ಬ್ಯಾನ್ ಮಾಡ್ತೇವೆ ಎಂದಿದ್ದ ಹೊಸಪೇಟೆಯಲ್ಲಿ ಕ್ರಾಂತಿ ಎಷ್ಟು ದಿನಗಳ ಪ್ರದರ್ಶನ ಕಂಡಿತು? ಗೆಲ್ತಾ, ಸೋಲ್ತಾ?

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಚಿತ್ರ ಬಿಡುಗಡೆಗೂ ಮುನ್ನ ಭರ್ಜರಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಕಳೆದ ತಿಂಗಳು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಂಡ ಈ ಚಿತ್ರವನ್ನು ದರ್ಶನ್ ಅಭಿಮಾನಿಗಳು ಮೆಚ್ಚಿಕೊಂಡರಾದರೂ ಸಾಮಾನ್ಯ ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು.

ಈ ಹಿಂದಿನ ದರ್ಶನ್ ಚಿತ್ರ ಪಡೆದುಕೊಂಡಂತಹ ರೆಸ್ಪಾನ್ಸ್ ಪಡೆದುಕೊಳ್ಳುವಲ್ಲಿ ಎಡವಿದ ಕ್ರಾಂತಿ ಚಿತ್ರ ಬಹುಬೇಗನೇ ಓಟಿಟಿಗೂ ಸಹ ಲಗ್ಗೆ ಇಡುತ್ತಿದೆ. ಹೌದು, ಇದೇ ತಿಂಗಳ 23ರಂದು ಕ್ರಾಂತಿ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಹೌದು, ಈ ಕುರಿತಾಗಿ ಅಮೆಜಾನ್ ಪ್ರೈಮ್ ಅಧಿಕೃತವಾಗಿ ಟ್ವೀಟ್ ಮಾಡಿದ್ದು, ದಿನಾಂಕವನ್ನು ಬಹಿರಂಗಪಡಿಸಿದೆ.

ಇನ್ನು ನಿನ್ನೆಯಷ್ಟೇ ( ಫೆಬ್ರವರಿ 19 ) ಕ್ರಾಂತಿ 25 ದಿನಗಳನ್ನು ಪೂರೈಸಿದ್ದು, ಓಟಿಟಿಗೆ ಬಂದ ನಂತರ ಎಲ್ಲಾ ಚಿತ್ರಮಂದಿರಗಳಿಂದ ಸಾಮಾನ್ಯವಾಗಿ ತೆರವುಗೊಳ್ಳಲಿದೆ. ಈ ಮೂಲಕ ಕ್ರಾಂತಿ ಚಿತ್ರ 29 ದಿನಗಳಿಗೆ ಎಲ್ಲೆಡೆ ತನ್ನ ಆಟವನ್ನು ಮಕ್ತಾಯಗೊಳಿಸಲಿದೆ. ಇನ್ನು ಕ್ರಾಂತಿ ಬಿಡುಗಡೆಗೂ ಮುನ್ನ ದೊಡ್ಡ ವಿವಾದಕ್ಕೆ ಕಾರಣವಾದದ್ದು ಹೊಸಪೇಟೆಯಲ್ಲಿ ಚಿತ್ರದ ಹಾಡೊಂದರ ಬಿಡುಗಡೆ ಕಾರ್ಯಕ್ರಮ ನಡೆದದ್ದು. ಹೌದು, ಬೊಂಬೆ ಬೊಂಬೆ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು, ಈ ಸಂದರ್ಭದಲ್ಲಿ ನಟ ದರ್ಶನ್ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದು ವಿಕೃತಿ ಮೆರೆದಿದ್ದರು. ಅಲ್ಲದೇ ಹಾಡು ಬಿಡುಗಡೆಗೂ ಸಹ ಕೆಲಕಾಲ ಅಡ್ಡಿಯುಂಟಾಗಿತ್ತು. ಹೀಗೆ ಹೊಸಪೇಟೆಯಲ್ಲಿ ತೀವ್ರ ಹಿನ್ನಡೆಯನ್ನು ಉಂಟು ಮಾಡಿದ್ದ ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರ ಎಷ್ಟು ದಿನಗಳ ಪ್ರದರ್ಶನ ಕಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಹೊಸಪೇಟೆಯಲ್ಲಿ ಮೈಲೇಜ್ ಎಷ್ಟು?

ಹೊಸಪೇಟೆಯಲ್ಲಿ ಮೈಲೇಜ್ ಎಷ್ಟು?

