Don't Miss!
- News
Black Tea: ಕಪ್ಪು ಚಹಾದಿಂದ ಕೊರೊನಾ ವೈರಸ್ ನಿಯಂತ್ರಣ
- Sports
CSA ಟಿ20 ಲೀಗ್: RPSG-ಮಾಲೀಕತ್ವದ ಡರ್ಬನ್ ಫ್ರಾಂಚೈಸ್ ಪರ ಆಡಲಿದ್ದಾರೆ ಕ್ವಿಂಟನ್ ಡಿ ಕಾಕ್, ಹೋಲ್ಡರ್
- Automobiles
ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಬಜಾಜ್ ಸಿಟಿ110ಎಕ್ಸ್ ಬೈಕ್
- Finance
ಕೋಟ್ಯಾಧಿಪತಿ ಆಗಲು ಇದರಲ್ಲಿ ಹೂಡಿಕೆ ಮಾಡಿ!
- Lifestyle
ಕಂಕುಳಡಿಯಲ್ಲಿ ಮೊಡವೆಗಳು: ಕಾರಣ ಮತ್ತು ನಿವಾರಿಸುವ ವಿಧಾನ ಇಲ್ಲಿದೆ
- Technology
ಈ ಫೋನ್ಗಳಲ್ಲಿ 50 ಮೆಗಾಪಿಕ್ಸಲ್ ಕ್ಯಾಮೆರಾ ಇದೆ!..ಫೋನ್ ಬೆಲೆಯೂ ಕಡಿಮೆ!
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
15 ದಿನದ ಶೂಟಿಂಗ್ ನಂತರ 'ಕ್ರಾಂತಿ'ಗೆ ಕುಂಬಳಕಾಯಿ!
ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ. ಕ್ರಾಂತಿ ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಕ್ತಾಯವಾಗಿದೆ. ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿ ಕುತೂಹಲ ಹೆಚ್ಚಿಸಿದೆ.
ಕಥೆಯ ಬಗ್ಗೆ ಸಣ್ಣ ಸುಳಿವು ಬಿಟ್ಟು ಕೊಟ್ಟಿರುವ ನಿರ್ಮಾಪಕಿ ಶೈಲಜಾ ನಾಗ್ ಇದು ಅಕ್ಷರ ಕ್ರಾಂತಿ ಕುರಿತಾದ ಸಿನಿಮಾ ಎಂದಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಮಾಡಿ ಮುಗಿಸಿದೆ ಸಿನಿಮಾ ತಂಡ. ಈಗಾಗಲೇ ಬೆಂಗಳೂರು, ಹೈದರಾಬಾದ್ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಅಕ್ಷರ ಕ್ರಾಂತಿಯ ಕಥೆ ಹೇಳ್ತಿದ್ದು, ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ.
ಒಂದಾಗ್ತಿದ್ದಾರೆ
ನಟ
ದರ್ಶನ್
ಮತ್ತು
ನಿರ್ಮಾಪಕ
ಉಮಾಪತಿ
ಶ್ರೀನಿವಾಸ್!
ವಿ. ಹರಿಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದರ ಜೊತೆಗೆ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಇನ್ನು ಸಿನಿಮಾದ ಕೆಲವು ಭಾಗದ ಚಿತ್ರೀಕರಣ ಮಾತ್ರವೇ ಬಾಕಿ ಇದ್ದು, ಸಾಂಗ್ ಚಿತ್ರೀಕರಣಕ್ಕಾಗಿ ಸಿನಿಮಾ ತಂಡ ಸದ್ಯ ವಿದೇಶಕ್ಕೆ ಹಾರಿದೆ.

ಸಾಂಗ್ ಶೂಟಿಂಗ್ನಲ್ಲಿ ಕ್ರಾಂತಿ!
ಎರಡು ಹಾಡುಗಳು ಮತ್ತು ಕೆಲವು ಸನ್ನಿವೇಶಗಳ ಚಿತ್ರೀಕರಣಕ್ಕಾಗಿ ಕ್ರಾಂತಿ ಚಿತ್ರತಂಡ ವಿದೇಶಕ್ಕೆ ಹೊರಟಿದೆ. 15 ದಿನಗಳ ಕಾಲ ವಿದೇಶದಲ್ಲಿ ಬೀಡುಬಿಟ್ಟು ಅದ್ಭುತ ಲೊಕೇಶನ್ಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಸುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ. ಚಿತ್ರದಲ್ಲಿ ದರ್ಶನ್ ಎನ್ಆರ್ಐ ಪಾತ್ರದಲ್ಲಿ ನಟಿಸ್ತಿದ್ದಾರೆ ಎನ್ನಲಾಗಿತ್ತು, ಅದಕ್ಕೆ ತಕ್ಕಂತೆ ವಿದೇಶದಲ್ಲಿ ಒಂದಷ್ಟು ಸನ್ನಿವೇಶಗಳನ್ನು ಚಿತ್ರಿಸುವ ಸಾಧ್ಯತೆಯಿದೆ. ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಇರುವ ಕಾರಣಕ್ಕೆ ಚಿತ್ರದ ಹಾಡುಗಳ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ದರ್ಶನ್
ಹೊಸ
ಕಾರಿನ
ಬೆಲೆ
ಎಷ್ಟು?
ದಾಸನ
ಐಷಾರಾಮಿ
ಕಾರುಗಳ
ಲಿಸ್ಟ್
ಇಲ್ಲಿದೆ!

