Exclusive: 15 ದಿನಗಳಿಂದ ಕನಕಪುರದಲ್ಲಿ ಬೀಡು ಬಿಟ್ಟ ದರ್ಶನ್: ಅಸಲಿ ಮ್ಯಾಟರ್ ಏನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಶೂಟಿಂಗ್ ಭರದಿಂದ ಸಾಗ್ತಿದೆ. ಕನಕಪುರ ಬಳಿ ಸಿನಿಮಾ ಶೂಟಿಂಗ್ ನಡೆಸುತ್ತಿರುವುದಾಗಿ ನಿರ್ದೇಶಕ ತರುಣ್ ಸುಧೀರ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. 'ಕ್ರಾಂತಿ' ನಂತರ ದರ್ಶನ್ ನಟಿಸುತ್ತಿರುವ ಪೀರಿಯಡ್ ಆಕ್ಷನ್ ಡ್ರಾಮಾ 'ಕಾಟೇರ' ಭಾರೀ ನಿರೀಕ್ಷೆ ಹುಟ್ಟಾಕಿದೆ. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಾಧನಾ ರಾಮ್ ನಟಿಸ್ತಿದ್ದಾರೆ.

D56 ಟೈಟಲ್‌ನಲ್ಲಿ ಶುರುವಾಗಿದ್ದ ಚಿತ್ರಕ್ಕೆ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕಾಟೇರ' ಎನ್ನುವ ಟೈಟಲ್ ಫಿಕ್ಸ್ ಮಾಡಿ ಅನೌನ್ಸ್ ಮಾಡಿತ್ತು ಚಿತ್ರತಂಡ. 'ಕಾಟೇರ' ಮೋಷನ್ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬಹಳ ವಿಭಿನ್ನವಾದ ಪಾತ್ರದಲ್ಲಿ ದರ್ಶನ್ ಬಣ್ಣ ಹಚ್ಚಿದ್ದಾರೆ. ಹಂಪಿ ಸುತ್ತಾಮುತ್ತಾ 70ರ ದಶಕದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ತರುಣ್ ಸುಧೀರ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಮಾಸ್ತಿ ಸಂಭಾಷಣೆ ಈ ಚಿತ್ರಕ್ಕಿದೆ.

Darshan Starrer Kaatera shooting going on full swing Near Kanakapura

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಚಿತ್ರಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಸುಧಾಕರ್ ರಾಜ್ ಸಿನಿಮಾಟೋಗ್ರಫಿ, ಕೆ. ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ನಿರ್ದೇಶಕ ಜಡೇಶ್ ಹಂಪಿ ಜೊತೆ ಸೇರಿ ತರುಣ್ ಸುಧೀರ್ ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದಾರೆ. ದರ್ಶನ್, ರಾಧನಾ ಹೊರತುಪಡಿಸಿದರೆ ಜಗಪತಿ ಬಾಬು ಚಿತ್ರ ಪ್ರಮುಖ ಪಾತ್ರದಲ್ಲಿ ನಟಿಸೋದು ಕನ್ಫರ್ಮ್ ಆಗಿದೆ. ಬಹಳ ಅದ್ಧೂರಿಯಾಗಿ 'ಕಾಟೇರ' ಸಿನಿಮಾ ನಿರ್ಮಾಣ ಆಗ್ತಿದೆ.

ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಮುಹೂರ್ತ ಮಾಡಿ 'ಕಾಟೇರ' ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಮೊದಲಿಗೆ ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಣ ಆರಂಭಿಸಿತ್ತು ಚಿತ್ರತಂಡ. ನಂತರ ಹೈದರಾಬಾದ್‌ನಲ್ಲಿ ಒಂದು ಶೆಡ್ಯೂಲ್ ಶೂಟಿಂಗ್ ಮಾಡಿ ಬಂದಿತ್ತು. ಇದೀಗ ಕನಕಪುರ ಬಳಿ ಚಿತ್ರೀಕರಣ ನಡೆಸಲಾಗ್ತಿದೆ. ಫೆಬ್ರವರಿ 22ರಿಂದ ಶೆಡ್ಯೂಲ್ ಶುರುವಾಗಿದ್ದು ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆಹಿಡಿಯಲಾಗ್ತಿದೆ. ಇನ್ನು 4 ದಿನಗಳ ಕಾಲ ಅಲ್ಲೇ ಚಿತ್ರೀಕರಣ ನಡೆಸೋದಾಗಿ ತರುಣ್ ಸುಧೀರ್ ಮಾಹಿತಿ ನೀಡಿದ್ದಾರೆ.

Darshan Starrer Kaatera shooting going on full swing Near Kanakapura

'ಕಾಟೇರ' ಚಿತ್ರದಲ್ಲಿ ದರ್ಶನ್ ಹಿಂದೆಂದೂ ಮಾಡಿರದಂತ ವಿಭಿನ್ನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮಚ್ಚು ಹಿಡಿದು ತನ್ನವರಿಗಾಗಿ ಹೋರಾಡುವ ನಾಯಕನಾಗಿ ಅಬ್ಬರಿಸಲಿದ್ದಾರೆ. ಮೋಷನ್ ಪೋಸ್ಟರ್‌ನಲ್ಲಿರುವ "ಪ್ರತೀ ಮಚ್ಚು ಎರಡ್ ದಪ ಕೆಂಪಾಗ್ತೈತೆ.. ಬೆಂಕೀಲಿ ಬೆಂದಾಗ.. ರಕ್ತದಲ್ಲಿ ನೆಂದಾಗ" ಡೈಲಾಗ್ ಈಗಾಗಲೇ ಅಭಿಮಾನಿಗಳ ಮನಗೆದ್ದಿದೆ. ಇಂತಹ ಮತ್ತಷ್ಟು ಖಡಕ್ ಡೈಲಾಗ್‌ಗಳನ್ನು ಚಿತ್ರಕ್ಕಾಗಿ ಮಾಸ್ತಿ ಬರಿತಿದ್ದಾರೆ. ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಕೂಡ ಇರಲಿದ್ದು ತಾಯಿ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ಕುತೂಹಲ ಇದೆ.

ಪ್ರಮುಖ ಸನ್ನಿವೇಶಗಳ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ವರ್ಷಾಂತ್ಯಕ್ಕೆ 'ಕಾಟೇರ' ತೆರೆಮೇಲೆ ಆರ್ಭಟಿಸುವ ಸಾಧ್ಯತೆಯಿದೆ. ಮತ್ತಷ್ಟು ಪ್ರತಿಭಾನ್ವಿತ ಕಲಾವಿದರು ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇನ್ನು 70 ದಶಕವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಕಸರತ್ತು ನಡೆಸುತ್ತಿದೆ. 'ಕಾಟೇರ' ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಗುತ್ತಿದೆ.

More from Filmibeat

English summary
Darshan Starrer Kaatera shooting going on full swing Near Kanakapura. Current schedule continues upto february 10th. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X