'ಕಾಟೇರ'ಗೆ ಫಸ್ಟ್ ಡೇ ಸಿಕ್ಕ ಶೋಗಳು ಎಷ್ಟು? ಬೆಂಗಳೂರಿನಲ್ಲೆಷ್ಟು? 'ಕ್ರಾಂತಿ'ಗಿಂತ ಕಮ್ಮಿನಾ?
ಕೊನೆಗೂ 'ಕಾಟೇರ' ಸಿನಿಮಾ ತೆರೆಗಪ್ಪಳಿಸಿದೆ. ಮಧ್ಯರಾತ್ರಿಯಿಂದಲೇ ಪ್ರೇಕ್ಷಕರು ಸಿನಿಮಾ ನೋಡುತ್ತಿದ್ದಾರೆ. ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಕೂಡ ಜೋರಾಗಿಯೇ ಇದೆ. ಹಳ್ಳಿ ಸೊಗಡಿನ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವ ಸುಳಿವು ಸಿಗುತ್ತಿದೆ.
ಈ ವರ್ಷ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದು ಸುಳ್ಳಲ್ಲ. ಅಭಿಮಾನಿಗಳು ಕೂಡ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿದ್ದರು. ದರ್ಶನ್ ಹೊರತುಪಡಿಸಿ ಚಿತ್ರತಂಡ ಕೂಡ ಸಿನಿಮಾ ಬಗ್ಗೆ ಮಾತನಾಡಿತ್ತು. ದರ್ಶನ್ ಮಾತ್ರ ಸಿನಿಮಾ ರಿಲೀಸ್ ಬಳಿಕವೇ ಮಾತನಾಡುತ್ತೀನಿ ಎನ್ನುತ್ತಾ ಬಂದಿದ್ದರು. ಇನ್ನು ಅಡ್ವಾನ್ಸ್ ಬುಕ್ಕಿಂಗ್‌ಗೂ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಒಂದು ದಿನ ಮೊದಲೇ 1 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಆಗಿತ್ತು.

ರಾಜ್ಯಾದ್ಯಂತ 369 ಸಿಂಗಲ್ ಸ್ಕ್ರೀನ್ ಹಾಗೂ 72 ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ 450ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಕಾಟೇರ' ಸಿನಿಮಾ ಬಿಡುಗಡೆಯಾಗಿದೆ. ಮಧ್ಯರಾತ್ರಿ 12 ಗಂಟೆಯ 21 ಶೋ, 3 ಗಂಟೆಯ 43 ಶೋ, 4 ಗಂಟೆಯ 77 ಶೋ, 5 ಗಂಟೆಯ 89 ಹಾಗೂ 6 ಗಂಟೆಯ 105 ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ಇನ್ನು ಕರ್ನಾಟಕದಾದ್ಯಂತ 1000ಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.
ಇನ್ನು 158 ಥಿಯೇಟರ್‌ಗಳ ಮುಂದೆ ಅಭಿಮಾನಿಗಳು 'ಕಾಟೇರ' ಚಿತ್ರದ ಕಟೌಟ್‌ಗಳನ್ನು ನಿಲ್ಲಿಸಿದ್ದಾರೆ. ಬೆಂಗಳೂರಿನಲ್ಲೇ 'ಕಾಟೇರ' ಚಿತ್ರಕ್ಕೆ ಮೊದಲ ದಿನ 518 ಶೋಗಳು ಸಿಕ್ಕಿದೆ. ಇದರಲ್ಲಿ 108 ಅರ್ಲಿ ಮಾರ್ನಿಂಗ್ ಶೋಗಳು ಇವೆ. ಅದನ್ನು ಹೊರತು ಪಡಿಸಿದರೆ 410 ಶೋಗಳು ಸಿಕ್ಕಿವೆ. ನಾಳೆ ಅರ್ಲಿ ಮಾರ್ನಿಂಗ್ ಶೋಗಳು ಇರುವುದಿಲ್ಲ. ಹಾಗಾಗಿ 410 ಶೋಗಳು ಮಾತ್ರ ಉಳಿಯುತ್ತವೆ. ಇತ್ತೀಚೆಗೆ ಬಂದ ಪರಭಾಷೆಯ ದೊಡ್ಡ ಸಿನಿಮಾಗಳಿಗಿಂತ ಕನ್ನಡದ 'ಕಾಟೇರ' ಚಿತ್ರಕ್ಕೆ ಕಮ್ಮಿ ಶೋಗಳು ಸಿಕ್ಕಿರುವುದು ಸುಳ್ಳಲ್ಲ. ಇದೇ ವರ್ಷ ಬಂದಿದ್ದ ದರ್ಶನ್ ನಟನೆಯ 'ಕ್ರಾಂತಿ' ಚಿತ್ರಕ್ಕೆ ಇದಕ್ಕಿಂತ ಹೆಚ್ಚು ಶೋಗಳು ಸಿಕ್ಕಿದ್ದು ಸುಳ್ಳಲ್ಲ.