15 ದಿನಗಳ ಶೂಟಿಂಗ್, ಚಿತ್ರ ಕಂಪ್ಲೀಟ್!
ರಾಬರ್ಟ್ ಚಿತ್ರದ ನಂತರ ನಟ ದರ್ಶನ್ ನಟಿಸ್ತಿರೋ ಸಿನಿಮಾ 'ಕ್ರಾಂತಿ'. ಇನ್ನು 15 ದಿನ ಶೂಟಿಂಗ್ ಮುಗಿದ್ರೆ, ಕುಂಬಳಕಾಯಿ ಒಡೆಯಲಿದೆ ಚಿತ್ರತಂಡ. ನವೆಂಬರ್ 1ರಂದು ರಾಜ್ಯೋತ್ಸವದ ಸಂಭ್ರಮದಲ್ಲೇ ಸಿನಿಮಾ ರಿಲೀಸ್ಗೆ ಪ್ರಯತ್ನ ನಡೀತಿದೆ. ಅಭಿಮಾನಿಗಳು ಸಿನಿಮಾ ನೋಡೋಕೆ ಕಾತರದಿಂದ ಕಾಯ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಲಿದೆ. ಬಳಿಕ ಚಿತ್ರದ ಪ್ರಮೋಷನ್ ಕೂಡ ಆರಂಭವಾಗಲಿದೆ.

ಸರ್ಕಾರಿ ಶಾಲೆಗಾಗಿ ದರ್ಶನ್ ಹೋರಾಟ!
'ಕ್ರಾಂತಿ' ಸಿನಿಮಾ ಯಾವ ವಿಚಾರದ ಬಗ್ಗೆ ಇರಲಿದೆ, ಸಿನಿಮಾದಲ್ಲಿ ಯಾವ ಕ್ರಾಂತಿ ಇರಲಿದೆ ಎನ್ನುವ ವಿಚಾರ ಹೊರ ಬಿದ್ದಿದೆ. ಈ ಚಿತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟ ಇದೆ. ಅವನತಿಯತ್ತ ಸಾಗುತ್ತಾ ಇರುವ ಸರ್ಕಾರಿ ಶಾಲೆಗಳನ್ನು ಉಳಿಸುವುದು ಹೇಗೆ ಮತ್ತು ಸರ್ಕಾರಿ ಶಾಲೆಗಳು ಅವನತಿ ಹೊಂದಿದರೆ ಏನೆಲ್ಲಾ ಆಗುತ್ತದೆ ಎನ್ನುವ ಬಗ್ಗೆ 'ಕ್ರಾಂತಿ' ಹೇಳಲಿದೆ.
ವರಮಹಾಲಕ್ಷ್ಮಿ
ಹಬ್ಬಕ್ಕೆ
ದರ್ಶನ್
ಕಡೆಯಿಂದ
ಬಿಗ್
ಸರ್ಪ್ರೈಸ್!

ನವೆಂಬರ್ನಲ್ಲಿ ಕ್ರಾಂತಿ ರಿಲೀಸ್ ಆಗುತ್ತಾ!
ಕೊರೊನಾ ಕಾರಣಕ್ಕೆ 'ಕ್ರಾಂತಿ' ಸಿನಿಮಾ ಕೂಡ ತಡವಾಗಿ ಶುರುವಾಗಿದೆ. ಆದರೆ ಇನ್ನು ಹೆಚ್ಚು ದಿನ ಕ್ರಾಂತಿಗಾಗಿ ಕಾಯಬೇಕಾಗಿಲ್ಲ. ಜುಲೈ ಅಂತ್ಯದೊಳಗೆ ಸಿನಿಮಾ ಸಿದ್ಧವಾಗಲಿದೆ. ಬಳಿಕ ಸಿನಿಮಾ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಾಗುತ್ತದೆ. ಇನ್ನು 'ಕ್ರಾಂತಿ' ಇದೇ ವರ್ಷ ನವೆಂಬರ್ನಲ್ಲಿ ತೆರೆ ಕಾಣಲಿದೆ ಎನ್ನಲಾಗಿದೆ. ಈ ಬಗ್ಗೆ ಸದ್ಯಲ್ಲೇ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿದ್ದು, ಟ್ರೈಲರ್ ಕೂಡ ರಿಲೀಸ್ ಬಗ್ಗೆಯೂ ಮಾಹಿತಿ ಹೊರ ಬೀಳಲಿದೆ.