ಹೀಗೆ ಅನೇಕ ವಿವಾದ ಹಾಗೂ ಕಿತ್ತಾಟಗಳ ನಡುವೆ ಕ್ರಾಂತಿ ಚಿತ್ರ ಹೊಸಪೇಟೆಯಲ್ಲಿ ಬಿಡುಗಡೆಯಾಗುವಲ್ಲಿ ಯಶಸ್ವಿಯಾಯಿತು. ಇಲ್ಲಿನ ಮೀರಾಲಂ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಕ್ರಾಂತಿ ಚಿತ್ರ ಸಾಧಾರಣ ಓಪನಿಂಗ್ ಪಡೆದುಕೊಂಡಿತು. ಕ್ರಾಂತಿ ಹೊಸಪೇಟೆಯಲ್ಲಿ ಸುಮಾರು ಎರಡು ವಾರ ಪ್ರದರ್ಶನಗಳನ್ನು ಕಾಣಬಹುದು ಎಂಬ ಊಹೆ ಇತ್ತು. ಆದರೆ ಚಿತ್ರ ಅಲ್ಲಿ 25 ದಿನಗಳನ್ನು ಪೂರೈಸುವ ಮೂಲಕ ಸಿನಿ ರಸಿಕರ ಹುಬ್ಬೇರುವಂತೆ ಮಾಡಿದೆ. ಇನ್ನು 25 ದಿನಗಳನ್ನು ಪೂರೈಸಿದರೂ ಸಹ ಕ್ರಾಂತಿ ಚಿತ್ರ ಹೊಸಪೇಟೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಗುರುವಾರ ತನ್ನ ಓಟವನ್ನು ಅಂತ್ಯಗೊಳಿಸಲಿದ್ದು, 29 ದಿನಗಳ ಪ್ರದರ್ಶನವನ್ನು ಕಂಡಂತಾಗಲಿದೆ.

ಬ್ಯಾನ್ ವಿರೋಧ!

ಬ್ಯಾನ್ ವಿರೋಧ!

ಇನ್ನು ದರ್ಶನ್ ಸಂದರ್ಶನವೊಂದರಲ್ಲಿ ಪುನೀತ್ ರಾಜ್‌ಕುಮಾರ್ ಸತ್ತ ಮೇಲೆ ನೋಡಿದ ಅಭಿಮಾನಿಗಳ ಪ್ರೀತಿಯನ್ನು ನನಗೆ ನನ್ನ ಅಭಿಮಾನಿಗಳು ಈಗಲೇ ತೋರಿಸಿಬಿಟ್ರು ಎಂದು ನೀಡಿದ್ದ ಹೇಳಿಕೆ ಅಪ್ಪು ಅಭಿಮಾನಿಗಳನ್ನು ಕೆರಳಿಸಿತ್ತು. ಅಪ್ಪು ಫ್ಯಾನ್ಸ್‌ಗಳಿಂದ ತುಂಬಿರುವ ಹೊಸಪೇಟೆಯಲ್ಲಿ ಈ ಹೇಳಿಕೆಯ ವಿರುದ್ಧ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಇಂತಹ ಹೇಳಿಕೆ ನೀಡಿರುವ ದರ್ಶನ್ ಅವರ ಕ್ರಾಂತಿ ಸಿನಿಮಾವನ್ನು ಹೊಸಪೇಟೆಯಲ್ಲಿ ಬ್ಯಾನ್ ಮಾಡ್ತೇವೆ ಎಂದು ಅಪ್ಪು ಫ್ಯಾನ್ಸ್ ಖಂಡಿಸಿದ್ದರು.

ಇಷ್ಟೇ ಸಾಕಿತ್ತು ಫ್ಯಾನ್ ವಾರ್ ಸೃಷ್ಟಿಯಾಗಲು

ಇಷ್ಟೇ ಸಾಕಿತ್ತು ಫ್ಯಾನ್ ವಾರ್ ಸೃಷ್ಟಿಯಾಗಲು

ಹೀಗೆ ದರ್ಶನ್ ಹೇಳಿಕೆಗೆ ಹೊಸಪೇಟೆ ಅಪ್ಪು ಫ್ಯಾನ್ಸ್ ಕಿಡಿಕಾರಿ ಬ್ಯಾನ್ ಮಾಡ್ತೇವೆ ಎಂದ ಕೂಡಲೇ ಇದಕ್ಕೆ ಪ್ರತ್ಯುತ್ತರ ನೀಡಿದ್ದ ದರ್ಶನ್ ಅಭಿಮಾನಿಗಳು ಕ್ರಾಂತಿ ಚಿತ್ರ ಹೊಸಪೇಟೆಯ ಎರಡರಿಂದ ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣಲಿದೆ, ಒಳ್ಳೆಯ ಗಳಿಕೆ ಮಾಡಲಿದೆ ಎಂದು ಸವಾಲು ಹಾಕಿದ್ರು. ಹೀಗೆ ಚಿತ್ರ ಬಿಡುಗಡೆಗೂ ಮುನ್ನವೇ ಹೊಸಪೇಟೆ ವಿವಾದಕ್ಕೆ ವೇದಿಕೆಯಾಗಿತ್ತು. ಹೀಗೆ ಮೊದಲೇ ಬೂದಿ ಮುಚ್ಚಿದ ಕೆಂಡವಾಗಿದ್ದ ಹೊಸಪೇಟೆಯಲ್ಲಿ ಕ್ರಾಂತಿ ಹಾಡು ಬಿಡುಗಡೆ ಕಾರ್ಯಕ್ರಮ ನಡೆದದ್ದು ಮತ್ತಷ್ಟು ಇಬ್ಬರ ಅಭಿಮಾನಿಗಳ ನಡುವಿನ ಕಿತ್ತಾಟವನ್ನು ಹೆಚ್ಚಿಸಿತ್ತು. ಸದ್ಯ ಚಿತ್ರ 25 ದಿನಗಳನ್ನು ಹೊಸಪೇಟೆಯಲ್ಲಿ ಪೂರೈಸಿದ್ದು, ಇಲ್ಲಿ ಸಾಧಾರಣ ಕಲೆಕ್ಷನ್ ಮಾಡಿದೆ.

More from Filmibeat

English summary
Darshan starrer Kranti movie completes 25 days run at Hospete theatre . Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X