ಗೊತ್ತಾ ? | FIlmibeat Kannada

ದರ್ಶನ್ ಅಭಿನಯದ 51 ನೇ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಯಜಮಾನನಾಗಿ ದರ್ಶನ್ ಬೆಳ್ಳೆ ಪರದೆ ಮೇಲೆ ಎಂಟ್ರಿ ಕೊಡಲಿದ್ದಾರೆ. ಈ ಹಿಂದೆ ಯಜಮಾನ ಅಂದ ತಕ್ಷಣ ಎಲ್ಲರಿಗೂ ನೆನಪು ಬರುತ್ತಿದ್ದ ನಟ ಅಂದರೆ ಡಾ ವಿಷ್ಣುವರ್ಧನ್ .

ಆದರೆ ಈಗ ಅದೇ ಹೆಸರಿನ ಚಿತ್ರದಲ್ಲಿ ದರ್ಶನ್ ಆಕ್ಟ್ ಮಾಡುತ್ತಿದ್ದಾರೆ. ಮಹೂರ್ತ ಮುಗಿಸಿ ಇನ್ನೆರೆಡು ದಿನಗಳಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲಿದೆ ಯಜಮಾನ ಚಿತ್ರತಂಡ. ಹದಿನೈದು ದಿನಗಳಿಂದ ಗುಟ್ಟಾಗಿ ಇಟ್ಟಿದ್ದ ಟೈಟಲ್ ಇಂದು (ಫೆ.16) ರಿವಿಲ್ ಆಗಿದೆ.

ಅಭಿಮಾನಿಗಳು ಯಜಮಾನ ಟೈಟಲ್ ಅನ್ನು ತುಂಬಾ ಇಷ್ಟ ಪಟ್ಟಿದ್ದಾರೆ. ಖುಷಿಯಿಂದ ದರ್ಶನ್ ಅವರನ್ನ ಯಜಮಾನನಾಗಿ ನೋಡಲು ಈಗಿನಿಂದಲೇ ಕಾತುರರಾಗಿದ್ದಾರೆ. ಯಜಮಾನ ಚಿತ್ರದ ಬಗ್ಗೆ ಟೈಟಲ್ ಬಗ್ಗೆ ದಚ್ಚು ಏನು ಹೇಳುತ್ತಾರೆ? ವಿಷ್ಣುವರ್ಧನ್ ವಿಚಾರವಾಗಿ ದರ್ಶನ್ ಹೇಳಿದ ಮಾತುಗಳೇನು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ .

ಯಜಮಾನ ಆದ ದರ್ಶನ್

ಯಜಮಾನ ಆದ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಕನ್ನಡ ಸಿನಿಮಾರಂಗದ ಯಜಮಾನ. ತಮ್ಮ 51ನೇ ಚಿತ್ರಕ್ಕೆ ಈ ಟೈಟಲ್ ಫಿಕ್ಸ್ ಆಗಿದ್ದು ದರ್ಶನ್ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಅಭಿನಯಿಸುತ್ತಿದ್ದಾರೆ.

ವಿಷ್ಣುವರ್ಧನ್ ಯಜಮಾನ ಎಂದ ದಚ್ಚು

ವಿಷ್ಣುವರ್ಧನ್ ಯಜಮಾನ ಎಂದ ದಚ್ಚು

ಯಜಮಾನ ಚಿತ್ರದ ಬಗ್ಗೆ ಎಲ್ಲಿಯೂ ಮಾತನಾಡದ ದರ್ಶನ್ ಇದೇ ಮೊದಲ ಬಾರಿಗೆ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ. ಯಜಮಾನ ಎಂದಿಗೂ ವಿಷ್ಣುವರ್ಧನ್ ಅವರು ಮಾತ್ರ ಎಂದಿದ್ದಾರೆ.

ಯಜಮಾನ ಹೆಸರಿನಲ್ಲಿ ಚಿತ್ರ ಮಾಡುತ್ತಿರುವುದು ಖುಷಿ

ಯಜಮಾನ ಹೆಸರಿನಲ್ಲಿ ಚಿತ್ರ ಮಾಡುತ್ತಿರುವುದು ಖುಷಿ

ಚಿತ್ರರಂಗಕ್ಕೆ ಒಬ್ಬರೇ ಯಜಮಾನ ಅದು ವಿಷ್ಣುವರ್ಧನ್ ಎಂದು ಹೇಳಿದ ದರ್ಶನ್ ಆ ಹೆಸರಿನ ಸಿನಿಮಾದಲ್ಲಿ ಅಭಿನಯ ಮಾಡುತ್ತಿರುವುದು ಖುಷಿ. 18 ವರ್ಷದ ನಂತರ ಅದೇ ಟೈಟಲ್ ನ ಚಿತ್ರದಲ್ಲಿ ಭಾಗಿ ಆಗುತ್ತಿದ್ದೇನೆ ಎಂದಿದ್ದಾರೆ.

ಕಂಪ್ಲೀಟ್ ಎಂಟರ್ಟೈನ್ಮೆಂಟ್ ಚಿತ್ರ

ಕಂಪ್ಲೀಟ್ ಎಂಟರ್ಟೈನ್ಮೆಂಟ್ ಚಿತ್ರ

ಹಿಂದೆ ಬಿಡುಗಡೆ ಆಗಿದ್ದ ಯಜಮಾನ ಸಿನಿಮಾ ಫ್ಯಾಮಿಲಿ ಎಂಟ್ರಟೈನ್ಮೆಂಟ್ ಜೊತೆಯಲ್ಲಿ ಸೆಂಟಿಮೆಂಟ್ ಕೂಡ ಇತ್ತು. ದರ್ಶನ್ ಅಭಿನಯಿಸುತ್ತಿರುವ ಸಿನಿಮಾ ಕೂಡ ಕಮರ್ಷಿಯಲ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಇರುವ ಚಿತ್ರ ಆಗಲಿದೆ.

More from Filmibeat

English summary
Kannada actor Darshan is the hero in the Yajamana movie,The director of PK Kumar is directing the film, Darshan spoke about Vishnuvardhan and Yajamana title.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X