'777 ಚಾರ್ಲಿ' ದಾಖಲೆ ಉಡೀಸ್: ಈಗ 'ಜೇಮ್ಸ್' ಮೇಲೆ 'ಕಾಟೇರ'ನ ಕಣ್ಣು!

ದೇಶ ವಿದೇಶಗಳಲ್ಲಿ 'ಕಾಟೇರ'ನ ಕಾರುಬಾರು ಜೋರಾಗಿದೆ. ಈಗಾಗಲೇ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ದರ್ಶನ್ ಆರ್ಭಟಕ್ಕೆ ಸಿನಿರಸಿಕರು ಮನಸೋತಿದ್ದಾರೆ. 2ನೇ ವಾರಾಂತ್ಯದಲ್ಲಿ ಸಿನಿಮಾ ಕಲೆಕ್ಷನ್ ಜೋರಾಗಿದೆ. ಬಾಕ್ಸಾಫೀಸ್‌ನಲ್ಲಿ 'ಕಾಟೇರ'ನ ಗೆಲುವಿನ ನಾಗಾಲೋಟ ಮುಂದುವರೆದಿದೆ.

ತರುಣ್ ಸುಧೀರ್ ನಿರ್ದೇಶನದಲ್ಲಿ ಹಳ್ಳಿ ಸೊಗಡಿನ 'ಕಾಟೇರ' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಮನರಂಜನೆಯ ಅಂಶಗಳ ಜೊತೆ ಒಂದಷ್ಟು ಸಂದೇಶವನ್ನು ಸಿನಿಮಾ ಹೊತ್ತುಬಂದಿದೆ. ವ್ಯವಸ್ಥೆ ಬದಲಾಗಬೇಕು ಎಂದರೆ ಹೋರಾಟ ನಡೆಯಲೇಕು ಎನ್ನುವ ವಿಚಾರವನ್ನು ಚಿತ್ರದಲ್ಲಿ ಹೇಳಲಾಗಿದೆ. ಜಾತಿ ವ್ಯವಸ್ಥೆ, ಮರ್ಯಾದೆ ಹತ್ಯೆ, ಅಸಹಾಯಕರ ಮೇಲಿ ದೌರ್ಜನ್ಯದಂತಹ ವಿಚಾರಗಳಲ್ಲಿ ತೆರೆಗೆ ತರಲಾಗಿದೆ.

 Darshan starrer Kaatera Beats 777 Charlie at the box office

ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಒಟ್ಟಾರೆ ಮೊದಲ ವಾರವೇ ಸಿನಿಮಾ 104 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ವಾರಾಂತ್ಯದಲ್ಲಿ ವಿದೇಶಗಳಲ್ಲಿ ಹಲವೆಡೆ ಸಿನಿಮಾ ಬಿಡುಗಡೆಯಾಗಿದೆ. ಅಲ್ಲಿರುವ ಕನ್ನಡ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಒಮನ್, ಯುಎಸ್‌ ಪ್ರೇಕ್ಷಕರ ಪ್ರತಿಕ್ರಿಯೆ ವಿಡಿಯೋಗಳು ವೈರಲ್ ಆಗುತ್ತಿದೆ. ಚಿತ್ರದ ಮೇಕಿಂಗ್ ವಿಡಿಯೋಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ.

