twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ 'ಕ್ರಾಂತಿ' ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕಲೆಕ್ಷನ್? ಏನಂತಾರೆ ವಿತರಕರು?

    |

    ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ದರ್ಶನ್ ಸಿನಿಮಾ 'ಕ್ರಾಂತಿ' ರಿಲೀಸ್ ಆಗಿದೆ. ಗಣರಾಜ್ಯೋತ್ಸವದ ದಿನದಂದು ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದೆ. ಮೊದಲ ದಿನವೇ ಸುಮಾರು 800ಕ್ಕೂ ಅಧಿಕ ಶೋಗಳು ಪ್ರದರ್ಶನ ಕಂಡಿದ್ದವು.

    ಮೊದಲ ದಿನ 'ಕ್ರಾಂತಿ' ಬಿಡುಗಡೆಯಾದ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ಹಬ್ಬ ಮಾಡಿದ್ದರು. ಥಿಯೇಟರ್ ಮುಂದೆ ಕುಣಿದು ಕುಪ್ಪಳಿಸಿದ್ದರು. 'ಕ್ರಾಂತಿ' ಕೊಟ್ಟ ಮೆಸೇಜ್‌ಗೆ ಡಿ ಬಾಸ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದರು.

    ಸಾಧ್ಯ ಸೂಪರ್‌ಸ್ಟಾರ್ ಸಿನಿಮಾ ಹೇಗಿದೆ ಅನ್ನೋದಕ್ಕಿಂತ, ಕಲೆಕ್ಷನ್ ಎಷ್ಟು ಮಾಡಿದೆ ಅನ್ನೋ ಕ್ರೇಜ್ ಇದೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ 'ಕ್ರಾಂತಿ' ಸಿನಿಮಾ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ? ಎಲ್ಲೆಲ್ಲಿ ರೆಸ್ಪಾನ್ಸ್ ಹೇಗಿದೆ? ಅನ್ನೋ ಡಿಟೈಲ್ಸ್ ಇಲ್ಲಿದೆ.

    ಬೆಂಗಳೂರು, ಕೋಲಾರ, ತುಮಕೂರು ಗಳಿಕೆ ಎಷ್ಟು?

    ಬೆಂಗಳೂರು, ಕೋಲಾರ, ತುಮಕೂರು ಗಳಿಕೆ ಎಷ್ಟು?

    ಸ್ಯಾಂಡಲ್‌ವುಡ್ ಸಿನಿಮಾಗಳು ಅತೀ ಹೆಚ್ಚು ಬ್ಯುಸಿನೆಸ್ ಮಾಡೋ ಏರಿಯಾ ಬಿಕೆಟಿ. ಅಂದ್ರೆ, ಬೆಂಗಳೂರು, ಕೋಲಾರ ಹಾಗೂ ತುಮಕೂರು. ಈ ಮೂರು ಜಿಲ್ಲೆಗಳಲ್ಲಿ ಸಿನಿಮಾ ಕ್ರೇಜ್ ಜೋರಾಗಿದೆ. ಹೀಗಾಗಿ ಬಹುತೇಕ ಥಿಯೇಟರ್‌ಗಳು ಇರೋದು ಕೂಡ ಇಲ್ಲೇನೆ. ಈ ಮೂರು ಜಿಲ್ಲೆಗಳಿಂದಲೇ ಅತೀ ಹೆಚ್ಚು ಕಲೆಕ್ಷನ್ ಆಗುತ್ತೆ. 'ಕ್ರಾಂತಿ' ಈ ಮೂರು ಏರಿಯಾಗಳಲ್ಲಿ ಮೊದಲ ದಿನ 8.95 ಕೋಟಿ ರೂ. ಕಲೆಕ್ಷನ್ ಆಗಿದೆ ಎನ್ನಲಾಗಿದೆ.

    ಮಂಡ್ಯ, ಮೈಸೂರು,ಚಾಮರಾಜನಗರದಲ್ಲೆಷ್ಟು?

    ಮಂಡ್ಯ, ಮೈಸೂರು,ಚಾಮರಾಜನಗರದಲ್ಲೆಷ್ಟು?

