"ಕಟೌಟ್‌ ಇಲ್ಲ.. ತಮಟೆ ಇಲ್ಲ.. ಆದ್ರೂ ಬೇಜಾರ ಆಗಲ್ಲ": 'ಕ್ರಾಂತಿ' ಚಿತ್ರಮಂದಿರದ ಮುಂದೆ ರೊಚ್ಚಿಗೆದ್ದ ಫ್ಯಾನ್ಸ್!

By ಫಿಲ್ಮಿಬೀಟ್ ಡೆಸ್ಕ್

ಸೂಪರ್‌ಸ್ಟಾರ್ ಸಿನಿಮಾ ರಿಲೀಸ್ ಆಗುತ್ತಿದೆ ಚಿತ್ರಮಂದಿರಗಳಲ್ಲಿ ಸಂಭ್ರಮ, ಸಡಗರ ಮನೆ ಮಾಡಿರುತ್ತೆ. ಎರಡು ದಿನ ಮುನ್ನವೇ ಚಿತ್ರಮಂದಿರ ಮುಂದೆ ಕಟೌಟ್ ಎದ್ದು ನಿಂತಿರುತ್ತೆ. ರಿಲೀಸ್ ದಿನ ತಮಟೆ ಸದ್ದು ಕೇಳಿಸುತ್ತೆ. ಅಭಿಮಾನಿಗಳು ಈ ಸದ್ದಿಗೆ ಕುಣಿದು ಕುಪ್ಪಳಿಸುತ್ತಾರೆ.

ಆದರೆ, ದರ್ಶನ್ ಸಿನಿಮಾ 'ಕ್ರಾಂತಿ' ರಿಲೀಸ್ ಆಗಿರೋ ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಅನುಪಮಾದಲ್ಲಿ ಕಟೌಟ್ ನಿಂತಿರಲಿಲ್ಲ. ತಮಟೆ ಸದ್ಧಿರಲಿಲ್ಲ. ಈ ಕಾರಣಕ್ಕೆ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಕಿಡಿಕಾರಿದ್ದರು. ಇಂತಹ ಚಿತ್ರಮಂದಿರ ಬೇಡ ಅಂತ ರೊಚ್ಚಿಗೆದ್ದಿದ್ದರು.

ಮೆಜೆಸ್ಟಿಕ್‌ನಂತಹ ಪ್ರಮುಖ ಚಿತ್ರಮಂದಿರದಲ್ಲಿ ದರ್ಶನ್ ಅಂತಹ ಸೂಪರ್ ಸ್ಟಾರ್ ಸಿನಿಮಾಗೆ ಕಟೌಟ್‌ ನಿಲ್ಲಿಸದೆ ಇದಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಇತ್ತ ಅಭಿಮಾನಿಗಳು ರೊಚ್ಚಿಗೇಳುತ್ತಿದ್ದಂತೆ ಥಿಯೇಟರ್ ವ್ಯವಸ್ಥಾಪಕರು ಪ್ರತಿಕ್ರಿಯೆಯನ್ನೂ ನೀಡಿದ್ದರು.

ಕಟೌಟ್ ಇಲ್ಲ.. ತಮಟೆ ಸದ್ದಿಲ್ಲ

ಕಟೌಟ್ ಇಲ್ಲ.. ತಮಟೆ ಸದ್ದಿಲ್ಲ

ಅನುಪಮಾ ಚಿತ್ರಮಂದಿರದಲ್ಲಿ ಕಟೌಟ್ ಹಾಕದೆ ಇದ್ದಿದ್ದಕ್ಕೆ ಅಭಿಮಾನಿಗಳು ಕಿಡಿಕಾರಿದ್ದರು. "ಮೆಜೆಸ್ಟಿಕ್‌ನಲ್ಲಿ ನಾನು ಸುಮಾರು ಥಿಯೇಟರ್ ನೋಡಿದ್ದೀನಿ. ಥಿಯೇಟರ್ ಮುಂದೆ ತಮಟೆ ಇರುತ್ತೆ. ಒಂದು ಕಟೌಟ್ ಇರುತ್ತೆ. ಎಲ್ಲಾ ಇರುತ್ತೆ. ಮೋಸ ಮಾಡುತ್ತಿದ್ದೀರ. ರಾಜಕೀಯ ಮಾಡುತ್ತಿದ್ದೀರ. ಏನಾದರೂ ಮಾಡಿ ಬೇಜಾರ ಆಗಲ್ಲ. ಯಾರೋ ಅವನು ಡಿ ಬಾಸ್ ಅಂತೀರಲ್ಲ. ಇವತ್ತು ತೋರಿಸುತ್ತೀವಿ. ನೀವು ಫಿಲ್ಮ್ ಇಂಡಸ್ಟ್ರಿಯಲ್ಲಿ ಇರೋರೇ. ಫಿಲ್ಮ್ ಡಿಸ್ಟ್ರಿಬ್ಯೂಷನ್ ಕಂಪನಿ ಇಟ್ಕೊಂಡಿರೋರೇ. ಅಷ್ಟು ಹಗುರವಾಗಿ ಮಾತಾಡಬಾರದು." ಎಂದು ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದರು.

