ಹೌಸ್‌ಫುಲ್‌.. ಹೌಸ್‌ಫುಲ್.. ಹೌಸ್‌ಫುಲ್: ತಮಿಳುನಾಡು, ಗೋವಾದಲ್ಲೂ 'ಕಾಟೇರ'ನ ಕಿಚ್ಚು

ಚಾಲೆಂಜಿಂಗ್ ಸ್ಟಾರ್‌ ದರ್ಶನ್ 'ಕಾಟೇರ'ನಾಗಿ ಬಂದು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದಾರೆ. ಸಿನಿಮಾ ರಾಜ್ಯಾದ್ಯಂತ ತೆರೆಗಪ್ಪಳಿಸಿ ಸಂಚಲನ ಸೃಷ್ಟಿಸಿದೆ. ಕೊಟಿ ಕೋಟಿ ಕೊಳ್ಳೆ ಹೊಡೆದು ಹುಬ್ಬೇರಿಸಿದೆ. ಕನ್ನಡದಲ್ಲಿ ಮಾತ್ರ ಸಿನಿಮಾ ಬಿಡುಗಡೆಯಾಗಿದೆ. ಕರ್ನಾಟಕದ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಕೆಲವೆಡೆ ಸಿನಿಮಾ ಬಿಡುಗಡೆಯಾಗಿದೆ.

ಈ ವರ್ಷ ಕನ್ನಡ ಚಿತ್ರರಂಗ ಪ್ರೇಕ್ಷಕರ ಬರ ಎದುರಿಸುತ್ತಿತ್ತು. 'ಕಾಟೇರ' ಸಿನಿಮಾ ಬಂದು ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಥಿಯೇಟರ್‌ಗೆ ಬರುವಂತಾಗಿದೆ. ಸೆಕೆಂಡ್ ಶೋಗಳು ಕೂಡ ಹೌಸ್‌ಫುಲ್ ಆಗುತ್ತಿದೆ. ತರುಣ್ ಟೇಕಿಂಗ್, ದರ್ಶನ್ ಪರ್ಫಾರ್ಮನ್ಸ್, ಮಾಸ್ತಿ ಡೈಲಾಗ್ಸ್ ಎಲ್ಲವೂ ಸಿನಿಮಾ ಸಿನಿಮಾ ತೆರೆಮೇಲೆ ಜಾದೂ ಮಾಡಿದೆ. 3 ಗಂಟೆಯ ಸುದೀರ್ಘ ಚಿತ್ರವನ್ನು ಕೂಡ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. 70ರ ಕಾಲಘಟ್ಟದ ಕಥೆ, ಉಳುವವನೆ ಭೂಮಿಕ ಒಡೆಯ ಕಾಯ್ದೆ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟದ ಕಥೆ ಪ್ರೇಕ್ಷಕರ ಮನಗೆದ್ದಿದೆ.

Darshan starrer Kaatera gets a good response in tamilnadu and goa

ದರ್ಶನ್ ಇತ್ತೀಚೆಗೆ ರೆಗ್ಯೂಲರ್ ಕಮರ್ಷಿಯಲ್ ಸಿನಿಮಾಗಳನ್ನು ಪಕ್ಕಕ್ಕಿಟ್ಟು ಒಂದೊಳ್ಳೆ ಸಂದೇಶ ಇರುವ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. 'ಯಜಮಾನ' ಚಿತ್ರದಲ್ಲಿ ಎಣ್ಣೆ ಗಾಣ, 'ಕ್ರಾಂತಿ' ಚಿತ್ರದಲ್ಲಿ ಸರ್ಕಾರಿ ಶಾಲೆಗಳ ಕಥೆ ಇತ್ತು. 'ಕಾಟೇರ' ಚಿತ್ರದಲ್ಲಿ ಹಳ್ಳಿಗಳ, ರೈತರ ನೋವು ನಲಿವಿನ ಕಥೆ ಇದೆ. ಉಳ್ಳವರ, ಇಲ್ಲದವರ ನಡುವಿನ ಸಂಘರ್ಷವಿದೆ.