'ಸಲಾರ್' ಹಾಗೂ 'ಡಂಕಿ' ಸಿನಿಮಾಗಳ ಬೆನ್ನಲ್ಲೇ 'ಕಾಟೇರ' ತೆರೆಗೆ ಬಂದರೆ ಶೋ ಸ್ಕ್ರೀನ್‌ಗಳು, ಶೋಗಳು ಸಿಗಲ್ಲ ಎನ್ನುವ ಆತಂಕ ಕೆಲವರಲ್ಲಿತ್ತು. ಅದು ಒಂದು ಮಟ್ಟಿಗೆ ನಿಜ ಆಗಿರುವಂತೆ ಕಾಣುತ್ತಿದೆ. ಪ್ರಭಾಸ್ ನಟನೆಯ 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳ ಆರ್ಭಟ ಕಮ್ಮಿ ಆಗಿದ್ದರೂ 'ಕಾಟೇರ'ಗೆ ಹೆಚ್ಚು ಶೋಗಳು ಸಿಕ್ಕಿಲ್ಲ. ಇದೆಲ್ಲದರ ನಡುವೆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಸಿನಿಮಾ ಚೆನ್ನಾಗಿದ್ದರೆ ಬೇಡಿಕೆಗೆ ತಕ್ಕಂತೆ ಶೋಗಳು, ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಬಹುದು. ಈ ಹಿಂದೆ ಸಾಕಷ್ಟು ಸಿನಿಮಾಗಳ ವಿಚಾರದಲ್ಲಿ ಈ ರೀತಿ ಆಗಿದೆ. ಹಾಗಾಗಿ ಸದ್ಯಕ್ಕೆ 'ಕಾಟೇರ' ಚಿತ್ರಕ್ಕೆ ಸಿಕ್ಕಿರುವ ಶೋಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಸಿಗುವ ರೆಸ್ಪಾನ್ಸ್ ಮೇಲೆ ಮುಂದಿನ ಲೆಕ್ಕಾಚಾರ ನಿಂತಿದೆ. ಹೊರ ರಾಜ್ಯಗಳಲ್ಲಿ ಚಿತ್ರಕ್ಕೆ 37 ಶೋಗಳು ಸಿಕ್ಕಿದೆ. ಒಂದಂತೂ ನಿಜ ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಥಿಯೇಟರ್‌ಗಳು ಸಿಗಲ್ಲ ಎನ್ನುವುದು ಬೇಸರದ ಸಂಗತಿ. ಇದೇ ಕಾರಣಕ್ಕೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು 'ಕಾಟೇರ' ಚಿತ್ರದ ಫಸ್ಟ್ ಡೇ ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರವೂ ಶುರುವಾಗಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಸಿನಿಮಾ 2 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇನ್ನು ಸಿನಿಮಾ ನೋಡಿದ ಪ್ರೇಕ್ಷಕರು ತರುಣ್ ಸುಧೀರ್ ನಿರ್ದೇಶನ, ಮಾಸ್ತಿ ಸಂಭಾಷಣೆ, ದರ್ಶನ್ ಪರ್ಫಾರ್ಮನ್ಸ್ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ.


Click it and Unblock the Notifications











