ಥಾಯ್ಲೆಂಡ್‌ನಲ್ಲಿ ದರ್ಶನ್ ನಟನೆಯ 'ಡೆವಿಲ್' ಸಾಂಗ್ ಶೂಟ್ ಫೋಟೊಸ್ ವೈರಲ್
ಪ್ರಕಾಶ್ ವೀರ್ ನಿರ್ದೇಶನದ 'ಡೆವಿಲ್' ಸಿನಿಮಾ ಚಿತ್ರೀಕರಣದ ಈಗ ಥಾಯ್ಲೆಂಡ್‌ನಲ್ಲಿ ನಡೀತಿದೆ. ಎರಡು ದಿನಗಳ ಹಿಂದೆ ಚಿತ್ರತಂಡ ಅಲ್ಲಿಗೆ ತೆರಳಿತ್ತು. ಈಗಾಗಲೇ ಸಾಂಗ್ ಶೂಟಿಂಗ್ ಆರಂಭವಾಗಿದ್ದು ಫೋಟೊವೊಂದು ವೈರಲ್ ಆಗ್ತಿದೆ. ದರ್ಶನ್ ಸಹ ಕಲಾವಿದರ ಜೊತೆ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೊ ಇದು.
ಬಿಳಿ ಬಣ್ಣದ ಸೂಟ್‌ನಲ್ಲಿ ನಟ ದರ್ಶನ್ ಮಿಂಚಿದ್ದಾರೆ. ಸ್ಟೈಲಿಶ್ ಸನ್‌ಗ್ಲಾಸ್ ತೊಟ್ಟು ದರ್ಶನ್ ಬಿಂದಾಸ್ ಪೋಸ್ ಕೊಟ್ಟಿದ್ದಾರೆ. ಬಹಳ ಅದ್ಧೂರಿಯಾಗಿ ಸಾಂಗ್ ಶೂಟಿಂಗ್ ನಡೀತಿರೋದು ಗೊತ್ತಾಗುತ್ತಿದೆ. ಇತ್ತೀಚೆಗೆ ದರ್ಶನ್ ಪುತ್ರ ವಿನೀಶ್ ಹಾಗೂ ನಿರ್ದೇಶಕ ಪ್ರಕಾಶ್ ವೀರ್ ಜೊತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಫೋಟೊ, ವೀಡಿಯೋ ಸಹ ವೈರಲ್ ಆಗಿತ್ತು.

ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಜೊತೆ ದರ್ಶನ್ ಫೋಟೊಗೆ ಪೋಸ್ ಕೊಟ್ಟಿದ್ದರು. ಇನ್ನು ಥಾಯ್ಲೆಂಡ್‌ನಲ್ಲಿ ಕೂಡ ಸ್ನೇಹಿತರು ಭೇಟಿ ಮಾಡಿ ಉಡುಗೊರೆ ನೀಡಿದ್ದರು. ಇನ್ನು ದರ್ಶನ್ ಸ್ನೇಹಿತರ ಜೊತೆ ಊಟಕ್ಕೆ ಹೋದಾಗ ಸ್ಪೈನಿ ಲಾಬ್‌ಸ್ಟರ್(ಕ್ರೇಫಿಶ್) ಹಿಡಿದುಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. 'ಡೆವಿಲ್' ಚಿತ್ರದ ನಾಯಕಿ ರಚನಾ ರೈ ಕೂಡ ಭಯದಿಂದಲೇ ಕ್ರೇಫಿಶ್ ಹಿಡಿದುಕೊಂಡಿದ್ದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ಸಾಂಗ್ ಶೂಟ್ ಫೋಟೊ ಸರದಿ.
ಅಕ್ಟೋಬರ್ ಕೊನೆಗೆ 'ಡೆವಿಲ್' ಸಿನಿಮಾ ರಿಲೀಸ್ ಪ್ಲ್ಯಾನ್ ನಡೀಯಿದೆ. ಥಾಯ್ಲೆಂಡ್ ಸಾಂಗ್ ಶೂಟ್ ಮುಗಿದರೆ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಲಿದೆ. ಬಹುಕೋಟಿ ವೆಚ್ಚದಲ್ಲಿ ಸ್ವತಃ ಪ್ರಕಾಶ್ ವೀರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