'ಈ ಚಿತ್ರಮಂದಿರ ಒಂದು ಚೂರು ಇಷ್ಟವಿಲ್ಲ'

'ಈ ಚಿತ್ರಮಂದಿರ ಒಂದು ಚೂರು ಇಷ್ಟವಿಲ್ಲ'

" ಅಂದ್ಕೊಂಡಿರೋ ಥಿಯೇಟರ್ ಅಂತೂ ಸಿಕ್ಕಿಲ್ಲ. ಸಿಕ್ಕಿರೋ ಥಿಯೇಟರ್ ಅನ್ನಾದ್ರೂ ಚೆನ್ನಾಗಿ ಮಾಡ್ಬೇಕು ಅಂದ್ಕೊಂಡಿದ್ವಿ ಅದೂ ಆಗಿಲ್ಲ. ಮಾಗಡಿ ರಸ್ತೆಯ ಪ್ರಸನ್ನ, ವೀರೇಶ್ ಎಲ್ಲಾ ಹೇಗೆ ಮಾಡಿದ್ದಾರೆ ಗೊತ್ತಾ? ನೋಡಿ ಇವರು ಕಲಿಯಬೇಕು. ಈ ಥಿಯೇಟರ್ ಕೊಟ್ಟಿದ್ದು ನಮಗೆ ಅಸಮಧಾನವೇ ನಮಗೆ ಒಂದು ಚೂರು ಇಷ್ಟವಿಲ್ಲ. ದಯವಿಟ್ಟು ಬೇಗ ಕಟೌಟ್ ನಿಲ್ಲಿಸಿ." ಎಂದು ಅಭಿಮಾನಿ ಕಿಡಿಕಾರಿದ್ದರು.

ಥಿಯೇಟರ್ ವ್ಯವಸ್ಥಾಪಕರು ಹೇಳಿದ್ದೇನು?

ಥಿಯೇಟರ್ ವ್ಯವಸ್ಥಾಪಕರು ಹೇಳಿದ್ದೇನು?

" ಪ್ರಮುಖ ಚಿತ್ರಮಂದಿರ ಇದು. ಮೊದಲು ಕಟೌಟ್ ಆಗಬೇಕಿತ್ತು. ಆದರೆ, ಮಾಡಿಲ್ಲ, ನಾವು ಕಾಯುತ್ತಿದ್ದೇವೆ. ಇದು ನಮಗೆ ಫಸ್ಟ್ ಟೈಮ್ ಅನುಭವವಿದು. ದೊಡ್ಡ ಸ್ಟಾರ್ ಇದ್ದಾಗ ಇದೇ ಮೊದಲ ಬಾರಿಗೆ ಹಾಗೆ ಆಗಿದ್ದು. ಇದು ನಮಗೆ ಮೊದಲ ಅನುಭವ ಅಂತ ಹೇಳುತ್ತಿದ್ದೇವೆ. ಇದು ನಮ್ಮ ಕಂಟ್ರೋಲ್‌ನಲ್ಲಿ ಇಲ್ಲ. ಕಟೌಟ್ ಹಾಕಿಲ್ಲ ಅಂತ ಈಗಾಗಲೇ ಹೇಳುತ್ತಿದ್ದೇವೆ. ಬರುತ್ತಿದೆ ಅಂತ ಹೇಳುತ್ತಿದ್ದಾರೆ. ನಿನ್ನೆ ರಾತ್ರಿ ಅಂದ್ರು ಆಗಿಲ್ಲ. ಇವತ್ತು ಬೆಳಗ್ಗೆ ಅಂದ್ರು ಆಗಿಲ್ಲ. ಈಗ ಬರುತ್ತೆ ಅಂತಿದ್ದಾರೆ. ಹಾಗೇ ನೋಡಿದರೆ, ನಾವೇ ಬ್ಯಾನರ್ ಹಾಕಿಸಿದ್ದೇವೆ." ಎಂದು ಅನುಪಮಾ ಚಿತ್ರಮಂದಿರದ ವ್ಯವಸ್ಥಾಪಕರು ಹೇಳುತ್ತಿದ್ದಾರೆ.

ಥಿಯೇಟರ್ ಮೆರಿಟ್ ಹೋಗುತ್ತೆ

ಥಿಯೇಟರ್ ಮೆರಿಟ್ ಹೋಗುತ್ತೆ

"ನಮಗೂ ಥಿಯೇಟರ್ ಮೆರಿಟ್ ಹೋಗಿಬಿಡುತ್ತೆ ಅಂತ ಎಷ್ಟು ಒದ್ದಾಡುತ್ತೇವೆ. ಅದಕ್ಕೆ ಹುಡುಗರಿಗೂ ಹೇಳಿ ಕಳಿಸುತ್ತಿದ್ದೇವೆ. ಪ್ರಸನ್ನ ಥಿಯೇಟರ್‌ಗೆ ಕಟ್ಟಿ ಇಲ್ಲಿಗೆ ಬರುತ್ತಾರೆ ಎಂದು ಹೇಳಿ ಕಳಿಸುತ್ತಿದ್ದೇವೆ." ಎಂದು ಥಿಯೇಟರ್ ವ್ಯವಸ್ಥಾಪಕರು ಸಮಜಾಯಿಷಿ ನೀಡುತ್ತಿದ್ದಾರೆ.

More from Filmibeat

English summary
Darshan Starrer Kranti Movie Cutout Problem In Main Theater Anupama In Gandhinagar, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X