'ಕಾಟೇರ' ಸಿನಿಮಾ ಎಲ್ಲಾ ವಿಭಾಗಗಳಲ್ಲೂ ಬೆಸ್ಟ್ ಎನಿಸಿಕೊಂಡಿದೆ. ಸಣ್ಣ ಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟರೆ ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಆಗಿ ರೂಪುಗೊಂಡಿದೆ. ಅದೇ ಕಾರಣಕ್ಕೆ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಶುಕ್ರವಾರ ಮಧ್ಯರಾತ್ರಿಯಿಂದಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎರಡು ದಿನಕ್ಕೆ ಸಿನಿಮಾ 37 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿದೆ. 3ನೇ ದಿನವೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಬರೀ ಕರ್ನಾಟಕದಲ್ಲಿ ಮಾತ್ರವಲ್ಲ ಅಕ್ಕಪಕ್ಕದ ರಾಜ್ಯಗಳಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ತಮಿಳುನಾಡಿನ ಹೊಸೂರಿನಲ್ಲಿರುವ ಗ್ರ್ಯಾಂಡ್ ಸಿನಿಮಾಸ್ ಚಿತ್ರಮಂದಿರದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೇಡಿಕೆ ನೋಡಿ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಶುಕ್ರವಾರ, ಶನಿವಾರ ಕೇವಲ ಒಂದೊಂದು ಶೋಗಳಲ್ಲಿ ಸಿನಿಮಾ ಪ್ರದರ್ಶನವಾಗಿತ್ತು. 3ನೇ ದಿನ 3 ಶೋಗಳು ಸಿಕ್ಕಿದೆ.

ಇನ್ನು ಗೋವಾದಲ್ಲಿ ಮೊದಲ ದಿನ 2 ಶೋಗಗಳು ಮಾತ್ರ 'ಕಾಟೇರ' ಚಿತ್ರಕ್ಕೆ ಸಿಕ್ಕಿತ್ತು. ಭಾನುವಾರದ ವೇಳೆಗೆ ಐದಾರು ಕಡೆಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ನಿಧಾನವಾಗಿ 'ಕಾಟೇರ' ಹೊರ ರಾಜ್ಯಗಳಲ್ಲಿ ಸದ್ದು ಮಾಡುತ್ತಿದೆ. ಒಟ್ನಲ್ಲಿ ಎಲ್ಲೆಲ್ಲೂ 'ಕಾಟೇರ' ಕರಾಮತ್ತು ನಡೀತಿದೆ. ಬೆಂಗಳೂರಿನಲ್ಲಿ 4ನೇ ದಿನದ ಶೋಗಳು ನಿಧಾನವಾಗಿ ಫಾಸ್ಟ್ ಫಿಲ್ಲಿಂಗ್ ಆಗುತ್ತಿದೆ. ಆ ಮೂಲಕ ಸಿನಿಮಾ ಮುಂದಿನ ದಿನಗಳಲ್ಲಿ ಕೂಡ ಸದ್ದು ಮಾಡಲು ಸುಳಿವು ಸಿಗುತ್ತಿದೆ.

ಕಮರ್ಷಿಯಲ್ ಸಿನಿಮಾ ಚೌಕಟ್ಟಿನಲ್ಲೇ ತರುಣ್ ವಿಭಿನ್ನವಾಗಿ ಚಿತ್ರವನ್ನು ನಿರೂಪಣೆ ಮಾಡಿ ಗೆದ್ದಿದ್ದಾರೆ. ಕಥೆ ಹಳೆಯದ್ದೇ ಎನಿಸಿದರೂ ಅದನ್ನು ತೆರೆಗೆ ತಂದಿರುವ ರೀತಿ ಚೆನ್ನಾಗಿದೆ. ಅದೇ ಕಾರಣಕ್ಕೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಕೆಲವರು ಥಿಯೇಟರ್‌ಗಳಿಂದ ಸಿನಿಮಾ ನೋಡಿ ಭಾವುಕರಾಗಿ ಹೊರ ಬರುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲೂ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯಿ ಸಿಗುತ್ತಿದೆ.

ಇನ್ನು ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಜೀ ಸಂಸ್ಥೆ ಪಾಲಾಗಿದೆ. ಸಾಮಾನ್ಯವಾಗಿ ಸಿನಿಮಾಗಳು ತೆರೆಕಂಡು 48 ದಿನಗಳ ಬಳಿಕ ಓಟಿಟಿಗೆ ಬರುತ್ತದೆ. ಆದರೆ ಇತ್ತೀಚೆಗೆ ತಿಂಗಳಿಗೂ ಮೊದ್ಲೆ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿದೆ. 'ಕಾಟೇರ' ಯಾವಾಗ ಓಟಿಟಿಗೆ ಬರುತ್ತದೆ ಎನ್ನುವುದನ್ನು ನೋಡಬೇಕಿದೆ. ಚಿತ್ರಕ್ಕೆ ಪೈರಸಿ ಕಾಟವೂ ಎದುರಾಗಿದೆ. ಇನ್ನು ಸೋಮವಾರ(ಜನವರಿ 1) ಸಂಜೆ ಒರಾಯನ್ ಮಾಲ್‌ನಲ್ಲಿ ಸಕ್ಸಸ್ ಮೀಟ್ ಹಮ್ಮಿಕೊಳ್ಳಲಾಗಿದೆ. ನಟ ದರ್ಶನ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಬರ್ತಿದ್ದಾರೆ.

More from Filmibeat

English summary
Darshan's Kaatera gets a good response out of karnataka also
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X