India
  For Quick Alerts
  ALLOW NOTIFICATIONS  
  For Daily Alerts

  ವರಮಹಾಲಕ್ಷ್ಮಿ ಹಬ್ಬಕ್ಕೆ ದರ್ಶನ್ ಕಡೆಯಿಂದ ಬಿಗ್ ಸರ್ಪ್ರೈಸ್!

  |

  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಕ್ರಾಂತಿ' ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಇನ್ನು ಕೆಲವು ಹಂತದ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಜುಲೈ ಅಂತ್ಯದ ವೇಳೆಗೆ 'ಕ್ರಾಂತಿ' ಸಿನಿಮಾವನ್ನು ದರ್ಶನ್ ಮುಗಿಸಲಿದ್ದಾರೆ.

  'ಕ್ರಾಂತಿ' ಬಳಿಕ ದರ್ಶನ್ ತಮ್ಮ 56ನೇ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರಕ್ಕಾಗಿ ಈಗಾಗಲೇ ದರ್ಶನ್ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

  ಒಂದಾಗ್ತಿದ್ದಾರೆ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್!ಒಂದಾಗ್ತಿದ್ದಾರೆ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್!

  ಮತ್ತೊಂದ್ಕಡೆ 'ಡಿ 56' ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಕೂಡ ಮುಗಿಯುವ ಹಂತಕ್ಕೆ ಬಂದಿತ್ತು. ಸಿನಿಮಾ ಲಾಂಚ್‌ಗೆ ಚಿತ್ರತಂಡ ಸಿದ್ಧವಾಗಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ಕೊಟ್ಟಿದ್ದಾರೆ.

  D 56ಗೆ ಮುಹೂರ್ತ ಫಿಕ್ಸ್!

  D 56ಗೆ ಮುಹೂರ್ತ ಫಿಕ್ಸ್!

  ದರ್ಶನ್ ಮುಂದಿನ ಸಿನಿಮಾ D 56 ಚಿತ್ರಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಇನ್ನೇನಿದ್ದರೂ ಸಿನಿಮಾ ಸೆಟ್ಟೇರಬೇಕಿದೆ. ಚಿತ್ರದ ಲಾಂಚ್‌ಗಾಗಿ ಸಿನಿಮಾ ತಂಡ ಸಾಕಷ್ಟು ತಯಾರಿಯನ್ನು ಈಗಾಗಲೇ ಮಾಡಿ ಮುಗಿಸಿದೆ. ಈ ಬಗ್ಗೆ ಬಹಿರಂಗವಾಗಿ ಸ್ಪಷ್ಟ ಹೇಳಿಕೆಯನ್ನು ಕೊಟ್ಟಿದ್ದಾರೆ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದರ್ಶನ್ ಅವರ ಮುಂದಿನ ಸಿನಿಮಾ ಸೆಟ್ಟೇರುವುದನ್ನು ಖಚಿತ ಪಡಿಸಿದ್ದಾರೆ.

  ದರ್ಶನ್ ಹೊಸ ಕಾರಿನ ಬೆಲೆ ಎಷ್ಟು? ದಾಸನ ಐಷಾರಾಮಿ ಕಾರುಗಳ ಲಿಸ್ಟ್ ಇಲ್ಲಿದೆ!ದರ್ಶನ್ ಹೊಸ ಕಾರಿನ ಬೆಲೆ ಎಷ್ಟು? ದಾಸನ ಐಷಾರಾಮಿ ಕಾರುಗಳ ಲಿಸ್ಟ್ ಇಲ್ಲಿದೆ!

  'D 56' ಬಗ್ಗೆ ರಾಕ್‌ಲೈನ್‌ ವೆಂಕಟೇಶ್ ಮಾತು!

  'D 56' ಬಗ್ಗೆ ರಾಕ್‌ಲೈನ್‌ ವೆಂಕಟೇಶ್ ಮಾತು!

