100 ಮಿಲಿಯನ್ ವ್ಯೂಸ್, 1.75 ಮಿಲಿಯನ್ ಲೈಕ್ಸ್ ಪಡೆದ ಕ್ರಾಂತಿ ಸಾಂಗ್ಸ್!

Darshan starrer Kranti movie album hits mammoth 100 million views on youtube

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಬಹು ನಿರೀಕ್ಷೆಯನ್ನು ಹುಟ್ಟಿಸಿದ್ದಂತಹ ಚಿತ್ರ. ಆದರೆ ಬಿಡುಗಡೆಯಾದ ಬಳಿಕ ಆ ನಿರೀಕ್ಷೆಯ ಮಟ್ಟದಲ್ಲಿ ಕ್ರಾಂತಿ ಚಿತ್ರ ಮುಟ್ಟುವಲ್ಲಿ ವಿಫಲವಾಯಿತು. ಸಾಮಾನ್ಯ ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಕ್ರಾಂತಿ ಚಿತ್ರ ದರ್ಶನ್ ಅಭಿಮಾನಿಗಳಿಂದ ಮಾತ್ರ ಮೆಚ್ಚುಗೆ ಗಿಟ್ಟಿಸಿಕೊಂಡಿತು.

ಹೀಗೆ ನಿರೀಕ್ಷಿಸಿದ್ದ ಯಶಸ್ಸನ್ನು ಕಾಣದ ಕ್ರಾಂತಿ ಚಿತ್ರದ ಹಾಡುಗಳು ಮಾತ್ರ ತಕ್ಕಮಟ್ಟಿಗೆ ಸದ್ದು ಮಾಡಿದ್ದವು. ಮೊದಲು ಬಿಡುಗಡೆಯಾದ ಧರಣಿ ಹಾಡು ಪರವಾಗಿಲ್ಲ ಎಂಬ ಪ್ರತಿಕ್ರಿಯೆ ಪಡೆದುಕೊಂಡರೆ, ನಂತರ ಬಿಡುಗಡೆಗೊಂಡ ಎರಡನೇ ಹಾಡು ಬೊಂಬೆ ಬೊಂಬೆ ಸಹ ದರ್ಶನ್ ಹಾಗೂ ಹರಿಕೃಷ್ಣ ಹಾಡುಗಳು ಮಾಡುತ್ತಿದ್ದ ಮೋಡಿಯನ್ನು ಮಾಡುವಲ್ಲಿ ಯಶಸ್ವಿಯಾಗಲಿಲ್ಲ.

ಆದರೆ ಚಿತ್ರದ ಮೂರನೇ ಹಾಡು ಶೇಕ್ ಇಟ್ ಪುಷ್ಪವತಿ ಮಾತ್ರ ಚಾರ್ಟ್‌ಬಸ್ಟರ್ ಎನಿಸಿಕೊಂಡಿತು. ಉತ್ತರ ಕರ್ನಾಟಕದ ಭಾಷೆಯಲ್ಲಿ ರಚಿತವಾಗಿದ್ದ ಸಾಹಿತ್ಯ, ಹರಿಕೃಷ್ಣ ಸಂಗೀತ ಹಾಗೂ ವಾಯ್ಸ್ ಕೇಳುಗರ ಮನ ಗೆದ್ದಿತ್ತು. ಅದರಲ್ಲಿಯೂ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಟಿ ನಿಮಿಕಾ ರತ್ನಾಕರ್ ಹಾಕಿದ್ದ ಸ್ಟೆಪ್ಸ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಹಾಡಿನ ಸಿಗ್ನೇಚರ್ ಸ್ಟೆಪ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಕೇವಲ ರಾಜ್ಯದ ರೀಲ್ಸ್ ಪ್ರೇಮಿಗಳು ಮಾತ್ರವಲ್ಲದೇ ಪರ ರಾಜ್ಯದ ರೀಲ್ ಮೇಕರ್ಸ್ ಸಹ ಶೇಕ್ ಇಟ್ ಪುಷ್ಪವತಿ ಎಂದು ಹೆಜ್ಜೆ ಹಾಕಿ ವಿಡಿಯೊಗಳನ್ನು ಅಪ್‌ಲೋಡ್ ಮಾಡಿದ್ದರು. ಇನ್ನು ಕೊನೆಯದಾಗಿ ಬಂದ ಡೋಂಟ್ ಮೆಸ್ ವಿತ್ ಹಿಮ್ ಸಹ ಸಾಧಾರಣ ಸದ್ದು ಮಾಡಿತ್ತು.

ಹೀಗೆ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದ ಕ್ರಾಂತಿ ಚಿತ್ರದ ಆಲ್ಬಮ್ ಸದ್ಯ ಯುಟ್ಯೂಬ್ ಒಂದರಲ್ಲಿಯೇ ನೂರು ಮಿಲಿಯನ್ ವ್ಯೂಸ್ ಮೈಲಿಗಲ್ಲನ್ನು ಮುಟ್ಟಿದೆ. ಹೌದು, ಚಿತ್ರದ ಎಲ್ಲಾ ಹಾಡುಗಳ ವಿಡಿಯೊ ಹಾಗೂ ಆಡಿಯೊ ಸೇರಿ ನೂರು ಮಿಲಿಯನ್ ವ್ಯೂಸ್ ಹಾಗೂ 1.75 ಮಿಲಿಯನ್ ಲೈಕ್ಸ್ ಸಿಕ್ಕಿವೆ.

ಶೇಕ್ ಇಟ್ ಪುಷ್ಪವತಿ ಹಾಡು 56.7 ಮಿಲಿಯನ್ ವ್ಯೂಸ್ ಹಾಗೂ 650000 ಲೈಕ್ಸ್ ಪಡೆದುಕೊಂಡಿದ್ದರೆ, ಬೊಂಬೆ ಬೊಂಬೆ ಹಾಡು 26.7 ಮಿಲಿಯನ್ ವ್ಯೂಸ್ ಹಾಗೂ 441000 ಲೈಕ್ಸ್ ಪಡೆದುಕೊಂಡಿದೆ, ಧರಣಿ ಹಾಡು 11.6 ಮಿಲಿಯನ್ ವ್ಯೂಸ್ ಹಾಗೂ 464000 ಲೈಕ್ಸ್ ಪಡೆದುಕೊಂಡಿದೆ ಮತ್ತು ಡೋಂಟ್ ಮೆಸ್ ವಿತ್ ಹಿಮ್ ಹಾಡು 5 ಮಿಲಿಯನ್ ವ್ಯೂಸ್ ಹಾಗೂ 195000 ಲೈಕ್ಸ್ ಪಡೆದುಕೊಂಡಿದೆ. ಈ ಮೂಲಕ ಕ್ರಾಂತಿ ಆಲ್ಬಮ್ 100 ಮಿಲಿಯನ್ ವ್ಯೂಸ್, 1.75 ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. ವಿಡಿಯೊ ಹಾಗೂ ಲಿರಿಕಲ್ ವಿಡಿಯೊ ಎರಡನ್ನೂ ಸೇರಿಸಿ ಕ್ರಾಂತಿ ಆಲ್ಬಮ್ ಇಷ್ಟು ವ್ಯೂಸ್ ಹಾಗೂ ಲೈಕ್ಸ್ ಪಡೆದುಕೊಂಡಿದೆ.

More from Filmibeat

English summary
Darshan starrer Kranti movie album hits mammoth 100 million views on youtube
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X