For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಅವರ 'ಚಕ್ರವರ್ತಿ' ಮಾಡಿದ ಹೊಸ ದಾಖಲೆ ಇದು

  By Pavithra
  |
  ದರ್ಶನ್ ಸಿನಿಮಾ ಮಾಡಿದ ದಾಖಲೆ ನೋಡಿ..! | Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್ ..ಅಭಿಮಾನಿಗಳಿಂದ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಕರೆಸಿಕೊಳ್ಳುವ ನಟ. ದರ್ಶನ್ ಚಿತ್ರಗಳು ಸಿನಿಮಾ ಮಂದಿರದಲ್ಲಿ ಮಾತ್ರವಲ್ಲದೆ ಟಿವಿ ಹಾಗೂ ಯೂಟ್ಯೂಬ್ ನಲ್ಲಿ ಸಖತ್ ವೀಕ್ಷಕರನ್ನು ಪಡೆದುಕೊಳ್ಳುವಂತಹ ಸಾಮರ್ಥ್ಯ ಹೊಂದಿದೆ.

  ಕ್ಲಾಸ್ ಹಾಗೂ ಮಾಸ್ ಎರಡು ರೀತಿಯ ಪ್ರೇಕ್ಷಕರನ್ನು ಮತ್ತು ಅಭಿಮಾನಿಗಳನ್ನು ದರ್ಶನ್ ಪಡೆದುಕೊಂಡಿದ್ದಾರೆ. ಸದ್ಯ ದರ್ಶನ್ ಅಭಿನಯದ ಎರಡು ಸಿನಿಮಾಗಳು ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಿದ್ದವಾಗಿದೆ. ಅಭಿಮಾನಿಗಳು ಕೂಡ ಡಿ ಬಾಸ್ ಸಿನಿಮಾವನ್ನು ಬೆಳ್ಳಿತೆರೆ ಮೇಲೆ ನೋಡಲು ಕಾತುರರಾಗಿದ್ದಾರೆ.

  ದರ್ಶನ್-ಶಿವಣ್ಣನ ಆತ್ಮೀಯತೆ ನೋಡಿದ್ಮೇಲೆ 'ಸ್ಟಾರ್ ವಾರ್' ಪದಕ್ಕೆ ಅರ್ಥವೇ ಇಲ್ಲ.!ದರ್ಶನ್-ಶಿವಣ್ಣನ ಆತ್ಮೀಯತೆ ನೋಡಿದ್ಮೇಲೆ 'ಸ್ಟಾರ್ ವಾರ್' ಪದಕ್ಕೆ ಅರ್ಥವೇ ಇಲ್ಲ.!

  ಕೇವಲ ಕನ್ನಡ ಸಿನಿಮಾ ವೀಕ್ಷಕರು ಮಾತ್ರವಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ತೆಲುಗು ಹಾಗೂ ಹಿಂದಿ ಸಿನಿಮಾ ನೋಡುವ ವೀಕ್ಷಕರು ಕೂಡ ಅಭಿಮಾನಿಗಳಾಗಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ ಮುಂದೆ ಓದಿ.

  ಚಕ್ರವರ್ತಿಯ ಹೊಸ ದಾಖಲೆ

  ಚಕ್ರವರ್ತಿಯ ಹೊಸ ದಾಖಲೆ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ಹೊಸ ದಾಖಲೆ ಬರೆದಿದೆ. ಚಕ್ರವರ್ತಿಯ ಹಿಂದಿ ಡಬ್ಬಿಂಗ್ ಸಿನಿಮಾ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ಜನರು ವೀಕ್ಷಣೆ ಮಾಡಿದ್ದಾರೆ.

  ಹೆಚ್ಚು ಸಲ ವೀಕ್ಷಣೆ ಮಾಡಿದ ಸಿನಿಮಾ

  ಹೆಚ್ಚು ಸಲ ವೀಕ್ಷಣೆ ಮಾಡಿದ ಸಿನಿಮಾ

  'ಚಕ್ರವರ್ತಿ' ಸಿನಿಮಾ ಯೂಟ್ಯೂಬ್ ಗೆ ಅಪ್ಲೋಡ್ ಆದ 10 ಗಂಟೆಯಲ್ಲಿ 11 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಆಗುವ ಮೂಲಕ ಎಲ್ಲರ ಗಮನ ಸೆಳೆದಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ್ದ 'ಚಕ್ರವರ್ತಿ' ಸಿನಿಮಾ ಕಿರುತೆರೆಯಲ್ಲಿಯೂ ಬಿಡುಗಡೆ ಆಗಿದೆ.

  ಹೆಚ್ಚಾಗುತ್ತಿದ್ದಾರೆ ಡಿ ಬಾಸ್ ಅಭಿಮಾನಿಗಳು

  ಹೆಚ್ಚಾಗುತ್ತಿದ್ದಾರೆ ಡಿ ಬಾಸ್ ಅಭಿಮಾನಿಗಳು

  ಕನ್ನಡ ಸಿನಿಮಾರಂಗದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ದರ್ಶನ್ ಕೂಡ ಒಬ್ಬರು. ಪ್ರತಿ ದಿನ ದರ್ಶನ್ ಅವರ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ ಎನ್ನುವುದು ವಿಶೇಷ.

  'ಚಕ್ರವರ್ತಿ' ಸಿನಿಮಾ ಬಗ್ಗೆ ಮಾಹಿತಿ

  'ಚಕ್ರವರ್ತಿ' ಸಿನಿಮಾ ಬಗ್ಗೆ ಮಾಹಿತಿ

  'ಚಕ್ರವರ್ತಿ' ಸಿನಿಮಾವನ್ನು ಚಿಂತನ್ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿತ್ತು. ದರ್ಶನ್ ಸಹೋದರ ದಿನಕರ್ ತೂಗುದೀಪ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯ ಮಾಡಿದ್ದರು. ನಾಯಕಿಯಾಗಿ ದೀಪಾ ಸನ್ನಿಧಿ ಕಾಣಿಸಿಕೊಂಡಿದ್ದರು.

  English summary
  Kannada actor Darshan starrer Hindi dubbed Chakravarty film is to release the film on YouTube. It has gained over 11 million views in the 10 hours uploaded to YouTube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X