    ಬೆಂಗಳೂರು, ಕೋಲಾರ, ತುಮಕೂರು ಬಿಟ್ಟರೆ ಅತೀ ಹೆಚ್ಚು ಗಳಿಕೆ ಕಾಣುವ 2ನೇ ಏರಿಯಾ ಎಂಎಂಸಿಹೆಚ್. ಅಂದ್ರೆ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಾಸನ. ಈ ನಾಲ್ಕು ಏರಿಯಾಗಳಲ್ಲೂ ಉತ್ತಮ ಗಳಿಕೆ ಕಾಣುತ್ತೆ. ಈ ಏರಿಯಾಗಳಲ್ಲಿ ದರ್ಶನ್ ಸಿನಿಮಾಗಳಿಗೆ ಅತೀ ಹೆಚ್ಚು ಬೇಡಿಕೆ ಇದೆ. ಮೊದಲ ದಿನ 'ಕ್ರಾಂತಿ' ಕ್ರೇಜ್ ಮೇಲೆ ಇಲ್ಲಿ 2 ಕೋಟಿ 68 ಲಕ್ಷದಷ್ಟು ಕಲೆಕ್ಷನ್ ಆಗಿದೆ.

    ದಾವಣಗೆರೆ, ಮಂಗಳೂರು, ಶಿವಮೊಗ್ಗದಲ್ಲಿ ಎಷ್ಟು?

    ದಾವಣಗೆರೆ, ಮಂಗಳೂರು, ಶಿವಮೊಗ್ಗದಲ್ಲಿ ಎಷ್ಟು?

    ಮಲೆನಾಡು, ಅರೆ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲೂ ಕನ್ನಡ ಸಿನಿಮಾಗಳ ಕಲೆಕ್ಷನ್ ಚೆನ್ನಾಗಿರುತ್ತೆ. ಆದರೆ, ಇಲ್ಲಿ ಥಿಯೇಟರ್‌ಗಳ ಸಂಖ್ಯೆ ಕಡಿಮೆ ಇರೋದ್ರಿಂದ ದೊಡ್ಡ ಮೊತ್ತ ಕಲೆಕ್ಷನ್ ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ. ಮೊದಲ ದಿನ ಈ ಮೂರು ಏರಿಯಾಗಳಿಂದ ಡಿಸೆಂಟ್ ಕಲೆಕ್ಷನ್ ಆಗಿದೆ. ದಾವಣಗೆರೆ ಭಾಗದಲ್ಲಿ 90 ಲಕ್ಷ ರೂ., ಮಂಗಳೂರು ಏರಿಯಾದಲ್ಲಿ 1.40 ಕೋಟಿ ರೂ. ಹಾಗೇ ಶಿವಮೊಗ್ಗ-ಚಿಕ್ಕಮಗಳೂರು ಭಾಗಗಳಲ್ಲಿ 1.30 ಕೋಟಿ ರೂ. ಕಲೆಕ್ಷನ್ ಆಗಿದೆ.

    ಹೈದರಾಬಾದ್ ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್?

    ಹೈದರಾಬಾದ್ ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್?

    ಹೈದರಾಬಾದ್ ಕರ್ನಾಟಕ ಭಾಗವನ್ನು ಸ್ಯಾಂಡಲ್‌ವುಡ್ ಪ್ರತ್ಯೇಕವಾಗಿ ಇಟ್ಟಿದೆ. ಇಲ್ಲಿನ ಥಿಯೇಟರ್‌ ಸೆಟಪ್‌ಗಳೇ ಬೇರೆ. ಅಲ್ಲದೆ, ಪರಭಾಷೆಯ ಸಿನಿಮಾಗಳು ಕಾಂಪಿಟೇಷನ್‌ನಲ್ಲಿ ಇರುತ್ತವೆ. ಹೀಗಾಗಿ ಈ ಏರಿಯಾದಲ್ಲಿ ಕನ್ನಡ ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಅದ್ಭುತವಾಗಿದ್ದರೆ, ಸಿನಿಮಾ ಗೆದ್ದಂತೆ. 'ಕ್ರಾಂತಿ' ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮೊದಲ ದಿನ 76 ಲಕ್ಷ ಕಲೆ ಹಾಕಿದೆ. ಈ ಮೂಲಕ ಕರ್ನಾಟಕದಾದ್ಯಂತ 15.99 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

    Dsclaimer: ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಹಲವು ಮೂಲಗಳಿಂದ ಮಾಹಿತಿ ಪಡೆದು ನೀಡಿದ ವರದಿಯಾಗಿದೆ. ಸಂಖ್ಯೆಗಳನ್ನು ಅಧಿಕೃತವಾಗಿ ಸಂಗ್ರಹಿಸಿದ್ದಾಗಿರುವುದಿಲ್ಲ.

    English summary
    Darshan Starrer Kranti Movie Day 1 Area Wise Collection Report, Know More.
    Friday, January 27, 2023, 19:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X