Don't Miss!
- News
ಬಿಬಿಎಂಪಿ ವಾರ್ಡ್ ರಚನೆ ವಿವಾದ: ಮೀಸಲು ನಿಗದಿ ಅಂತಿಮಗೊಳಿಸದಂತೆ ಹೈಕೋರ್ಟ್ ತಾಕೀತು
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಮೇಷ, ಮೀನ ರಾಶಿಯವರು ವಾದಗಳಿಂದ ದೂರವಿರಿ
- Sports
ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್ ಬೌಲ್ಟ್! ಏಕೆ ಈ ನಿರ್ಧಾರ?
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- Automobiles
ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೋಂಡಾ
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
'ಕ್ರಾಂತಿ' ರಿಲೀಸ್ ದಿನಾಂಕ ಫಿಕ್ಸ್, ಅಕ್ಟೋಬರ್ನಲ್ಲಿ ಸಿನಿಮಾ ತೆರೆಗೆ!
'ರಾಬರ್ಟ್' ಸಿನಿಮಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆತ್ತಿಕೊಂಡಿರುವ ಚಿತ್ರ 'ಕ್ರಾಂತಿ'. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಕೂಡ ರಿಲೀಸ್ ಆಗಿದೆ. ಚಿತ್ರದಲ್ಲಿ ದರ್ಶನ್ ಲುಕ್ ಕೂಡ ರಿವೀಲ್ ಆಗಿದೆ. ಟೀಸರ್ನಲ್ಲಿ ಚಿತ್ರದ ಬಗ್ಗೆ ಕೆಲವು ವಿಚಾರಗಳು ರಿವೀಲ್ ಆಗಿದೆ.
ಇದು ದರ್ಶನ್ 55ನೇ ಸಿನಿಮಾ ಎನ್ನುವುದು ವಿಶೇಷ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಹುಟ್ಟು ಹಾಕಿತ್ತು. ದರ್ಶನ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೀಸರ್ನಲ್ಲಿ ಸೂಟು, ಬೂಟು ತೊಟ್ಟು ಮಿಂಚಿದ್ದಾರೆ.
ಈ ಚಿತ್ರದ ಮೂಲಕ ದರ್ಶನ್ರನ್ನು ಕಣ್ತುಂಬಿ ಕೊಳ್ಳಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಅಷ್ಟಕ್ಕೂ ಕ್ರಾಂತಿ ಚಿತ್ರಕ್ಕಾಗಿ ಇನ್ನು ಹೆಚ್ಚು ದಿನಗಳು ಕಾಯಬೇಕಾಗಿಲ್ಲ. ಚಿತ್ರದ ರಿಲೀಸ್ ಯಾವಾಗ ಎನ್ನುವ ಹೊಸ ಅಪ್ಡೇಟ್ ಹೊರ ಬಿದ್ದಿದೆ. ರಿಲೀಸ್ ಯಾವಾಗ ಎನ್ನುವ ಅಪ್ಡೇಟ್ ಬಗ್ಗೆ ಮುಂದೆ ಓದಿ....

ಭರದಿಂದ ಸಾಗಿದೆ 'ಕ್ರಾಂತಿ' ಕೆಲಸಗಳು!
ಕ್ರಾಂತಿ ಚಿತ್ರದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದೆ. ಇನ್ನೇನಿದ್ದರೂ ಸಿನಿಮಾದ ಪ್ಯಾಚ್ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾತ್ರ ಬಾಕಿ ಇದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಸಿನಿಮಾ ತಂಡ ನಿರತವಾಗಿದೆ. ಜೊತೆಗೆ ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಕೂಡ ಹಾಕಿಕೊಂಡಿದೆ. ಹಾಗಾಗಿ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ವೇಗವಾಗಿ ಸಾಗುತ್ತಿವೆ. ಇನ್ನು ಸಿನಿಮಾದ ರಿಲೀಸ್ ಯಾವಾಗ ಎನ್ನುವ ಎಕ್ಸ್ಕ್ಲ್ಯೂಸ್ ಮಾಹಿತಿ ಫಿಲ್ಮೀ ಬೀಟ್ ತಂಡಕ್ಕೆ ಸಿಕ್ಕಿದೆ.

