'ಡೆವಿಲ್' ಚಿತ್ರದ 4ನೇ ಹಾಡು ಯಾವ್ದು? ಸಾಹಿತ್ಯ ಬರೆದಿದ್ಯಾರು? ಹಾಡಿರೋದ್ಯಾರು?

ದರ್ಶನ್ ನಟನೆಯ 'ಡೆವಿಲ್' ಚಿತ್ರ ಬಿಡುಗಡೆಗೆ 10 ದಿನ ಮಾತ್ರ ಬಾಕಿಯಿದೆ. ಈಗಾಗಲೇ ಟ್ರೈಲರ್ ಬಿಡುಗಡೆಗೆ ಸಿದ್ಧತೆ ನಡೀತಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ಈಗಾಗಲೇ 3 ಹಾಡುಗಳು ರಿಲೀಸ್ ಆಗಿ ಗಮನ ಸೆಳೆದಿದೆ. ಮತ್ತೊಂದು ಹಾಡು ಕೂಡ ಶೀಘ್ರದಲ್ಲೇ ಅನಾವರಣವಾಗಲಿದೆ.

ಮಿಲನಾ ಪ್ರಕಾಶ್ ನಿರ್ಮಿಸಿ ನಿರ್ದೇಶನ ಮಾಡಿರುವ 'ಡೆವಿಲ್' ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. 'ಇದ್ರೆ ನೆಮ್ದಿಯಾಗ್ ಇರ್ಬೇಕ್' ಲಿರಿಕಲ್ ವೀಡಿಯೋ ಸೂಪರ್ ಹಿಟ್ ಆಗಿತ್ತು. ಬಳಿಕ ಬಂದ 'ಒಂದೇ ಒಂದು ಸಲ' ಪದೇ ಪದೆ ಗುನುಗುವಂತೆ ಮಾಡಿ ಗೆದ್ದಿತ್ತು. ಇತ್ತೀಚೆಗೆ ಬಂದ 'ಅಲೋಹೋಮೊರಾ' ಸಾಂಗ್ ಅಷ್ಟಾಗಿ ಸದ್ದು ಮಾಡದೇ ಇದ್ದರೂ ಕಥೆಗೆ ತಕ್ಕಂತೆ ಮಾಡಿರುವ ಸಾಂಗ್ ಇದು ಎನ್ನಲಾಗ್ತಿದೆ.

Darshan starrer Devil film 4th Song Set for Grand Release Soon

ಅಂದಹಾಗೆ 'ಡೆವಿಲ್' ಚಿತ್ರದ 4ನೇ ಹಾಡು 'ಏನೊ ಒಂಥರ ಚಂದ ಜೊತೆಯಲಿ' ಎಂದು ಶುರುವಾಗುತ್ತದೆ ಎನ್ನಲಾಗ್ತಿದೆ. ಅಬ್ಬಿ ವಿ ಗಾಯನದಲ್ಲಿ ಈ ಹಾಡು ಮೂಡಿ ಬಂದಿದ್ದು ಶೀಘ್ರದಲ್ಲೇ ಬಿಡುಗಡೆ ಆಗುತ್ತದೆ ಎನ್ನುವ ಚರ್ಚೆ ನಡೀತಿದೆ. 'ಒಂದೇ ಒಂದು ಸಲ' ಹಾಡು ಬರೆದಿದ್ದ ಪ್ರಮೋದ್ ಮರವಂತೆ 4ನೇ ಹಾಡಿಗೂ ಸಾಹಿತ್ಯ ಪೋಣಿಸಿದ್ದಾರೆ. ಸಂತು ಮಾಸ್ಟರ್ ಈ ರೊಮ್ಯಾಂಟಿಕ್ ಸಾಂಗ್ ಕೊರಿಯೋಗ್ರಫಿ ಮಾಡಿದ್ದಾರೆ. ನಗರದ ಹೆಚ್‌ಎಂಟಿ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಈ ಸಾಂಗ್ ಶೂಟ್ ಮಾಡಲಾಗಿದೆ. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಾಂಗ್ ಮೂಡಿ ಬಂದಿದೆ.

