ದರ್ಶನ್‌ಗಾಗಿ 'ಏನ್ ಬುಲ್ ಬುಲ್ ಮಾತಾಡಕಿಲ್ವಾ' ಎಂದಿದ್ದ ಸ್ಟಾರ್ಸ್: ಕಿಚ್ಚ, ಯಶ್, ರಾಧಿಕಾ, ಜಗ್ಗಣ್ಣ ಡೈಲಾಗ್ ಮಜಾ ಇದೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಬುಲ್ ಬುಲ್' ಸಿನಿಮಾ 10 ವರ್ಷ ಪೂರೈಸಿದೆ. ಎಂ. ಡಿ ಶ್ರೀಧರ್ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ರಚಿತಾ ರಾಮ್ ಇದೇ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಚಿತ್ರದ ಪ್ರಮೋಷನ್‌ಗಾಗಿ ಅಂದು ಮಾಡಿದ್ದ ಸ್ಪೆಷಲ್ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಈ 10 ವರ್ಷಗಳಲ್ಲಿ ಏನೆಲ್ಲಾ ಬದಲಾವಣೆ ಆಗಿದೆ. ಯಾರೆಲ್ಲಾ ದೂರಾಗಿದ್ದಾರೆ. ಯಾರೆಲ್ಲಾ ಹತ್ತಿರವಾಗಿದ್ಧಾರೆ. ಕೆಲವರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಆದ್ರೆ ಅಂದು ದರ್ಶನ್ ಚಿತ್ರಕ್ಕಾಗಿ ಇಡೀ ಚಿತ್ರರಂಗ ಬೆಂಬಲವಾಗಿ ನಿಂತಿತ್ತು. 'ನಾಗರಹಾವು' ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಹೇಳಿದ್ದ 'ಏನ್ ಬುಲ್ ಬುಲ್ ಮಾತಡಕ್ಕಿಲ್ವಾ' ಸೂಪರ್ ಹಿಟ್ ಆಗಿತ್ತು. ಅದೇ ಟೈಟಲ್‌ನ 'ಬುಲ್ ಬುಲ್' ಎನ್ನುವ ಟೈಟಲ್‌ನಲ್ಲಿ ಸಿನಿಮಾ ಮಾಡಲಾಗಿತ್ತು. ಹಾಗಾಗಿ 'ಏನ್ ಬುಲ್ ಬುಲ್ ಮಾತಾಡಕಿಲ್ವಾ' ಡೈಲಾಗ್‌ನ ಸ್ಟಾರ್‌ಗಳು ತಮ್ಮದೇ ಸ್ಟೈಲ್‌ನಲ್ಲಿ ಹೇಳಿ ಒಂದು ವಿಡಿಯೋ ಮಾಡಿ ಪ್ರಚಾರಕ್ಕೆ ಬಳಸಿಕೊಳ್ಳಲಾಗಿತ್ತು.

Darshan Starrer Bulbul completes 10 years

ದರ್ಶನ್- ಸುದೀಪ್ ಆಗ ಆತ್ಮೀಯ ಸ್ನೇಹಿತರಾಗಿದ್ದರು. ಹಾಗಾಗಿ ಸುದೀಪ್ ಕೂಡ ಡೈಲಾಗ್ ಹೇಳಿ 'ಬುಲ್ ಬುಲ್' ಚಿತ್ರಕ್ಕೆ ಶುಭ ಕೋರಿದ್ದರು. ಇನ್ನು ನಟ ಜಗ್ಗೇಶ್, ಯಶ್, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಉಪೇಂದ್ರ, ಪ್ರಜ್ವಲ್, ಯೋಗಿ, ಧ್ರುವ ಸರ್ಜಾ, ಚಿರು ಸರ್ಜಾ, ಕಿಟ್ಟಿ, ಶ್ರೀಮುರಳಿ, ದುನಿಯಾ ವಿಜಯ್, ಸಾಧು ಕೋಕಿಲ ಇನ್ನು ನಟಿಯರಾದ ರಾಧಿಕಾ ಪಂಡಿತ್, ರಾಧಿಕಾ ಕುಮಾರಸ್ವಾಮಿ, ಅಮೂಲ್ಯ, ರಾಗಿಣಿ, ಪ್ರಣೀತಾ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರನ್ನೆಲ್ಲಾ ಒಂದೇ ವಿಡಿಯೋದಲ್ಲಿ ನೋಡಬಹುದು.