ಅಕ್ಟೋಬರ್ 21ಕ್ಕೆ 'ಕ್ರಾಂತಿ' ರಿಲೀಸ್!
'ಕ್ರಾಂತಿ' ಸಿನಿಮಾದ ರಿಲೀಸ್ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ. ಇನ್ನು ಹೆಚ್ಚು ದಿನ ಕ್ರಾಂತಿಗಾಗಿ ಕಾಯಬೇಕಾಗಿಲ್ಲ. ಕ್ರಾಂತಿ ರಿಲೀಸ್ಗೆ ದಿನಾಂಕ ಫಿಕ್ಸ್ ಆಗಿದೆ. ಇದೇ ವರ್ಷ ಅಕ್ಟೋಬರ್ 21ಕ್ಕೆ 'ಕ್ರಾಂತಿ' ಸಿನಿಮಾ ರಿಲೀಸ್ ಆಗಲಿದೆ. ಚಿತ್ರದ ರಿಲೀಸ್ ದಿನಾಂಕ ನಿಗದಿಯಾಗಿದೆ. ಆದರೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಸದ್ಯದಲ್ಲಿಯೇ ಚಿತ್ರತಂಡ ಈ ಬ್ಗಗೆ ಮಾಹಿತಿ ನೀಡಲಿದೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಡೇಟ್ ಪ್ರಕಟ!
ಇನ್ನು ಈ ಸಿನಿಮಾದ ರಿಲೀಸ್ ಬಗ್ಗೆ ಚಿತ್ರತಂಡ ಅಪ್ಡೇಟ್ ನೀಡಲೂ ಕೂಡ ದಿನಾಂಕ ನಿಗದಿ ಮಾಡಿಕೊಂಡಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 'ಕ್ರಾಂತಿ' ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡುವ ಯೋಜನೆಯಲ್ಲಿದೆ. ಇದು ಸದ್ಯದ ಮಾಹಿತಿ. ಆದರೆ ಸಿನಿಮಾ ತಂಡ ಅಂದೇ ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

ಸರ್ಕಾರಿ ಶಾಲೆ 'ಕ್ರಾಂತಿ'!
ಕ್ರಾಂತಿ ಸಿನಿಮಾ ಯಾವ ವಿಚಾರದ ಬಗ್ಗೆ ಇರಲಿದೆ, ಯಾವುದಕ್ಕಾಗಿ ಕ್ರಾಂತಿ ಆಗುತ್ತಿದೆ ಎನ್ನುವ ವಿಚಾರ ಹೊರ ಬಿದ್ದಿದೆ. ಈ ಚಿತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟ ಇದೆ. ಅವನತಿಯತ್ತ ಸಾಗುತ್ತಾ ಇರುವ ಸರ್ಕಾರಿ ಶಾಲೆಗಳನ್ನು ಉಳಿಸುವುದು ಹೇಗೆ ಮತ್ತು ಸರ್ಕಾರಿ ಶಾಲೆಗಳು ಅವನತಿ ಹೊಂದಿದರೆ ಏನೆಲ್ಲಾ ಆಗುತ್ತದೆ ಎನ್ನುವ ಬಗ್ಗೆ 'ಕ್ರಾಂತಿ' ಹೇಳಲಿದೆ.

'ಕ್ರಾಂತಿ'ಯಲ್ಲಿ ದರ್ಶನ್ ಪಾತ್ರ ಏನು?
ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ನಟ ದರ್ಶನ್ ಪಾತ್ರ ಹೋರಾಡುತ್ತೆ. ಚಿತ್ರದಲ್ಲಿ ಎನ್ಆರ್ಐ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ದರ್ಶನ್ ಇಲ್ಲಿ ತನಕ ಹಲವಾರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಕಥೆಯಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.