ಸಿನಿಮಾ ಬಿಡುಗಡೆಗೆ 10 ದಿನ ಬಾಕಿಯಿದ್ದು 'ಡೆವಿಲ್' ಟ್ರೈಲರ್ ಇನ್ನು ಬಂದಿಲ್ಲ ಅಂತ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಟ್ರೈಲರ್ ಬಂದರೆ ಸಹಜವಾಗಿಯೇ ಹೈಪ್ ಹೆಚ್ಚಾಗುತ್ತದೆ. ಪ್ರೇಕ್ಷಕರಿಗೆ ಸಿನಿಮಾ ಬಗ್ಗೆ ಇಂಟ್ರೆಸ್ಟ್ ಶುರುವಾಗುತ್ತದೆ. ಈವರೆಗೆ ಚಿತ್ರದ ಕಥೆ ಬಗ್ಗೆ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿಲ್ಲ. ಅಭಿಮಾನಿಗಳಿಗೆ ಹೇಳಿಮಾಡಿಸಿದಂತಹ ಸಿನಿಮಾ ಎನ್ನುವುದನ್ನು ಮಾತ್ರ ಪ್ರಕಾಶ್ ಹೇಳ್ತಾ ಬರ್ತಿದ್ದಾರೆ.

Darshan starrer Devil film 4th Song Set for Grand Release Soon

ಇತ್ತೀಚೆಗೆ ಅಭಿಮಾನಿಗಳ ಜೊತೆ ಸಭೆ ನಡೆಸಿ ಸಿನಿಮಾ ಪ್ರಚಾರ, ರಿಲೀಸ್ ಬಗ್ಗೆ ಚರ್ಚಿಸಲಾಗಿತ್ತು. ವಿಜಯಲಕ್ಷ್ಮಿ ದರ್ಶನ್ ಹಾಗೂ ದಿನಕರ್ ತೂಗುದೀಪ ಕೂಡ ಭಾಗಿ ಆಗಿದ್ದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಒಂದು ದಿನ ಮುನ್ನ ಸಿನಿಮಾ ಬಿಡುಗಡೆಗೆ ಚಿತ್ರತಂಡ ಮನಸ್ಸು ಮಾಡಿದೆ. ಡಿಸೆಂಬರ್ 11ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.

ಇನ್ನೆರಡು ದಿನಗಳಲ್ಲಿ ಟ್ರೈಲರ್ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿ ಸಿಗಲಿಲ್ಲ. ಸಿನಿಮಾ ಬಿಡುಗಡೆಗೆ ಎರಡು ದಿನ ಬಾಕಿ ಇರುವಾಗ 4ನೇ ಸಾಂಗ್ ಹೊರ ಬರುವ ನಿರೀಕ್ಷೆಯಿದೆ. ಅಚ್ಯುತ್‌ ಕುಮಾರ್ ಇತ್ತೀಚೆಗೆ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದರು. ದರ್ಶನ್ ಜೊತೆ ಮತ್ತೊಮ್ಮೆ ತೆರೆ ಹಂಚಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮಹೇಶ್ ಮಂಜ್ರೇಕರ್, ಅವಿನಾಶ್, ಗಿಲ್ಲಿ ನಟ ಸೇರಿ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.

ಬೆಂಗಳೂರು, ಮೈಸೂರು, ಉದಯ್‌ಪುರ್ ಹಾಗೂ ಬ್ಯಾಂಕಾಕ್‌ನಲ್ಲಿ 'ಡೆವಿಲ್' ಚಿತ್ರದ ಚಿತ್ರೀಕರಣ ನಡೆದಿತ್ತು. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 100 ದಿನ ಕಳೆದಿದೆ. ಸದ್ಯಕ್ಕೆ ಜಾಮೀನು ಸಿಗುವುದಿಲ್ಲ. ಹಾಗಾಗಿ ಅವರ ಅನುಪಸ್ಥಿತಿಯಲ್ಲೇ ಸಿನಿಮಾ ಬಿಡುಗಡೆಯಾಗುತ್ತಿದೆ. 13 ವರ್ಷಗಳ ಹಿಂದೆ ಇದೇ ರೀತಿ ದರ್ಶನ್ ಜೈಲಿನಲ್ಲಿ ಇದ್ದಾಗ 'ಸಾರಥಿ' ಸಿನಿಮಾ ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಕೆವಿಎನ್ ಸಂಸ್ಥೆ ಬೆಂಬಲಕ್ಕೆ ನಿಂತಿದ್ದು ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ.

More from Filmibeat

Read more about: devil darshan sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X