ಬಾಕ್ಸಾಫೀಸ್‌ನಲ್ಲಿ ಮೊದಲನೇ ದಿನ ದರ್ಶನ್ 'ಕ್ರಾಂತಿ'ಗೆ ಬಂಪರ್.. 2ನೇ ದಿನ ಎಷ್ಟು?

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾ ಬಿಡುಗಡೆಯಾಗಿ ಇಂದಿಗೆ (ಜನವರಿ 28) ಮೂರನೇ ದಿನ. ಮೊದಲನೇ ದಿನ ರಾಜ್ಯಾದ್ಯಂತ ಸುಮಾರು 800 ಅಧಿಕ ಶೋಗಳನ್ನು ಕಂಡಿದ್ದ ಬಾಕ್ಸಾಫೀಸ್‌ನಲ್ಲಿ ಪಾಸಿಟಿವ್ ರಿಸಲ್ಟ್ ಕೊಟ್ಟಿತ್ತು. ಹೀಗಾಗಿ ಎರಡನೇ ದಿನದ ಬಗ್ಗೆನೂ ಅದೇ ಕುತೂಹಲವಿದೆ.

ದರ್ಶನ್ ಸಿನಿಮಾಗಳು ಮೊದಲ ವಾರದಲ್ಲೇ ಭರ್ಜರಿ ಕಲೆಕ್ಷನ್ ಮಾಡುತ್ತವೆ. ಆರಂಭದ ಮೂರು ದಿನಗಳಲ್ಲಿ ಸಿನಿಮಾಗೆ ಹಾಕಿದ ಬಹುತೇಕ ಬಂಡವಾಳ ನಿರ್ಮಾಪಕರ ಕೈ ಸೇರಿತ್ತು. ಹೀಗಾಗಿ 'ಕ್ರಾಂತಿ' ಸಿನಿಮಾದ ಮೇಲೂ ಅದೇ ನಿರೀಕ್ಷೆಯನ್ನು ಸ್ಯಾಂಡಲ್‌ವುಡ್ ಇಟ್ಟುಕೊಂಡಿತ್ತು.

'ಕ್ರಾಂತಿ' ಸಿನಿಮಾ ಕಲೆಕ್ಷನ್ ಬಗ್ಗೆ ನಿಖರವಾದ ಮಾಹಿತಿ ಸಿಗದೇ ಹೋದರೂ, ವಿತರಕರ ವಲಯದಲ್ಲಿ ಓಡಾಡುತ್ತಿರುವ ನಂಬರ್‌ಗಳಿಗೂ, ಸೋಶಿಯಲ್‌ ಮೀಡಿಯಾದಲ್ಲಿ ಇಣುತ್ತಿರುವ ನಂಬರ್‌ಗಳಿಗೂ ಹೋಲಿಕೆನೇ ಸಿಗುತ್ತಿಲ್ಲ. ಅಷ್ಟಕ್ಕೂ ಈ ಎರಡೂ ಕಡೆ ಎರಡನೇ ದಿನದ ಕಲೆಕ್ಷನ್ ಬಗ್ಗೆ ಓಡಾಡುತ್ತಿರುವ ಬಾಕ್ಸಾಫೀಸ್ ಅಂಕಿ ಅಂಶಗಳ ರಿಪೋರ್ಟ್ ಇಲ್ಲಿದೆ.

 'ಕ್ರಾಂತಿ' 2ನೇ ದಿನದ ರಿಪೋರ್ಟ್ ಏನು?

'ಕ್ರಾಂತಿ' 2ನೇ ದಿನದ ರಿಪೋರ್ಟ್ ಏನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಹವಾ ಮೊದಲನೇ ದಿನ ಇದ್ದಷ್ಟು ಎರಡನೇ ದಿನ ಇಲ್ಲ. ಶೋಗಳ ಸಂಖ್ಯೆಯಲ್ಲಿ ಹಾಗೂ ಕಲೆಕ್ಷನ್ ವಿಚಾರದಲ್ಲಿ ಡ್ರಾಪ್ ಆಗಿದೆ ಅನ್ನೋದು ವಿತರಕರ ವಲಯದಲ್ಲಿ ಹರಿದಾಡುತ್ತಿರೋ ಸುದ್ದಿ. ಎರಡನೇ ದಿನದ 'ಕ್ರಾಂತಿ' ಕಲೆಕ್ಷನ್ ಬಗ್ಗೆ ಡಿಸ್ಟ್ರಿಬ್ಯೂಷನ್ ಸೆಕ್ಟರ್‌ನಿಂದ ಸಿಗುತ್ತಿರೋ ಸಂಖ್ಯೆ 6 ಕೋಟಿ ರೂ. ಮೊದಲ ದಿನಕ್ಕೆ ಹೋಲಿಕೆ ಮಾಡಿದರೆ, ಇದು ತೀರಾ ಕಡಿಮೆನೇ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಬಾಕ್ಸಾಫೀಸ್‌ ಕಲೆಕ್ಷನ್ ಬೇರೆನೇ ಇದೆ.