  ಈ ಚಿತ್ರದ ಬಗ್ಗೆ ಮಾತನಾಡಿರುವ ರಾಕ್‌ಲೈನ್ ವೆಂಕಟೇಶ್, "D 56 ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ಸ್ಕ್ರಿಪ್ಟ್ ಕೆಲಸಗಳು ಕೂಡ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲಾ ಮಾಹಿತಿ ನೀಡುತ್ತೇವೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಈ ಸಿನಿಮಾ ಸೆಟ್ಟೇರಲಿದೆ." ಎಂದು ಮಾಧ್ಯಮದ ಮುಂದೆ ಹೇಳಿಕೆಯನ್ನು ಕೊಟ್ಟಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಈ ಹೇಳಿಕೆಗೆ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ. 'ರಾಜವೀರಮದಕರಿ' ಸಿನಿಮಾ ಮಾಡಲು, ದರ್ಶನ್ ಮತ್ತು ರಾಕ್‌ಲೈನ್ ವೆಂಕಟೇಶ್ ನಿರ್ಧರಿಸಿದ್ದರು. ಆದರೆ ಕಾರಣಾಂತರದಿಂದ ಆ ಸಿನಿಮಾವೀಗ ನಿಂತು ಹೋಗಿದ್ದು, ಹೊಸ ಸಿನಿಮಾ ಸೆಟ್ಟೇರಲಿದೆ.

  ತರುಣ್ ನಿರ್ದೇಶನದಲ್ಲಿ D 56!

  ತರುಣ್ ನಿರ್ದೇಶನದಲ್ಲಿ D 56!

  ಈಗಾಗಲೇ D 56 ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರದ ಪೋಸ್ಟರ್ ಸಿಕ್ಕಾಪಟ್ಟೆ ರಗಡ್ ಆಗಿದೆ. ಇದು ಕಥೆಯ ಮೇಲೆ ದುಪ್ಪಟ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ದರ್ಶನ್ ಜೊತೆಗೆ ರಾಬರ್ಟ್ ಸಿನಿಮಾವನ್ನು ಮಾಡಿದಂತಹ ತರುಣ್ ಸುಧೀರ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ದೊಡ್ಡ ಮಟ್ಟದ ನಿರ್ಮಾಣದ ಜೊತೆಗೆ ಉತ್ತಮ ಕಥೆಯನ್ನು ಮಾಡಿಕೊಂಡಿದ್ದಾರಂತೆ ತರುಣ್ ಸುಧೀರ್.

  Exclusive: ದರ್ಶನ್ ಬೇರೆ ಸಿನಿಮಾದಲ್ಲಿ ತರುಣ್ ಬ್ಯುಸಿ: 'ಸಿಂಧೂರ ಲಕ್ಷಣ'ದ ಕಥೆಯೇನು?Exclusive: ದರ್ಶನ್ ಬೇರೆ ಸಿನಿಮಾದಲ್ಲಿ ತರುಣ್ ಬ್ಯುಸಿ: 'ಸಿಂಧೂರ ಲಕ್ಷಣ'ದ ಕಥೆಯೇನು?

  D56 ಪ್ಯಾನ್ ಇಂಡಿಯ ಸಿನಿಮಾ!

  D56 ಪ್ಯಾನ್ ಇಂಡಿಯ ಸಿನಿಮಾ!

  ಆದರೆ ಪೋಸ್ಟರ್ ಹೊರತುಪಡಿಸಿ ಮತ್ಯಾವ ಅಂಶವನ್ನು ಕೂಡ ಚಿತ್ರತಂಡ ರಿವೀಲ್ ಮಾಡಿಲ್ಲ. ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರದ ಮುಹೂರ್ತ ನೆರವೇರಲಿದೆ. ಆ ಬಳಿಕ ದರ್ಶನ್ ಅವರ ಪಾತ್ರ ಮತ್ತು ಚಿತ್ರದ ಕಥೆಯ ಬಗ್ಗೆ ಸುಳಿವು ಕೊಡಬಹುದು ಸಿನಿಮಾ ತಂಡ. ಆದರೆ ಅದಕ್ಕೂ ಮೊದಲು 'ಕ್ರಾಂತಿ' ಸಿನಿಮಾಗಾಗಿ ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ. 'ಕ್ರಾಂತಿ' ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವುದನ್ನು ಕೂಡ ಸದ್ಯದಲ್ಲಿಯೇ ಚಿತ್ರ ತಂಡ ಪ್ರಕಟಿಸಲಿದೆ.

  English summary
  Darshan Starrer D56 Movie Will Be Launched For Varamahalakshmi Festival On August 12th, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X