15 ವರ್ಷದ ನಂತರ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಯ್ತು ಡಿ ಬಾಸ್ ಚಿತ್ರ

By Pavithra

Recommended Video

ದರ್ಶನ್ ಅಭಿನಯದ ಕರಿಯ ಸಿನಿಮಾ ಇಂದಿಗೆ 15 ವರ್ಷ ಪೂರೈಸಿದೆ | FIlmibeat Kannada

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಹಾಗೂ ಕನ್ನಡದ ಶೋ ಮ್ಯಾನ್ ಡೈರೆಕ್ಟರ್ ಪ್ರೇಮ್ ಕಾಂಬಿನೇಶನ್ ನಲ್ಲಿ ಮೂಡಿ ಬಂದಿದ್ದ ಚಿತ್ರ ಕರಿಯಾ. ದರ್ಶನ್ ಅಭಿನಯದ ಐದನೇ ಸಿನಿಮಾ ಇದಾಗಿದ್ದು ಔಟ್ ಅಂಡ್ ಔಟ್ ಮಾಸ್ ಮಾಸ್ ಸ್ಟೋರಿ ಇದ್ದ ಕರಿಯಾ ಚಿತ್ರವನ್ನ ಕನ್ನಡ ಸಿನಿಮಾ ಪ್ರೇಕ್ಷಕರು ಮೆಚ್ಚಿಕೊಂಡಾಡಿದ್ದರು.

ಆನೇಕಲ್ ಬಾಲ್ ರಾಜ್ ನಿರ್ಮಾಣ ಮಾಡಿದ್ದ ಕರಿಯಾ ಸಿನಿಮಾಗೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದರು. ದರ್ಶನ್ ಜೊತೆಯಲ್ಲಿ ಕಾಲಿವುಡ್ ನಾಯಕಿ ಅಭಿನಯಶ್ರೀ ಅಭಿನಯಿಸಿದ್ದರು. ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿತ್ತು.

ಕರಿಯಾ ಸಿನಿಮಾ ಬಿಡುಗಡೆಯಾಗಿ ಶತದಿನೋತ್ಸವ ಪೂರೈಸುವುದರ ಜೊತೆಗೆ ಒಳ್ಳೆ ಸಿನಿಮಾಗಳು ಬಿಡುಗಡೆ ಆಗದೇ ಇದ್ದಾಗ ಆ ಜಗಕ್ಕೆ ಇಂದಿಗೂ ಕರಿಯ ಸಿನಿಮಾವನ್ನ ಹಾಕಲಾಗುತ್ತಿದೆ. ಅನೇಕ ಬಾರಿ ಕರಿಯ ಸಿನಿಮಾ ರೀ-ರಿಲೀಸ್ ಆಗಿದೆ. ಕರಿಯ ಚಿತ್ರ ಬಿಡುಗಡೆಯಾಗಿ ಇಂದಿಗೆ ಹದಿನೈದು ವರ್ಷಗಳು ಪೂರೈಸಿವೆ. ಇಂದಿಗೂ ಚಿತ್ರ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ. ಪ್ರೇಕ್ಷಕರ ಮನಸ್ಸಿನಲ್ಲಿ ಕರಿಯ ಚಿತ್ರ ಹೇಗೆ ನೆನಪಿನಲ್ಲಿದೆ ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ. ಮುಂದೆ ಓದಿ

ಕರಿಯ ಬಿಡುಗಡೆಯಾಗಿ ಹದಿನೈದು ವರ್ಷ

ಕರಿಯ ಬಿಡುಗಡೆಯಾಗಿ ಹದಿನೈದು ವರ್ಷ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕರಿಯ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಹದಿನೈದು ವರ್ಷ ತುಂಬಿದೆ. 3/1/2003 ರಲ್ಲಿ ಚಿತ್ರ ರಾಜ್ಯಾದಂತ್ಯ ತೆರೆಗೆ ಬಂದಿತ್ತು.

ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡ್ತಿದ್ದಾನೆ ಕರಿಯ

ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡ್ತಿದ್ದಾನೆ ಕರಿಯ

ಕರಿಯ ಚಿತ್ರ ಬಿಡುಗಡೆಯಾಗಿ ಹದಿನೈದು ವರ್ಷ ಪೂರೈಸಿರುವ ಸಂತಸದ ವಿಚಾರವನ್ನ ಅಭಿಮಾನಿಗಳು ಸಂಭ್ರಮದಿಂದ ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣವಾಗಿ ಕರಿಯ ಚಿತ್ರದ್ದೆ ಸುದ್ದಿಯಾಗಿದ್ದು ಟ್ವಿಟ್ಟರ್ ನಲ್ಲಿ ಬೆಂಗಳೂರಿನ ನಂಬರ್ 1 ಟ್ರೆಂಡಿಂಗ್ ನಲ್ಲಿ ಕರಿಯ ಚಿತ್ರ ಇದೆ.

ಪ್ರೇಮ್ ನಿರ್ದೇಶನದಲ್ಲಿ ದರ್ಶನ್

ಪ್ರೇಮ್ ನಿರ್ದೇಶನದಲ್ಲಿ ದರ್ಶನ್

ಹದಿನೈದು ವರ್ಷದ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ. ಈಗಾಗಲೇ ನಿರ್ದೇಶಕ ಪ್ರೇಮ್ ಅವರಿಗೆ ಕಾಲ್ ಶೀಟ್ ನೀಡಿರುವ ದರ್ಶನ್ ಪ್ರೇಮ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ಶೀಘ್ರದಲ್ಲೇ ಚಿತ್ರದ ಬಗ್ಗೆ ಮಾಹಿತಿ

ಶೀಘ್ರದಲ್ಲೇ ಚಿತ್ರದ ಬಗ್ಗೆ ಮಾಹಿತಿ

ಸದ್ಯ 'ದಿ ವಿಲನ್' ಸಿನಿಮಾದಲ್ಲಿ ಬ್ಯುಸಿ ಆಗಿರುವ ಪ್ರೇಮ್ ಈ ಚಿತ್ರದ ನಂತರ ದರ್ಶನ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರಕ್ಕೆ 'ಆಂಜನೇಯ' ಅಂತ ಹೆಸರಿಟ್ಟಿದ್ದಾರೆ ಎಂದು ಸುದ್ದಿ ಆಗಿದೆ. ಆದಷ್ಟು ಬೇಗ ಈ ಜೋಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ.

More from Filmibeat

English summary
kannada actor Darshan starrer Kariya Movie complets fifteen years. The movie was directed by Jogi Prem. this news now trending on twitter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X