 ಸೋಶಿಯಲ್ ಮೀಡಿಯಾ ಪ್ರಕಾರ ಕಲೆಕ್ಷನ್ ಎಷ್ಟು?

ಸೋಶಿಯಲ್ ಮೀಡಿಯಾ ಪ್ರಕಾರ ಕಲೆಕ್ಷನ್ ಎಷ್ಟು?

'ಕ್ರಾಂತಿ' ಎರಡನೇ ದಿನದ ಬಗ್ಗೆ ಅಧಿಕೃತವಾದ ಮಾಹಿತಿ ಚಿತ್ರತಂಡ ಇನ್ನೂ ಕೊಟ್ಟಿಲ್ಲ. ನಾಲ್ಕು ದಿನಗಳ ಕಲೆಕ್ಷನ್ ನೋಡಿದ ಬಳಿಕ ಇಡೀ ತಂಡ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಎರಡನೇ ದಿನದ ಕಲೆಕ್ಷನ್ 19.7 ಕೋಟಿ ರೂ. ಎಂದು ಓಡಾಡುತ್ತಿದೆ. ಆದರೆ, ವಿತರಕರ ವಲಯದ ಮಾಹಿತಿ ಪ್ರಕಾರ, ಮೊದಲ ದಿನ ಕಲೆಕ್ಷನ್‌ನ ಶೇ.25ರಷ್ಟು ಅಷ್ಟೇ ಆಗಿದೆ ಎಂದು ಹೇಳುತ್ತಿದ್ದಾರೆ.

ಮೊದಲ ದಿನದ ಕಲೆಕ್ಷನ್‌ನಲ್ಲೂ ಗೊಂದಲ

'ಕ್ರಾಂತಿ' ಅಡ್ವಾನ್ಸ್ ಬುಕಿಂಗ್ ಅದ್ಭುತವಾಗಿತ್ತು. ರಿಲೀಸ್‌ಗೂ ಮುನ್ನವೇ ಸಿನಿಮಾ 6 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು ಎಂದು ವರದಿಯಾಗಿತ್ತು. ಕೆಲವು ಮೂಲಗಳ ಪ್ರಕಾರ, ಮೊದಲ ದಿನ 11 ಕೋಟಿ ರೂ. ಕಲೆಕ್ಷನ್ ಮಾಡಿದೆ. ವಿತರಕರ ವಲಯದಲ್ಲಿ 15.99 ಕೋಟಿ ರೂ. ಸೋಶಿಯಲ್ ಮೀಡಿಯಾದಲ್ಲಿ 35.3 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನುತ್ತಿದೆ. ಹೀಗಾಗಿ ಫಸ್ಟ್‌ ಡೇ ಕಲೆಕ್ಷನ್ ಬಗ್ಗೆ ಗೊಂದಲವಿದೆ.

 ವಾರಾಂತ್ಯಕ್ಕೆ ಕಲೆಕ್ಷನ್ ಲೆಕ್ಕಾಚಾರವೇನು?

ವಾರಾಂತ್ಯಕ್ಕೆ ಕಲೆಕ್ಷನ್ ಲೆಕ್ಕಾಚಾರವೇನು?

2ನೇ ದಿನ 'ಕ್ರಾಂತಿ' ಹಿನ್ನೆಡೆ ವರ್ಕಿಂಗ್ ಡೇ ಕಾರಣನೂ ಇರಬಹುದು. ಗಣರಾಜ್ಯೋತ್ಸವ ಮುಗಿಸಿ ಕೆಲಸಗಳಿಗೆ ತೆರಳಬೇಕಿದ್ದರಿಂದ ಥಿಯೇಟರ್‌ಗಳಿಗೆ ಹೆಚ್ಚು ಜನ ಬಂದಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಶನಿವಾರ (ಜನವರಿ 28) ಹಾಗೂ ಭಾನುವಾರ (ಜನವರಿ 29) ಈ ಎರಡೂ ದಿನ ಉತ್ತಮ ಗಳಿಕೆ ಕಂಡರೆ, 'ಕ್ರಾಂತಿ' ಸಿನಿಮಾ ಗೆದ್ದಂತೆ ಎಂದು ವಿತರಕರ ವಲಯಗಳಲ್ಲಿ ಮಾತುಕತೆ ನಡೆಯುತ್ತಿದೆ.

More from Filmibeat

English summary
Challenging Star Darshan Starrer Kranti Movie Day 2 Box Office Collection Report, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X