2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?

Darshan starrer Kranti movie grossed 1.48 crores in Mysore from 3 days

ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆದಿದ್ದ ದಕ್ಷಿಣ ಭಾರತದ ಚಿತ್ರರಂಗಗಳೇ ಈ ವರ್ಷದ ಕೋಟಿ ಕೋಟಿ ಕಲೆಕ್ಷನ್ ಮಾಡುವ ಇನ್ನಿಂಗ್ಸ್ ಆರಂಭಿಸಿವೆ. ಹೌದು, ಈ ವರ್ಷದ ಮೊದಲ ನೂರು ಕೋಟಿ ಕ್ಲಬ್ ಆರಂಭವಾಗಿದ್ದೇ ತಮಿಳಿನ ವಾರಿಸು, ತೆಲುಗಿನ ವಾಲ್ತೇರು ವೀರಯ್ಯ ಚಿತ್ರಗಳ ಮೂಲಕ. ಸಂಕ್ರಾಂತಿ ಪ್ರಯುಕ್ತ ಈ ಚಿತ್ರಗಳ ಜತೆ ಚಿತ್ರಮಂದಿರಗಳ ಅಂಗಳಕ್ಕೆ ಬಂದ ಇನ್ನೆರಡು ಚಿತ್ರಗಳಾದ ವೀರಸಿಂಹ ರೆಡ್ಡಿ ಹಾಗೂ ತುನಿವು ಸಹ ನೂರು ಕೋಟಿ ಬಾರಿಸುವಲ್ಲಿ ಯಶಸ್ವಿಯಾದವು.

ಈ ಪೈಕಿ ವಾರಿಸು ಹಾಗೂ ವಾಲ್ತೇರು ವೀರಯ್ಯ ಚಿತ್ರಗಳು ಇನ್ನೂರು ಕೋಟಿ ಕ್ಲಬ್‌ ಅನ್ನೂ ಸಹ ಸೇರಿದವು. ಇನ್ನು ಈ ಚಿತ್ರಗಳ ಬಳಿಕ ಎರಡು ವಾರಗಳ ಅಂತರದಲ್ಲಿ ಬಿಡುಗಡೆಗೊಂಡ ಶಾರುಖ್ ಖಾನ್ ನಟನೆಯ ಪಠಾಣ್ ಬಿಡುಗಡೆಯಾದ ಮೂರೇ ದಿನದಲ್ಲಿ ಮುನ್ನೂರು ಕೋಟಿ ಗಳಿಸಿತು. ಈ ಚಿತ್ರ ಶಾರುಖ್ ಖಾನ್‌ಗೆ ಕಮ್‌ಬ್ಯಾಕ್ ಚಿತ್ರವಾಯಿತು ಹಾಗೂ ಬಾಲಿವುಡ್‌ಗೂ ಸಹ ಒಂದು ರೀತಿಯ ಕಮ್‌ಬ್ಯಾಕ್ ಚಿತ್ರವಾಯಿತು ಎಂದರೆ ತಪ್ಪಾಗಲಾರದು.

ಪಠಾಣ್ ಬಿಡುಗಡೆಯಾದ ಬೆನ್ನಲ್ಲೇ ತೆರೆಕಂಡ ಕ್ರಾಂತಿ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಸಹ ಮೊದಲ ದಿನ 12.5 ಕೋಟಿ ಗಳಿಸುವ ಮೂಲಕ ಒಳ್ಳೆಯ ಓಪನಿಂಗ್ ಪಡೆದುಕೊಂಡಿತು. ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿ ಈ ಎಲ್ಲಾ ಚಿತ್ರಗಳೂ ಸಹ ಒಳ್ಳೆಯ ಗಳಿಕೆಯನ್ನೇ ಮಾಡಿವೆ. ಅದರಲ್ಲಿಯೂ ಮೈಸೂರಿನಲ್ಲಿ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುವ ಮೂಲಕ ಒಳ್ಳೆಯ ಕಲೆಕ್ಷನ್ ಮಾಡಿವೆ. ಈ ಮೇಲ್ಕಂಡ ಐದು ಚಿತ್ರಗಳ ಪೈಕಿ ಇಲ್ಲಿಯವರೆಗೂ ಮೈಸೂರು ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿ ಈ ವರ್ಷ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಕ್ರಾಂತಿ, ಪಠಾಣ್ ಅಚ್ಚರಿಯ ಗಳಿಕೆ!

ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಕ್ರಾಂತಿ, ಪಠಾಣ್ ಅಚ್ಚರಿಯ ಗಳಿಕೆ!

ಈ ವರ್ಷ ಬಿಡುಗಡೆಗೊಂಡ ಚಿತ್ರಗಳ ಪೈಕಿ ಮೈಸೂರು ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿರುವ ಚಿತ್ರ ಎಂಬ ಪಟ್ಟವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಗಿಟ್ಟಿಸಿಕೊಂಡಿದೆ. 28ರ ಶನಿವಾರದವರೆಗೆ ಕ್ರಾಂತಿ ಚಿತ್ರ 1.48 ಕೋಟಿ ರೂಪಾಯಿಗಳನ್ನು ಮೈಸೂರು ನಗರ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದೆ. ಇನ್ನು ಪಠಾಣ್ ಚಿತ್ರ 28ರ ಶನಿವಾರದವರೆಗೆ 97 ಲಕ್ಷ ರೂಪಾಯಿಯನ್ನು ಮಾಡಿ ಎರಡನೇ ಸ್ಥಾನದಲ್ಲಿದೆ. ಮೈಸೂರು ನಗರದಲ್ಲಿ ಹಿಂದಿ ಚಿತ್ರವೊಂದು ಈ ಪರಿಯ ಕಲೆಕ್ಷನ್ ಮಾಡಿರುವುದು ಇದೇ ಮೊದಲು. ಈ ಮೂಲಕ ಪಠಾಣ್ ಅಚ್ಚರಿಯ ಗಳಿಕೆ ಮಾಡಿದೆ.

ಟಾಪ್ 4 ಪಟ್ಟಿ ಹೀಗಿದೆ

ಟಾಪ್ 4 ಪಟ್ಟಿ ಹೀಗಿದೆ

ಇನ್ನು ಈ ವರ್ಷ ಬಿಡುಗಡೆಗೊಂಡು ಮೈಸೂರು ನಗರದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಟಾಪ್ 4 ಪಟ್ಟಿ ಈ ಕೆಳಕಂಡಂತಿದೆ..

1. ಕ್ರಾಂತಿ - 1.48 ಕೋಟಿ ರೂಪಾಯಿ
2. ಪಠಾಣ್ - 97 ಲಕ್ಷ ರೂಪಾಯಿ
3. ವಾರಿಸು - 54 ಲಕ್ಷ ರೂಪಾಯಿ
4. ತುನಿವು - 50 ಲಕ್ಷ ರೂಪಾಯಿ

ಪಠಾಣ್ ಮತ್ತಷ್ಟು ಗಳಿಸಬಹುದು

ಪಠಾಣ್ ಮತ್ತಷ್ಟು ಗಳಿಸಬಹುದು

ಇನ್ನು ಇಂದು ( ಜನವರಿ 29 ) ಭಾನುವಾರದ ರಜೆ ಇರುವ ಕಾರಣ ಪಠಾಣ್ ಚಿತ್ರ ಮೈಸೂರಿನಲ್ಲಿ ಮತ್ತಷ್ಟು ಗಳಿಸುವುದು ಖಚಿತ ಎನ್ನಬಹುದು. ಈ ಮೂಲಕ ಮೈಸೂರು ಬಾಕ್ಸ್ ಆಫೀಸ್‌ನಲ್ಲಿ ಒಂದು ಕೋಟಿ ಗಳಿಕೆ ಮಾಡಿದ ಮೊದಲ ಹಿಂದಿ ಚಿತ್ರ ಎಂಬ ಮೈಲಿಗಲ್ಲನ್ನು ನೆಡಲಿದೆ. ಭಾನುವಾರದ ಬುಕಿಂಗ್ ಕೂಡ ಉಳಿದ ಎಲ್ಲಾ ಚಿತ್ರಗಳಿಗಿಂತ ಹೆಚ್ಚಿದ್ದು ಪಠಾಣ್ ಗಳಿಕೆ ಮತ್ತಷ್ಟು ಏರಿಕೆ ಕಾಣಲಿದೆ.

More from Filmibeat

English summary
Darshan starrer Kranti movie grossed 1.48 crores in Mysore from 3 days
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X