ರಿಲೀಸ್ ದಿನ ಅಬ್ಬರಿಸಿದ ಕ್ರಾಂತಿ 7 ದಿನಗಳಲ್ಲಿ ಮಾಡಿದ ಒಟ್ಟು ಕಲೆಕ್ಷನ್ ಎಷ್ಟು?

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಕ್ರಾಂತಿ ಚಿತ್ರ ಕಳೆದ ವಾರ ಗಣರಾಜ್ಯೋತ್ಸವದ ಪ್ರಯುಕ್ತ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡಿತ್ತು. ಬರೋಬ್ಬರಿ 22 ತಿಂಗಳುಗಳ ಅಂತರದಲ್ಲಿ ಬಿಡುಗಡೆಯಾದ ಬಾಕ್ಸ್ ಆಫೀಸ್ ಸುಲ್ತಾನ್‌ನ ಈ ಚಿತ್ರವನ್ನು ನೋಡಲು ಕಾತರರಾಗಿದ್ದ ದರ್ಶನ್ ಅಭಿಮಾನಿಗಳು ಟಿಕೆಟ್‌ಗಳನ್ನು ಖರೀದಿಸಲು ಮುಗಿಬಿದ್ದಿದ್ದರು.

ಪರಿಣಾಮವಾಗಿ ಕ್ರಾಂತಿ ಚಿತ್ರ ಅಡ್ವಾನ್ಸ್ ಬುಕಿಂಗ್‌ನಿಂದಲೇ 5 ಕೋಟಿ ಗಳಿಕೆಯನ್ನು ಮಾಡಿತ್ತು. ಇನ್ನು ಈ ಗಳಿಕೆಯೂ ಸಹ ಸೇರಿದಂತೆ ಚಿತ್ರ ಬಿಡುಗಡೆಯ ದಿನ ಬಾಕ್ಸ್ ಆಫೀಸ್‌ನಲ್ಲಿ 9.8 ಕೋಟಿ ನೆಟ್ ಕಲೆಕ್ಷನ್ ಮಾಡಿತ್ತು. ಇನ್ನು ಈ ಗಳಿಕೆ ಗ್ರಾಸ್ ಲೆಕ್ಕಾಚಾರದಲ್ಲಿ 12.85 ಕೋಟಿ ರೂಪಾಯಿಗಳಾಗಲಿದೆ. ಹೀಗೆ ಉತ್ತಮ ಆರಂಭ ಪಡೆದುಕೊಂಡ ಕ್ರಾಂತಿ ಚಿತ್ರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದರೆ, ಸಾಮಾನ್ಯ ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆಯನ್ನೂ ಸಹ ಪಡೆದುಕೊಂಡಿತು.

ಇನ್ನು ಬಿಡುಗಡೆಗೂ ಮುನ್ನ ಹಲವಾರು ಅಡೆತಡೆಗಳನ್ನು ಎದುರಿಸಿದ್ದ ಕ್ರಾಂತಿ ಚಿತ್ರಕ್ಕೆ ಕೆಜಿ ರಸ್ತೆಯಲ್ಲಿ ಚಿತ್ರಮಂದಿರದ ಸಮಸ್ಯೆ ಕೂಡ ಎದುರಾಗಿತ್ತು ಹಾಗೂ ಹಿಂದಿನ ದಿನ ಬಿಡುಗಡೆಗೊಂಡಿದ್ದ ಬಾಲಿವುಡ್‌ನ ಬಿಗ್ ನಟ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ಪೈಪೋಟಿಯೂ ಸಹ ಇತ್ತು. ಹೀಗೆ ಹಲವಾರು ಸವಾಲುಗಳೊಂದಿಗೆ ಚಿತ್ರಮಂದಿರದ ಅಂಗಳಕ್ಕೆ ಬಂದ ಕ್ರಾಂತಿ ಈ ಎಲ್ಲಾ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿ ಮೊದಲ ವಾರವನ್ನು ಪೂರೈಸಿದ್ದು, ನಾಲ್ಕೇ ದಿನದಲ್ಲಿ ಚಿತ್ರದ ಕಲೆಕ್ಷನ್, ಓಟಿಟಿ ಹಕ್ಕು ಹಾಗೂ ಸ್ಯಾಟಲೈಟ್ ಹಕ್ಕು ಸೇರಿದಂತೆ ನೂರು ಕೋಟಿ ಕಲೆಕ್ಷನ್ ಅನ್ನೂ ಸಹ ಮಾಡಿದೆ. ಹಾಗಾದರೆ ಚಿತ್ರಮಂದಿರದ ಕಲೆಕ್ಷನ್‌ನಿಂದಲೇ ಕ್ರಾಂತಿ ಚಿತ್ರ 7 ದಿನಗಳಲ್ಲಿ ಎಷ್ಟು ಹಣ ಗಳಿಸಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ ಓದಿ..

