ಫೆಬ್ರವರಿ 24ರಂದು ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರ? ಕ್ರಾಂತಿ ಏನಾಯಿತು?

ಇಂದು ಫೆಬ್ರವರಿ ತಿಂಗಳ ಅಂತಿಮ ಶುಕ್ರವಾರ. ಪ್ರತಿ ಶುಕ್ರವಾರದಂತೆ ಈ ಶುಕ್ರವಾರವೂ ಸಹ ವಿವಿಧ ಭಾಷೆಗಳ ಹಲವಾರು ಸಿನಿಮಾಗಳು ತೆರೆಗೆ ಬಂದಿವೆ. ಗೌಳಿ ಹಾಗೂ ಸೌತ್ ಇಂಡಿಯನ್ ಹೀರೊ ಸೇರಿದಂತೆ ಕನ್ನಡದ ಬರೋಬ್ಬರಿ ಒಂಬತ್ತು ಚಿತ್ರಗಳು ಇಂದು ತೆರೆಗೆ ಬಂದಿವೆ. ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ನಟನೆಯ ಸೆಲ್ಫಿ ಚಿತ್ರ ತೆರೆಗೆ ಬಂದಿದೆ.

ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿ ಇಂದು ಕನ್ನಡ ಮಾತ್ರವಲ್ಲದೇ ಪರ ಭಾಷಾ ಚಿತ್ರಗಳು ಸಹ ನೇರ ಬಿಡುಗಡೆ ಕಂಡಿವೆ. ಅದರಲ್ಲಿಯೂ ಸಿನಿಮಾಗಳಿಗೆ ದೊಡ್ಡ ಮಾರ್ಕೆಟ್ ಆಗಿರುವ ಬೆಂಗಳೂರಿನಲ್ಲಿ ಈ ಎಲ್ಲಾ ಚಿತ್ರಗಳೂ ಸಹ ತೆರೆ ಕಂಡಿದ್ದು, ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುವುದರಲ್ಲಿ ಪೈಪೋಟಿ ಏರ್ಪಟ್ಟಿದೆ.

Darshan starrer Kranti continues its run in Anupama theatre even after OTT release

ಹೀಗೆ ಹೊಸ ಚಿತ್ರಗಳು ತೆರೆಗೆ ಬಂದಿದ್ದರೂ ಸಹ ಈ ಹಿಂದೆ ತೆರೆಕಂಡಿದ್ದ ಪಠಾಣ್, ಲವ್ ಬರ್ಡ್ಸ್, ಆಂಟ್‌ ಮ್ಯಾನ್ ಹಾಗೂ ವಾತಿ ಚಿತ್ರಗಳು ಹೆಚ್ಚು ಸಂಖ್ಯೆಯ ಶೋ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕಳೆದ ತಿಂಗಳ ಗಣರಾಜ್ಯೋತ್ಸವದ ಪ್ರಯುಕ್ತ ತೆರೆಗೆ ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರ ಬೆಂಗಳೂರಿನಲ್ಲಿನ ತನ್ನ ಮುಖ್ಯ ಚಿತ್ರಮಂದಿರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೌದು, ಮೊನ್ನೆಯಷ್ಟೇ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಕ್ರಾಂತಿ ಚಿತ್ರ ಬಿಡುಗಡೆಗೊಂಡಿದ್ದರೂ ಸಹ ಇನ್ನೂ ಮುಖ್ಯ ಚಿತ್ರಮಂದಿರವನ್ನು ಕಳೆದುಕೊಳ್ಳದೇ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಹಾಗಾದರೆ ಇಂದು ( ಫೆಬ್ರವರಿ 24 ) ಬೆಂಗಳೂರಿನ ಯಾವ ಪ್ರಮುಖ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ವಿವರ ಈ ಕೆಳಕಂಡಂತಿದೆ..

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ: ಜೂಲಿಯಟ್ 2 ( ಕನ್ನಡ ) - ನಾಲ್ಕು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಗೌಳಿ ( ಕನ್ನಡ ) ನಾಲ್ಕು ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ : ಕ್ರಾಂತಿ ( ಕನ್ನಡ ) ನಾಲ್ಕು ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ: ಕ್ಯಾಂಪಸ್ ಕ್ರಾಂತಿ ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ ಸರ್ ( ತೆಲುಗು ) ಮೂರು ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ : ಹೊಟ್ಟೆಪಾಡು ( ಕನ್ನಡ ) ನಾಲ್ಕು ಪ್ರದರ್ಶನಗಳು

Darshan starrer Kranti continues its run in Anupama theatre even after OTT release

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: 1975 ( ಕನ್ನಡ ) ಎರಡು ಪ್ರದರ್ಶನಗಳು, ಗೌಳಿ ( ಕನ್ನಡ ) ನಾಲ್ಕು ಪ್ರದರ್ಶನಗಳು, ವಿಧಿ 370 ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ ಜೂಲಿಯಟ್ 2 ( ಕನ್ನಡ ) ಒಂದು ಪ್ರದರ್ಶನ.

ಊರ್ವಶಿ ಚಿತ್ರಮಂದಿರ: ಗೌಳಿ ( ಕನ್ನಡ ) ಎರಡು ಪ್ರದರ್ಶನಗಳು ಮತ್ತು ಸೆಲ್ಫಿ ( ಹಿಂದಿ ) ಎರಡು ಪ್ರದರ್ಶನಗಳು

ಇನ್ನು ಇಂದು ( ಫೆಬ್ರವರಿ 24 ) ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿರುವ ಟಾಪ್ 5 ಪಟ್ಟಿ ಹೇಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ಸೆಲ್ಫಿ - 222 ಪ್ರದರ್ಶನಗಳು

2. ಗೌಳಿ - 193 ಪ್ರದರ್ಶನಗಳು

3. ವಾತಿ / ಸರ್ - 191 ಪ್ರದರ್ಶನಗಳು

4. ಆಂಟ್ ಮ್ಯಾನ್ - 156 ಪ್ರದರ್ಶನಗಳು

5. ಪಠಾಣ್ - 76 ಪ್ರದರ್ಶನಗಳು

More from Filmibeat

English summary
Darshan starrer Kranti continues it's run in Anupama theatre even after OTT release. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X