ಡಿಸೆಂಬರ್ 29ಕ್ಕೆ ಬಿಡುಗಡೆಯಾದ 'ಕಾಟೇರ' ಸಿನಿಮಾ 2ನೇ ವಾರವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಿನ್ನೆ(ಜನವರಿ 6) ಕೂಡ 24 ಗಂಟೆಗಳಲ್ಲಿ 60 ಸಾವಿರಕ್ಕೂ ಅಧಿಕ ಟಿಕೆಟ್ಸ್ ಬುಕ್‌ ಮೈಶೋನಲ್ಲಿ ಮಾರಾಟವಾಗಿ ಎಲ್ಲರ ಹುಬ್ಬೇರಿಸಿತ್ತು. ಭಾನುವಾರವಾದ (ಜನವರಿ 7) ಇಂದು ಕೂಡ ಹಲವೆಡೆ ಸಿನಿಮಾ ಹೌಸ್‌ಫುಲ್ ಆಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಸಾಹಿತಿ, ಚಿಂತಕರು ಆಗಿರುವ ಅರವಿಂದ ಮಾಲಗತ್ತಿ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸದ್ಯ 'ಕಾಟೇರ' ಚಿತ್ರತಂಡ ದುಬೈ ತಲುಪಿದೆ. ಅಲ್ಲಿ ನಡೆಯಲಿರುವ ಅದ್ಧೂರಿ ಗೋಲ್ಡ್ ಪ್ರೀಮಿಯರ್ ಶೋನಲ್ಲಿ ಭಾಗಿ ಆಗುತ್ತಿದೆ. ನಟ ದರ್ಶನ್ ಕೂಡ ದೇವನಹಳ್ಳಿ ವಿಮಾನ ನಿಲ್ದಾಣದಿಂದ ದುಬೈ ಕಡೆ ಹೊರಟಿರುವ ವಿಡಿಯೋ ವೈರಲ್ ಆಗುತ್ತಿದೆ. ಇದೆಲ್ಲದರ ನಡುವೆ ಸಿನಿಮಾ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ದಾಖಲೆ ಮುರಿದಿದೆ.

 Darshan starrer Kaatera Beats 777 Charlie at the box office

ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾಗಳ ಪಟ್ಟಿಯಲ್ಲಿ 'ಕಾಟೇರ' ಚಿತ್ರಕ್ಕೆ 6ನೇ ಸ್ಥಾನ (ವಿಕಿಪಿಡಿಯ ಮಾಹಿತಿ ಪ್ರಕಾರ) ಲಭಿಸಿದೆ. ಕಳೆದ ವರ್ಷ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿತ್ತು. 105 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಆ ದಾಖಲೆಯನ್ನು ಮುರಿದು 'ಕಾಟೇರ' ದರ್ಬಾರ್ ನಡೆಸುತ್ತಿದ್ದಾರೆ.

ಕನ್ನಡದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿ ಸಿನಿಮಾ ಸಿನಿಮಾ ಪಟ್ಟಿಯಲ್ಲಿ 'ಜೇಮ್ಸ್' 5ನೇ ಸ್ಥಾನದಲ್ಲಿದೆ. ಪುನೀತ್ ರಾಜ್‌ಕುಮಾರ್ ನಟನೆಯ ಈ ಸಿನಿಮಾ 151 ಕೋಟಿ ರೂ. ಗಳಿಕೆ ಕಂಡಿತ್ತು. ಇದೀಗ 'ಕಾಟೇರ' ಸಿನಿಮಾ 'ಜೇಮ್ಸ್' ದಾಖಲೆ ಮುರಿಯುವತ್ತ ಸಾಗಿದೆ. ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಕಲೆಕ್ಷನ್ ಕೂಡ ಹಿಂದಿಕ್ಕುವ ಸಾಧ್ಯತೆಯಿದೆ. ಆದರೆ 'ವಿಕ್ರಾಂತ್ ರೋಣ' ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿತ್ತು.

ಒಂದೇ ಭಾಷೆಯಲ್ಲಿ ಬಿಡುಗಡೆಯಾಗಿ 'ಕಾಟೇರ' ಸಖತ್ ಸದ್ದು ಮಾಡ್ತಿದೆ. ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಇನ್ನು 'ಕಾಟೇರ' ಚಿತ್ರವನ್ನು ಡಬ್ ಮಾಡಿಕೊಡುವಂತೆ ಪರಭಾಷಿಕರು ಕೇಳುತ್ತಿದ್ದಾರೆ. ಚಿತ್ರತಂಡ ಕೂಡ ಆ ಹಾದಿಯಲ್ಲಿ ಪ್ರಯತ್ನ ನಡೆಸುತ್ತಿದೆ.

More from Filmibeat

English summary
Darshan's Kaatera Emerges As 6th highest-grossing Kannada films
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X