ಬೆಂಗಳೂರು, ರಾಜಸ್ಥಾನ ಹಾಗೂ ಮೈಸೂರಿನಲ್ಲಿ 'ಡೆವಿಲ್' ಸಿನಿಮಾ ಚಿತ್ರೀಕರಣ ನಡೆದಿದೆ. ಇದು ಬರೀ ಕಮರ್ಷಿಯಲ್ ಸಿನಿಮಾ ಮಾತ್ರ ಅಲ್ಲ, ಪ್ರಕಾಶ್ ಸ್ಟೈಲ್ ಎಮೋಷನ್ ಡ್ರಾಮಾ ಸಿನಿಮಾ ಎನ್ನಲಾಗ್ತಿದೆ. ಈ ಹಿಂದೆ 'ತಾರಕ್' ಚಿತ್ರದಲ್ಲಿ ಕೂಡ ಇಂತದ್ದೇ ಪ್ರಯತ್ನ ಮಾಡಿದ್ದರು. ದರ್ಶನ್- ಪ್ರಕಾಶ್ ಕಾಂಬಿನೇಷನ್‌ನಲ್ಲಿ ಬಂದಿದ್ದ ಆ ಸಿನಿಮಾ ಹಿಟ್ ಆಗಿತ್ತು. ಹಾಗಾಗಿ ಅದೇ ನಿರೀಕ್ಷೆ ಈ ಸಿನಿಮಾ ಮೇಲಿದೆ.
ಸಂತು ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಾಂಗ್ ಶೂಟಿಂಗ್ ನಡೀತಿದೆ. ಥಾಯ್ಲೆಂಡ್‌ನ ಕಲರ್‌ಫುಲ್ ಲೊಕೇಶನ್‌ಗಳಲ್ಲಿ ಅಷ್ಟೇ ಕಲರ್‌ಫುಲ್ ಆಗಿ ಸಾಂಗ್ ಚಿತ್ರೀಕರಣ ಮಾಡುತ್ತಿದ್ದಾರೆ. ಸಂತು ಮಾಸ್ಟರ್ ಈ ಹಿಂದೆ ಕೂಡ ದರ್ಶನ್ 'ರಾಬರ್ಟ್' ಹಾಗೂ 'ಕ್ರಾಂತಿ' ಚಿತ್ರದ ಹಾಡುಗಳಿಗೆ ಡ್ಯಾನ್ಸ್ ಕಂಪೋಸ್ ಮಾಡಿದ್ದರು. ನಿರ್ದೇಶಕ ಪ್ರಕಾಶ್ ವೀರ್ ಸ್ಥಳದಲ್ಲೇ ಇದ್ದು ಹಾಡು ಚೆನ್ನಾಗಿ ಮೂಡಿ ಬರುವಂತೆ ನೋಡಿಕೊಳ್ಳುತ್ತಿದ್ದಾರೆ.
ಈಗಾಗಲೇ ತುಳು ಸಿನಿಮಾಗಳಲ್ಲಿ ನಟಿಸಿರುವ ರಚನಾ ರೈ 'ಡೆವಿಲ್' ಚಿತ್ರದಲ್ಲಿ ದರ್ಶನ್ ಜೊತೆ ಮಿಂಚಿದ್ದಾರೆ. ಆಕೆ ಕೂಡ ಕಲರ್‌ಫುಲ್ ಕಾಸ್ಟ್ಯೂಮ್‌ನಲ್ಲಿ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಭರತನಾಟ್ಯ ಕಲಾವಿದೆ ಆಗಿರುವುದರಿಂದ ಡ್ಯಾನ್ಸ್ ಬಗ್ಗೆ ಹೆಚ್ಚು ಒಲವು ಇದೆ. ಅಜನೀಶ್ ಲೋಕನಾಥ್ ಕಂಪೋಸ್ ಮಾಡಿರುವ ಸಾಂಗ್ ಬಹಳ ಕುತೂಹಲ ಮೂಡಿಸಿದೆ.
ಇದೇ ಮೊದಲ ಬಾರಿಗೆ ದರ್ಶನ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಈಗಾಗಲೇ ಟೀಸರ್‌ಗಳಲ್ಲಿ ಅವರ ಬಿಜಿಎಂ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಹಾಗಾಗಿ 'ಡೆವಿಲ್' ಆಲ್ಬಮ್ ಬಗ್ಗೆ ಕೂಡ ಕುತೂಹಲ ಮೂಡಿದೆ. ದರ್ಶನ್ ಸಿನಿಮಾಗಳು ಹಾಡುಗಳು ಸದಾ ಹೈಲೆಟ್ ಆಗುತ್ತದೆ. ಈ ಬಾರಿ ಕೂಡ ಅದು ಮುಂದುವರೆಯುವ ಸಾಧ್ಯತೆಯಿದೆ.


Click it and Unblock the Notifications











