ಶುರುವಾಯ್ತು ಯಜಮಾನನ ದರ್ಬಾರ್

By Pavithra

Recommended Video

ದರ್ಶನ್ ಅವರ ಯಜಮಾನನ ಚಿತ್ರೀಕರಣ ಶುರು | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಹುಟ್ಟುಹಬ್ಬಕ್ಕಾಗಿ ಬ್ರೇಕ್ ತೆಗೆದುಕೊಂಡಿದ್ದ ಡಿ ಬಾಸ್ ಹುಟ್ಟು ಹಬ್ಬ ಮುಗಿದ ತಕ್ಷಣವೇ ಯಜಮಾನನಾಗಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

ಸಿನಿಮಾದ ಟೈಟಲ್ ಕೇಳಿದರೇ ಸಾಕಷ್ಟು ನಿರೀಕ್ಷೆಗಳು ಮೂಡುವಂತಹ ಸಿನಿಮಾದಲ್ಲಿ ಡಿ ಬಾಸ್ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆದೆ. ಸದ್ಯ ದರ್ಶನ್ ಯಜಮಾನನ ಗೆಟಪ್ ತುಂಬಾ ವಿಭಿನ್ನವಾಗಿಯೇ ಇದೆ ಅನ್ನುವುದು ತಿಳಿದು ಬಂದಿದೆ.

ದರ್ಶನ್ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಈಗಾಗಲೇ ಫಿದಾ ಆಗಿದ್ದಾರೆ. ಹಾಗಾದರೇ ದರ್ಶನ್ ಹೊಸ ಗೆಟಪ್ ಹೇಗಿದೆ? ಯಜಮಾನ ಸಿನಿಮಾದ ಚಿತ್ರೀಕರಣ ಎಲ್ಲಿ ನಡೆಯುತ್ತಿದೆ. ಶೂಟಿಂಗ್ ನಲ್ಲಿ ಯಾರೆಲ್ಲಾ ಭಾಗಿ ಆಗಿದ್ದಾರೆ ಸಂಪೂರ್ಣ ಮಾಹಿತಿ ನಿಮಗಾಗಿ ಇಲ್ಲಿದೆ. ಮುಂದೆ ಓದಿ

ಯಜಮಾನ ಆದ ದರ್ಶನ್

ಯಜಮಾನ ಆದ ದರ್ಶನ್

ದರ್ಶನ್ ಅಭಿನಯದ 51 ನೇ ಸಿನಿಮಾ ಯಜಮಾನ ಚಿತ್ರೀಕರಣ ಶುರು ಆಗಿದೆ. ಡಿ ಬಾಸ್ ಈ ಚಿತ್ರದಲ್ಲಿ ಪಕ್ಕ ಕನ್ನಡದ ಮಣ್ಣಿನ ಮಗನ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಹಾಕಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

ದರ್ಶನ್ ತವರೂರಿನಲ್ಲಿ ಚಿತ್ರೀಕರಣ

ದರ್ಶನ್ ತವರೂರಿನಲ್ಲಿ ಚಿತ್ರೀಕರಣ

ದರ್ಶನ್ ಅವರ ಹುಟ್ಟಿದ ಊರಾದ ಮೈಸೂರಿನಲ್ಲಿ ಯಜಮಾನ ಸಿನಿಮಾದ ಚಿತ್ರೀಕರಣ ಶುರು ಆಗಿದೆ. ಚಿತ್ರೀಕರಣಕ್ಕಾಗಿ ಸಿನಿಮಾ ತಂಡ ಬೃಹತ್ ಮತ್ತು ಅದ್ದೂರಿ ಆಗಿರುವ ಸೆಟ್ ಅನ್ನು ಹಾಕಲಾಗಿದೆ.

ರಶ್ಮಿಕಾ ಹಾಗೂ ಧನಂಜಯ

ರಶ್ಮಿಕಾ ಹಾಗೂ ಧನಂಜಯ

ಯಜಮಾನ ಸಿನಿಮಾದ ಚಿತ್ರೀಕರಣದಲ್ಲಿ ದರ್ಶನ್ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಧನಂಜಯ ಭಾಗಿ ಆಗಿದ್ದಾರೆ. ಕೃತಕವಾಗಿ ಹಾಕಲಾಗಿರುವ ಸೆಟ್ ನಲ್ಲಿ ಶೂಟಿಂಗ್ ಆರಂಭ ಆಗಿದೆ.

ಸಿನಿಮಾದಲ್ಲಿರಲಿದೆ ಪ್ರಾಣಿಗಳು

ಸಿನಿಮಾದಲ್ಲಿರಲಿದೆ ಪ್ರಾಣಿಗಳು

ಒಂದು ಸಿನಿಮಾದ ನಂತರ ಮತ್ತೊಂದು ಚಿತ್ರದಲ್ಲಿ ಭಾಗಿ ಆಗುವ ದರ್ಶನ್ ಸದ್ಯ ಯಜಮಾನ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಹಾಕಿರುವ ಸೆಟ್ ನಲ್ಲಿ ಚಿತ್ರೀಕರಣ ಮುಗಿದ ನಂತ್ರ ರಿಯಲ್ ಲೊಕೇಷನ್ಸ್ ನಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ.

More from Filmibeat

English summary
Kannada actor Darshan starred Yajamana movie shooting start from yesterday(feb 19). Rashmika Mandanna and Dhananjaya are involved in the shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X