ಭೀಮನಹಳ್ಳಿ 'ಕಾಟೇರ'ನಿಗೆ ವರ್ಷ; ಅವನು ಬರೆದ ಈ ದಾಖಲೆಗಳೆಲ್ಲಾ ಇನ್ನೂ ಭದ್ರ

ಸರಿಯಾಗಿ ವರ್ಷದ ಹಿಂದೆ 'ಕಾಟೇರ' ಸಿನಿಮಾ ತೆರೆಗಪ್ಪಳಿಸಿತ್ತು. ಕನ್ನಡದಲ್ಲಿ ಮಾತ್ರ ಸಿನಿಮಾ ತೆರೆಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಣಗುಡುತ್ತಿದ್ದ ಚಿತ್ರಮಂದಿರಗಳಲ್ಲಿ ಮತ್ತೆ ಪ್ರೇಕ್ಷಕರ ಸಂಭ್ರಮ ಮನೆ ಮಾಡುವಂತೆ ಮಾಡಿತ್ತು. 'ಕಾಟೇರ'ನಾಗಿ ದರ್ಶನ್ ಆರ್ಭಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಭೀಮ್ನಳ್ಳಿ 'ಕಾಟೇರ'ನಿಗೆ ಈಗ ವರ್ಷದ ಸಂಭ್ರಮ.

ತರುಣ್ ಸುಧೀರ್ ನಿರ್ದೇಶನದ ಆಕ್ಷನ್ ಎಂಟರ್‌ಟ್ರೈನರ್ 'ಕಾಟೇರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ವರ್ಷದ ಹಿಂದೆ 'ಕಾಟೇರ' ಬರೆದ ಕೆಲ ದಾಖಲೆಗಳನ್ನು ಮತ್ತೆ ಯಾವುದೇ ಕನ್ನಡ ಸಿನಿಮಾ ಮುರಿಯಲು ಸಾಧ್ಯವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬಹಳ ದೊಡ್ಡದಾಗಿ ಗೆದ್ದ ಕನ್ನಡ ಸಿನಿಮಾ 'ಕಾಟೇರ'. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ 'KGF' ಸರಣಿ ಹಾಗೂ 'ಕಾಂತಾರ' ಬಿಟ್ರೆ ಆ ಮಟ್ಟಿಗೆ ಕನ್ನಡದಲ್ಲಿ ಗೆದ್ದ ಸಿನಿಮಾ ಇದು.

Darshan starrer Kaatera completes 1 year No kannada Movie come close to its Records

ರಾಕ್‌ಲೈನ್‌ ವೆಂಕಟೇಶ್ 'ಕಾಟೇರ' ಚಿತ್ರ ನಿರ್ಮಿಸಿದ್ದರು. ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕೆ ದೊಡ್ಡ ಬಲ ತಂದುಕೊಟ್ಟಿತ್ತು. ಕಳೆದ ವರ್ಷ ಡಿಸೆಂಬರ್ 29ಕ್ಕೆ ತೆರೆಕಂಡಿದ್ದ ಸಿನಿಮಾ ಮುಂದೆ ಹೊಸ ವರ್ಷದಲ್ಲಿ ಕೂಡ ಗೆಲುವಿನ ಓಟ ಮುಂದುವೆರೆಸಿತ್ತು. ಜಮೀನ್ದಾರಿ ವ್ಯವಸ್ಥೆ, ಜಾತಿ ವ್ಯವಸ್ಥೆ, ಲೈಂಗಿಕ ದೌರ್ಜನ್ಯ, ಮರ್ಯಾದೆ ಹತ್ಯೆ ರೀತಿಯ ವಿಚಾರಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು.

ಕುಲುಮೆಯಲ್ಲಿ ಮಚ್ಚು ತಟ್ಟುವ 'ಕಾಟೇರ'ನಾಗಿ ದರ್ಶನ್ ತಪ್ಪು ಮಾಡಿದರೆ ತಟ್ಟಿ ಕೇಳುವ ನಾಯಕನಾಗಿ ಅಬ್ಬರಿಸಿದ್ದರು. 'ಉಳುವವನೆ ಭೂಮಿಯ ಒಡೆಯ ಕಾಯ್ದೆ' ವಿಚಾರವನ್ನು ಕೂಡ ಚಿತ್ರದಲ್ಲಿ ಸೇರಿಸಿ ವಿಭಿನ್ನ ಕಥೆ ಹೇಳಿ ಚಿತ್ರತಂಡ ಗೆದ್ದಿತ್ತು. ವರ್ಷದ ಕೊನೆಗೆ ಬಂದಿದ್ದ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಚಿತ್ರವನ್ನು ಸ್ವಾಗತಿಸಿದ್ದರು.

