'ಮುನಿರತ್ನ ಕುರುಕ್ಷೇತ್ರ' ಹಿಂದಿ ವರ್ಷನ್ ರಿಲೀಸ್ ಡೇಟ್ ಮುಂದಕ್ಕೆ?

Recommended Video

Kurukshetra : ದರ್ಶನ್ ಅಭಿನಯದ ಕುರುಕ್ಷೇತ್ರ ಹಿಂದಿ ವರ್ಷನ್ ರಿಲೀಸ್ ಡೇಟ್ ಮುಂದಕ್ಕೆ | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೆ ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರದ ಟ್ರೈಲರ್ ಮತ್ತು ಆಡಿಯೋವನ್ನು ರಿಲೀಸ್ ಮಾಡಲಾಗಿದೆ. ಇನ್ನು ಮಲಯಾಳಂ ಮತ್ತು ತಮಿಳಿನಲ್ಲಿ ಚಿತ್ರದ ಆಡಿಯೋ ಮತ್ತು ಟ್ರೈಲರ್ ರಿಲೀಸ್ ಗೆ ಸಿದ್ಧತೆ ನಡೆಯುತ್ತಿದೆ.

ಇಡೀ ಚಿತ್ರತಂಡ ಚಿತ್ರದ ಪ್ರಮೋಷನ್ ನಲ್ಲಿ ನಿರತವಾಗಿದೆ. ಇದರ ನಡುವೆ ಕುರುಕ್ಷೇತ್ರ ಹಿಂದಿ ವರ್ಶನ್ ರಿಲೀಸ್ ಡೇಟ್ ಮುಂದಕ್ಕೆ ಹೋಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕುರುಕ್ಷೇತ್ರ ಚಿತ್ರವನ್ನು ಏಕಕಾಲಕ್ಕೆ ಐದು ಭಾಷೆಯಲ್ಲಿ ತೆರೆಗೆ ತರುವ ಪ್ಲಾನ್ ಚಿತ್ರತಂಡದಾಗಿತ್ತು.

ಆದ್ರೀಗ ದಕ್ಷಿಣದ ನಾಲ್ಕು ಭಾಷೆಯಲ್ಲಿ ಚಿತ್ರ ಏಕಕಾಲಕ್ಕೆ ತೆರೆಕಾಣಲಿದ್ದು ಹಿಂದಿ ವರ್ಷನ್ ಒಂದು ವಾರ ಮುಂದಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣವಾಗಿದ್ದು ಕುರುಕ್ಷೇತ್ರ ಹಿಂದಿ ವರ್ಶನ್ ಇನ್ನು ಕೂಡ ಸೆನ್ಸಾರ್ ಆಗಿಲ್ಲವಂತೆ. ಸೆನ್ಸಾರ್ ಕಾಪಿ ಚಿತ್ರತಂಡದ ಕೈ ಸೇರುವವರೆಗೂ ಚಿತ್ರ ರಿಲೀಸ್ ಮಾಡಲು ಸಾಧ್ಯವಾಗುತ್ತಿಲ್ಲ.

Darshan Starrer His 50th Film Kurukshetra In Hindi May Get Delayed

ಕುರುಕ್ಷೇತ್ರ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ವರ್ಶನ್ ಗೆ ಈಗಾಗಲೆ ಸೆನ್ಸಾರ್ ಆಗಿದ್ದು ಆಗಸ್ಟ್ 9ಕ್ಕೆ ತೆರೆಗೆ ಬರಲು ರೆಡಿಯಾಗಿದೆ. ಅಂದ್ಹಾಗೆ ಕುರುಕ್ಷೇತ್ರ ಹಿಂದಿಯಲ್ಲಿ 1,300 ರಿಂದ 1,500 ಚಿತ್ರಮಂದಿರಗಳಲ್ಲಿ ತೆರೆಗೆ ತರುವ ಪ್ಲಾನ್ ಮಾಡಿದೆ ಚಿತ್ರತಂಡ. ಆದ್ರೀಗ ಒಂದು ವಾರಗಳ ಕಾಲತಡಾಗುವ ಸಾಧ್ಯತೆ ಇದ್ದು ಆಗಸ್ಟ್ 15ಕ್ಕೆ ಹಿಂದಿ ಕುರುಕ್ಷೇತ್ರ ರಿಲೀಸ್ ಆಲಿದೆ. ಅಂದ್ಮೇಲೆ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅಭಿನಯದ ಮಿಷನ್ ಮಂಗಲ್ ಚಿತ್ರಕ್ಕೆ ಬಿಗ್ ಫೈಟ್ ನೀಡುವ ಸಾಧ್ಯತೆ ಇದೆ.

More from Filmibeat

English summary
Darshan starrer his 50th film Kurukshetra in Hindi may get delayed by a week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X