ಏಳು ದಿನದ ಕಲೆಕ್ಷನ್

ಏಳು ದಿನದ ಕಲೆಕ್ಷನ್

ಕ್ರಾಂತಿ ಚಿತ್ರತಂಡ ಚಿತ್ರ ಏಳು ದಿನಗಳಲ್ಲಿ ಎಷ್ಟು ಗಳಿಸಿದೆ ಎಂಬ ಮಾಹಿತಿಯನ್ನು ಅಧಿಕೃತವಾಗಿ ಎಲ್ಲಿಯೂ ಘೋಷಿಸಿಲ್ಲ. ಆದರೆ ಬಾಕ್ಸ್ ಆಫೀಸ್ ಪಂಡಿತರು ಚಿತ್ರ ಯಾವ ಯಾವ ದಿನ ಎಷ್ಟು ಗಳಿಸಿದೆ ಎಂಬ ಮಾಹಿತಿಯನ್ನು ಪ್ರತಿದಿನವೂ ಅಪ್‌ಡೇಟ್ ಮಾಡಿದ್ದಾರೆ. ಈ ಪೈಕಿ ಅತಿ ನಂಬುಗೆಯ ಬಾಕ್ಸ್ ಆಫೀಸ್‌ ಟ್ರ್ಯಾಕಿಂಗ್ ವೆಬ್ ತಾಣವಾದ ಸ್ಯಾಕ್‌ನಿಕ್ ಕ್ರಾಂತಿ ಚಿತ್ರದ ಏಳು ದಿನಗಳ ನೆಟ್ ಕಲೆಕ್ಷನ್ ಅನ್ನು ಪ್ರಕಟಿಸಿದೆ. ಈ ವೆಬ್ ತಾಣ ನೀಡಿರುವ ಮಾಹಿತಿಯ ಪ್ರಕಾರ ಕ್ರಾಂತಿ ಸಿನಿಮಾ ಮೊದಲ ಏಳು ದಿನಗಳಲ್ಲಿ ಒಟ್ಟು 30.31 ಕೋಟಿ ರೂಪಾಯ ನೆಟ್ ಕಲೆಕ್ಷನ್ ಮಾಡಿದೆ. ಅಂದರೆ ಏಳು ದಿನಗಳಲ್ಲಿ ಸುಮಾರು 37 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಚಿತ್ರ ಮಾಡಿದೆ. ಇನ್ನು ಬಾಲಿವುಡ್ ಮೂವಿ ರಿವ್ಯೂಸ್ ಡಾಟ್ ಕಾಮ್ ಎಂಬ ವೆಬ್ ತಾಣ ತಿಳಿಸಿರುವ ಮೂಲಕ ಕ್ರಾಂತಿ ಚಿತ್ರ ಮೊದಲ ಏಳು ದಿನಗಳಲ್ಲಿ 45 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಕಲೆಕ್ಷನ್ ವಿಚಾರದಲ್ಲಿ ಗೊಂದಲ

ಕಲೆಕ್ಷನ್ ವಿಚಾರದಲ್ಲಿ ಗೊಂದಲ

ಈ ಮೇಲ್ಕಂಡ ಎರಡು ನಂಬುಗೆಯ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಪ್ರಕಟಿಸಿರುವ ನಂಬರ್ಸ್ ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಚಿತ್ರತಂಡ ಅಧಿಕೃತವಾಗಿ ಕಲೆಕ್ಷನ್ ಅನ್ನು ಹಂಚಿಕೊಳ್ಳದ ಕಾರಣ ಅಭಿಮಾನಿಗಳು ಹಾಗೂ ಸಿನಿ ರಸಿಕರು ಯಾವ ವೆಬ್ ತಾಣ ಪ್ರಕಟಿಸುವ ಮಾಹಿತಿ ನಿಜ, ಯಾವುದು ಸುಳ್ಳು ಎಂಬುದನ್ನು ತಿಳಿಯಲಾಗದೇ ಗೊಂದಲಕ್ಕೆ ಒಳಗಾಗಿದ್ದಾರೆ.

ನೂರು ಕೋಟಿ ಸಂಭ್ರಮಾಚರಣೆ

ನೂರು ಕೋಟಿ ಸಂಭ್ರಮಾಚರಣೆ

ಇನ್ನು ಮೊದಲ ವಾರದ ಥಿಯೇಟ್ರಿಕಲ್ ಕಲೆಕ್ಷನ್ ವಿಚಾರದಲ್ಲಿ ಗೊಂದಲ ಮೂಡಿದ್ದರೂ ಸಹ ಕ್ರಾಂತಿ ಚಿತ್ರತಂಡ ತಮ್ಮ ಚಿತ್ರ ಸ್ಯಾಟಲೈಟ್ ಹಕ್ಕು, ಡಿಜಿಟಲ್ ಹಕ್ಕು ಹಾಗೂ ಕಲೆಕ್ಷನ್ ಮೂರೂ ಸೇರಿ ನೂರು ಕೋಟಿ ಗಳಿಸಿರುವುದು ನಿಜ ಎಂಬ ವಿಚಾರವನ್ನು ಕೇಕ್ ಕತ್ತರಿಸಿ ಸಂಭ್ರಮಿಸುವ ಮೂಲಕ ಪರೋಕ್ಷವಾಗಿ ತಿಳಿಸಿದ್ದಾರೆ. ಹೌದು, ನಟ ದರ್ಶನ್ ಸಹ ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದು, 109 ಕೋಟಿ ಕಲೆಕ್ಷನ್ ಎಂದು ಬರೆದು ತಯಾರಿಸಲಾಗಿದ್ದ ದೊಡ್ಡ ಕೇಕ್ ಅನ್ನು ಕತ್ತರಿಸಿ ಅಭಿಮಾನಿಗಳಿಗೆ ತಿನ್ನಿಸಿ ಸಂಭ್ರಮಿಸಿದ್ದಾರೆ.

More from Filmibeat

English summary
Darshan starrer Kranti movie 7 days box office collection report. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X