ದಾಖಲೆಗಳ ವಿಚಾರಕ್ಕೆ 1 ಕೋಟಿ ರೂ.ಗೂ ಅಧಿಕ ಟಿಕೆಟ್ ಮಾರಾಟವಾಗಿ 'ಕಾಟೇರ' ಚಿತ್ರ ದಾಖಲೆ ಬರೆದಿತ್ತು. ಬರೀ ಬುಕ್‌ಮೈ ಶೋನಲ್ಲಿ 10 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಆಗಿ ಸಿನಿಮಾ ಸದ್ದು ಮಾಡಿತ್ತು. ಸಿಂಗಲ್ ಸ್ಕ್ರೀನ್‌ ಥಿಯೇಟರ್‌ಗಳಲ್ಲಿ ಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೂ 'ಕಾಟೇರ' ಪಾತ್ರವಾಗಿತ್ತು.

ಕಳೆದ ಒಂದೂವರೆ ವರ್ಷದಿಂದ ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಬಗ್ಗೆ ಲೆಕ್ಕ ಕೊಡಲಾಗುತ್ತಿದೆ. ಈ ರೀತಿ ಟ್ರೆಂಡ್ ಶುರುವಾದ ಬಳಿಕ ಅತಿಹೆಚ್ಚು ಟಿಕೆಟ್ ಬುಕ್ ಆಗಿರುವ ಕನ್ನಡ ಸಿನಿಮಾ ಎನ್ನುವ ದಾಖಲೆ 'ಕಾಟೇರ'ನ ಹೆಸರಿನಲ್ಲಿದೆ. ಅಡ್ವಾನ್ಸ್ ಬುಕ್ಕಿಂಗ್ ಸೇರಿ ಮೊದಲ ದಿನ 2 ಲಕ್ಷ 37 ಸಾವಿರ ಟಿಕೆಟ್ ಬುಕ್ ಆಗಿತ್ತು. ಇತ್ತೀಚೆಗೆ ಬಂದ 'ಮ್ಯಾಕ್ಸ್' ಸಿನಿಮಾ 2 ಲಕ್ಷದ 8 ಸಾವಿರ ಟಿಕೆಟ್ ಬುಕ್ಕಿಂಗ್ ಜೊತೆ 2ನೇ ಸ್ಥಾನದಲ್ಲಿದೆ.

'ಕಾಟೇರ' ಚಿತ್ರದ ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ಕೊಡಲಿಲ್ಲ. ಆದರೆ ಚಿತ್ರದ ಆರ್ಭಟ ಹೇಗಿತ್ತು ಎನ್ನುವುದನ್ನು ಚಿತ್ರಮಂದಿರದ ಮಾಲೀಕರೇ ಹೇಳಿಕೊಂಡಿದ್ದರು. ನಷ್ಟದಲ್ಲಿದ್ದ ಚಿತ್ರಮಂದಿರಗಳು 'ಕಾಟೇರ' ರಿಲೀಸ್ ಬಳಿಕ ಚೇತರಿಸಿಕೊಂಡಿದ್ದವು. ಅಷ್ಟರಮಟ್ಟಿಗೆ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದಿತ್ತು. ಹೊಲೆಮಾರಿ, ಒಂದು ಖಯ ಫೈಟ್ ಹಾಗೂ ಬಾವಿ ಫೈಟ್ ಸನ್ನಿವೇಶಗಳು ಅಭಿಮಾನಿಗಳ ಮನಗೆದ್ದಿತ್ತು.

70ರ ದಶಕದ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ಅಂದಿಕ ಕಾಲಘಟ್ಟ ಕಟ್ಟಿಕೊಡಲು ತರುಣ್ ಹಾಗೂ ತಂಡ ಶ್ರಮಿಸಿತ್ತು. ಮಾಸ್ತಿ ಸಂಭಾಷಣೆ ಚಿತ್ರಕ್ಕೆ ಬಲ ತಂದಿತ್ತು. ಜಡೇಶ್ ಹಂಪಿ ಕಥೆ, ತರುಣ್ ಚಿತ್ರಕಥೆ, ನಿರ್ದೇಶನ ಚಿತ್ರವನ್ನು ಗೆಲ್ಲಿಸಿತ್ತು. ನಾಯಕಿಯಾಗಿ ಆರಾಧನಾ ನಟಿಸಿ ಗಮನ ಸೆಳೆದರು. ಒಟ್ಟಾರೆ ಕನ್ನಡ ಚಿತ್ರರಂಗಕ್ಕೆ 'ಕಾಟೇರ' ದೊಡ್ಡ ಸಕ್ಸಸ್ ತಂದುಕೊಟ್ಟಿತ್ತು.

More from Filmibeat

English summary
Darshan's Kaatera movie some Records remained unbroken even after 1 year of it's Release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X