ಒಬ್ಬರಿಗಿಂತ ಒಬ್ಬರು ಬಹಳ ವಿಭಿನ್ನವಾಗಿ ತಮ್ಮದೇ ಸ್ಟೈಲ್‌ನಲ್ಲಿ ಡೈಲಾಗ್‌ ಹೇಳಿ ಮಿಂಚಿದ್ದರು. ಉಪೇಂದ್ರ, ಯಶ್, ರಾಧಿಕಾ ಪಂಡಿತ್, ಜಗ್ಗೇಶ್, ಅಮೂಲ್ಯ ಹಾಗೂ ದುನಿಯಾ ವಿಜಯ್ ಡೈಲಾಗ್ ಸ್ಟೈಲ್ ಅಂತೂ ಸಿಂಪ್ಲಿ ಸೂಪರ್. ನಿಜಕ್ಕೂ ಇದು ಬಹಳ ಡಿಫ್‌ರೆಂಟ್ ವಿಡಿಯೋ. ಕನ್ನಡ ಸಿನಿರಸಿಕರ ನೆನಪಿನಲ್ಲಿ ಸದಾ ಉಳಿಯುವಂತದ್ದು. ಇನ್ನು ಈ ವಿಡಿಯೋದಲ್ಲಿ ಡೈಲಾಗ್ ಹೇಳಿದ್ದ ಚಿರು ಸರ್ಜಾ, ಬುಲ್ ಪ್ರಕಾಶ್ ಈಗ ನಮ್ಮೊಟ್ಟಿಗೆ ಇಲ್ಲ.

Darshan Starrer Bulbul completes 10 years

ಟಾಲಿವುಡ್‌ನ 'ಡಾರ್ಲಿಂಗ್' ರೀಮೆಕ್ 'ಬುಲ್‌ ಬುಲ್'. ತೆಲುಗಿನಲ್ಲಿ ಪ್ರಭಾಸ್ ಹಾಗೂ ಕಾಜಲ್ ಅಗರ್‌ವಾಲ್ ಮಾಡಿದ್ದ ಪಾತ್ರಗಳನ್ನು ಕನ್ನಡದಲ್ಲಿ ದರ್ಶನ್ - ರಚಿತಾ ರಾಮ್ ಮಾಡಿದ್ದರು. ಇನ್ನು ಫ್ಲಾಶ್‌ಬ್ಯಾಕ್‌ನ ಮಾತ್ರ ಹಾಲಿಲಿವುಡ್‌ನ '50 ಫಸ್ಟ್ ಡೇಟ್ಸ್' ಸಿನಿಮಾದಿಂದ ಪ್ರೇರಣೆಗೊಂಡು ಕಟ್ಟಿಕೊಡಲಾಗಿತ್ತು. ಮೊದಲಿಗೆ ನಾಯಕಿ ಪಾತ್ರಕ್ಕೆ ರಮ್ಯಾ ಹೆಸರು ಕೇಳಿಬಂದಿತ್ತು. ಆದರೆ ಕೊನೆಗೆ ರಚಿತಾ ರಾಮ್ ಆಡಿಯನ್‌ನಲ್ಲಿ ಆಯ್ಕೆ ಆಗಿದ್ದರು. ಒಂದೆರಡು ಧಾರಾವಾಹಿಗಳಲ್ಲಿ ನಟಿಸಿದ್ದ ಬಿಂದ್ಯಾ ರಾಮ್ ತಮ್ಮ ಹೆಸರನನ್ನು ರಚಿತಾರಾಮ್ ಎಂದು ಬದಲಿಸಿಕೊಂಡು ನಟಿಸಿದ್ದರು.

ವಿ. ಹರಿಕೃಷ್ಣ ಸಂಗೀತ 'ಬುಲ್‌ ಬುಲ್' ಚಿತ್ರಕ್ಕೆ ಪ್ಲಸ್ ಆಗಿತ್ತು. ಎಲ್ಲಾ ಹಾಡುಗಳಿಗೆ ಕವಿರಾಜ್ ಸಾಹಿತ್ಯ ಬರೆದಿದ್ದರು. ದರ್ಶನ್ ತಂದೆ ಪಾತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಕಾಣಿಸಿಕೊಂಡಿದ್ದರು. 2013, ಮೇ 10ರಂದು 180ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಕಂಡಿತ್ತು. ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸ್ವತಃ ದರ್ಶನ್ ಸಿನಿಮಾ ನಿರ್ಮಾಣ ಮಾಡಿದ್ದರು. ಅಂದಾಜು 12 ಕೋಟಿ ರೂ. ಬಜೆಟ್ ಸಿನಿಮಾ 25 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ಸೂಪರ್ ಹಿಟ್ ಲಿಸ್ಟ್ ಸೇರಿಕೊಂಡಿತ್ತು.

More from Filmibeat

English summary
Darshan Starrer Bulbul completes 10 years; romantic comedy film promotional video goes viral. Sudeep, Yash, Radhika Pandit, Upendra and many Sandalwood celebrities Says Bul Bul mathadakilva dialogue. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X