ಬಿಡುಗಡೆಯಾದ 4 ದಿನಕ್ಕೆ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡ 'ಕಾಟೇರ' ಮೋಷನ್ ಪೋಸ್ಟರ್!
ಸದ್ಯ ದರ್ಶನ್ ಅಭಿಮಾನಿಗಳ ಚಿತ್ರ ದರ್ಶನ್ ನಟನೆಯ ಕಾಟೇರ ಚಿತ್ರದತ್ತ ಇದೆ. ಕಳೆದ ಬಾರಿ ರಾಬರ್ಟ್ ಮೂಲಕ ದರ್ಶನ್ ಅವರಿಗೆ ಹಿಟ್ ತಂದುಕೊಟ್ಟಿದ್ದ ನಿರ್ದೇಶಕ ತರುಣ್ ಸುಧೀರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಈ ಜೋಡಿಯ ಎರಡೇ ಚಿತ್ರವಾಗಿದೆ.
ಇನ್ನು ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಫೆಬ್ರವರಿ 16ರಂದು ಸರಿಯಾಗಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಕಾಟೇರ ಸಿನಿಮಾದ ಟೈಟಲ್ ಲಾಂಚ್ ಆಯಿತು. ಮೊದಲೇ ಹರಿದಾಡಿದ್ದ ಸುದ್ದಿಯಂತೆ ಚಿತ್ರಕ್ಕೆ ಕಾಟೇರ ಎಂಬ ಶೀರ್ಷಿಕೆಯನ್ನೇ ಇಡಲಾಯಿತು. 1970ರಲ್ಲಿ ನಡೆದ ನೈಜ ಘಟನೆಯ ಆಧಾರಿತ ಚಿತ್ರವಿದು ಎಂದು ಚಿತ್ರತಂಡ ತಿಳಿಸಿದೆ.
ಚಿತ್ರದ ಮೋಷನ್ ಪೋಸ್ಟರ್ ಅನ್ನು ಸಹ ಅದೇ ದಿನ ರಾಕ್ ಲೈನ್ ಎಂಟರ್‌ಟೈನ್‌ಮೆಂಟ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳಿಸಲಾಗಿದ್ದು, ಮೋಷನ್ ಪೋಸ್ಟರ್ ವಿನ್ಯಾಸ ಹಾಗೂ ಅದರ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಕಂಡ ದರ್ಶನ್ ಅಭಿಮಾನಿಗಳು ಫಿದಾ ಆಗಿದ್ದರು.

ಹಲವಾರು ದಿನಗಳಿಂದ ತಮ್ಮ ನೆಚ್ಚಿನ ನಟನ ಚಿತ್ರಗಳಿಗೆ ಕ್ವಾಲಿಟಿ ಪೋಸ್ಟರ್ ಹಾಗೂ ಟೀಸರ್‌ಗಳು ಬಿಡುಗಡೆಯಾಗುವದೇ ಇಲ್ಲ ಎಂಬ ದರ್ಶನ್ ಅಭಿಮಾನಿಗಳ ಬೇಸರವನ್ನು ಈ ಮೋಷನ್ ಪೋಸ್ಟರ್ ಅಳಿಸಿಹಾಕಿತ್ತು. ಹೀಗೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡ ಕಾಟೇರ ಚಿತ್ರದ ಮೋಷನ್ ಪೋಸ್ಟರ್ ಇಂದು ( ಫೆಬ್ರವರಿ 20 ) ಒಂದು ಮಿಲಿಯನ್ ವೀಕ್ಷಣೆಯನ್ನು ದಾಟಿದೆ.
ಈ ಕುರಿತಾಗಿ ರಾಕ್ ಲೈನ್ ಎಂಟರ್‌ಟೈನ್‌ಮೆಂಟ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಮೋಷನ್ ಪೋಸ್ಟರ್‌ಗೆ ಅತ್ಯದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications











