ಮುಂಬೈ, ಪುಣೆ, ಹೈದ್ರಾಬಾದ್‌ನಲ್ಲಿ 'ಕ್ರಾಂತಿ' ಟಿಕೆಟ್ ಬುಕ್ಕಿಂಗ್ ಆರಂಭ: ಹೈದ್ರಾಬಾದ್‌ನಲ್ಲಿ ಒಂದು ಶೋ ಸೋಲ್ಡೌಟ್‌!

ದರ್ಶನ್ 'ಕ್ರಾಂತಿ' ರಿಲೀಸ್‌ಗೆ ಒಂದು ದಿನ ಮಾತ್ರ ಬಾಕಿಯಿದೆ. ನಾಳೆ ಇಷ್ಟೊತ್ತಿಗೆ ಅಭಿಮಾನಿಗಳು ಫಸ್ಟ್ ಶೋ ಸಿನಿಮಾ ನೋಡಿ ಹೊರ ಬಂದಿರುತ್ತಾರೆ. ಆನ್‌ಲೈನ್‌ನಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದ್ದು ಫಸ್ಟ್ ಡೇ ಭರ್ಜರಿ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ.

ಇದೀಗ ಹೊರ ರಾಜ್ಯಗಳಲ್ಲೂ ಬುಕ್ಕಿಂಗ್ ಶುರುವಾಗಿದೆ. ಬುಕ್ ಮೈಶೋನಲ್ಲಿ ಸಿನಿರಸಿಕರು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಯಾವುದೇ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಲಿಲ್ಲ. 'ಕುರುಕ್ಷೇತ್ರ' ಸಿನಿಮಾ ಕೊಂಚ ಮಟ್ಟಿಗೆ ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿದಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿತ್ತು. ಆದರೂ ಕೂಡ ಚಾಲೆಂಜಿಂಗ್ ಸ್ಟಾರ್‌ಗೆ ಹೊರ ರಾಜ್ಯಗಳಲ್ಲಿ ಅಭಿಮಾನಿಗಳು ಇದ್ದಾರೆ.

ಮೊದಲಿಗೆ 'ಕ್ರಾಂತಿ' ಚಿತ್ರವನ್ನು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಏಕಕಾಲಕ್ಕೆ 5 ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಾರೆ ಎನ್ನಲಾಗಿತ್ತು. 5 ಭಾಷೆಗಳಲ್ಲಿ ಸಾಂಗ್ಸ್ ಕೂಡ ರಿಲೀಸ್ ಆಗಿತ್ತು. ಆದರೆ ರಿಲೀಸ್ ವಿಚಾರದಲ್ಲಿ ಮಾತ್ರ ಚಿತ್ರತಂಡ ಹಿಂದೇಟು ಹಾಕಿದೆ. ಮೊದಲ ಆದ್ಯತೆ ಕನ್ನಡ ಎನ್ನುತ್ತಿದೆ.

ಪುಣೆ, ದೆಹಲಿ, ಚೆನ್ನೈನಲ್ಲಿ ಬುಕ್ಕಿಂಗ್

ಪುಣೆ, ದೆಹಲಿ, ಚೆನ್ನೈನಲ್ಲಿ ಬುಕ್ಕಿಂಗ್

ಸದ್ಯ ಮುಂಬೈ, ಪುಣೆ, ಚೆನ್ನೈ, ದೆಹಲಿ ಹಾಗೂ ಹೈದರಾಬಾದ್‌ನಲ್ಲಿ 'ಕ್ರಾಂತಿ' ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಕನ್ನಡದಲ್ಲೇ ಅಲ್ಲೂ ಕೂಡ ಸಿನಿಮಾ ಬಿಡುಗಡೆ ಆಗುತ್ತಿದೆ. ಆಯಾ ಭಾಷೆಗೆ ಸಿನಿಮಾ ಡಬ್ ಆಗಿದ್ದರೂ ಕನ್ನಡ ವರ್ಷನ್‌ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ನಿಧಾನವಾಗಿ ಸಿನಿರಸಿಕರು ಟಿಕೆಟ್ ಬುಕ್ ಮಾಡಲು ಶುರು ಮಾಡಿದ್ದಾರೆ. ಹೆಚ್ಚು ಸಂಜೆ ಶೋಗಳನ್ನು 'ಕ್ರಾಂತಿ' ಚಿತ್ರಕ್ಕಾಗಿ ನೀಡಲಾಗಿದೆ. ನಿಧಾನವಾಗಿ ಫಾಸ್ಟ್ ಫಿಲ್ಲಿಂಗ್ ಶುರುವಾಗಿದೆ. ಹೈದರಾಬಾದ್‌ನಲ್ಲಿ ಒಂದು ಶೋ ಈಗಾಗಲೇ ಸೋಲ್ಡೌಟ್ ಆಗಿದೆ.

ರಾಜ್ಯದಲ್ಲಿ ಭರ್ಜರಿ ರೆಸ್ಪಾನ್ಸ್

ರಾಜ್ಯದಲ್ಲಿ ಭರ್ಜರಿ ರೆಸ್ಪಾನ್ಸ್

ರಾಜ್ಯದಲ್ಲಿ ಕ್ರಾಂತಿ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್‌ಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಅಭಿಮಾನಿಗಳು ಫಸ್ಟ್‌ಡೇ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಮುಗಿಬಿದ್ದ ಟಿಕೆಟ್ ಖರೀದಿಸುತ್ತಿದ್ಧಾರೆ. ಈಗಾಗಲೇ ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಬುಕ್ ಆಗಿದೆ. ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ 2 ಕೋಟಿಗೂ ಅಧಿಕ ಕಲೆಕ್ಷನ್ ಆಗಿರುವ ಲೆಕ್ಕಾಚಾರ ನಡೀತಿದೆ. ಹಾಗಾಗಿ ಚಿತ್ರಕ್ಕೆ ಫಸ್ಟ್‌ ಡೇ ಭಾರೀ ಓಪನಿಂಗ್ ಸಿಗುವ ನಿರೀಕ್ಷೆ ಇದೆ.

ವರ್ಷದ ಬಹುನಿರೀಕ್ಷಿತ ಚಿತ್ರ

ವರ್ಷದ ಬಹುನಿರೀಕ್ಷಿತ ಚಿತ್ರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ರಿಲೀಸ್ ಆಗಿ 21 ತಿಂಗಳು ಕಳೆದಿದೆ. ಬಹಳ ಸಮಯದ ನಂತರ 'ಕ್ರಾಂತಿ' ತೆರೆಗಪ್ಪಳಿಸುತ್ತಿದೆ. ಕಳೆದ ವರ್ಷವೇ ಬರಬೇಕಿದ್ದ ಸಿನಿಮಾ ಕೊಂಚ ತಡವಾಗಿ ಈ ವಾರ ತೆರೆಗೆ ಬರ್ತಿದೆ. ಆದರೆ ಅಭಿಮಾನಿಗಳ ಕುತೂಹಲ ಮಾತ್ರ ಕಮ್ಮಿ ಆಗಿಲ್ಲ. ವರ್ಷದ ಬಹುನಿರೀಕ್ಷಿತ ಸಿನಿಮಾ 'ಕ್ರಾಂತಿ' ಎನ್ನಬಹುದು. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ ರಿಲೀಸ್ ಆಗಿರುವ ಸಾಂಗ್ಸ್ ಹಾಗೂ ಟ್ರೈಲರ್ ಆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಭರ್ಜರಿ ಸೆಲೆಬ್ರೇಷನ್‌ಗೆ ಸಿದ್ಧತೆ

ಭರ್ಜರಿ ಸೆಲೆಬ್ರೇಷನ್‌ಗೆ ಸಿದ್ಧತೆ

ದೊಡ್ಡಮಟ್ಟದಲ್ಲಿ 'ಕ್ರಾಂತಿ' ರಾಯಣ್ಣನನ್ನು ಸ್ವಾಗತಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಥಿಯೇಟರ್‌ಗಳಲ್ಲಿ ಭಾರೀ ಸೆಲೆಬ್ರೇಷನ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈಗಾಗಲೇ ಥಿಯೇಟರ್‌ಗಳ ಮುಂದೆ ದೊಡ್ಡ ಕಟೌಟ್‌ಗಳನ್ನು ನಿಲ್ಲಿಸಲಾಗಿದೆ. ಬ್ಯಾನರ್‌ಗಳನ್ನು ಕಟ್ಟಿ ಅಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಸಿನಿಮಾ ರಿಲೀಸ್ ಆಗುತ್ತಿದ್ದೆ ಪಟಾಕಿ ಸಿಡಿಸಿ, ಜೈಕಾರ ಹಾಕಿ, ಕುಣಿದು ಕುಪ್ಪಳಿಸಲು ಕಾಯುತ್ತಿದ್ದಾರೆ. ಬಹುತೇಕ ಥಿಯೇಟರ್‌ಗಳಲ್ಲಿ ಅಭಿಮಾನಿಗಳು ಮುಂದಿನ ಸಾಲಿನ ಸೀಟ್‌ಗಳನ್ನು ಬುಕ್‌ ಮಾಡಿಕೊಂಡಿದ್ದಾರೆ. ಥಿಯೇಟರ್ ಅಂಗಳ ಮಾತ್ರವಲ್ಲ, ಸಿಲ್ವರ್ ಸ್ಟ್ರೀನ್ ಮುಂದೆ ಕೂಡ ಸೆಲೆಬ್ರೇಷನ್ ಜೋರಾಗಿರಲಿದೆ.

More from Filmibeat

English summary
Darshan Starrer Kranti Advance Booking Open All Over the States. Phenomenal Advance Booking All Over Karnataka. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X