ಈ ವೀಕೆಂಡ್ ಕಿರುತೆರೆಯಲ್ಲಿ 'ಕುರುಕ್ಷೇತ್ರ'ದ ಆಡಿಯೋ ಹಬ್ಬ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಆಡಿಯೋ ರಿಲೀಸ್ ಆಗಿ ದಿನಗಳೆ ಕಳೆದಿವೆ. ಅದ್ದೂರಿಯಾಗಿ ಬಿಡುಗಡೆಯಾದ ಆಡಿಯೋ ಕ್ರಾಯಕ್ರಮವನ್ನು ನೋಡುವ ಭಾಗ್ಯ ಪ್ರೇಕ್ಷಕರಿಗೆ ಇನ್ನು ಸಿಕ್ಕಿರಲ್ಲಿಲ್ಲ. ಯಾಕಂದ್ರೆ ಆಡಿಯೋ ರಿಲೀಸ್ ಕಾರ್ಯಕ್ರಮದ ಹಕ್ಕು ಜೀ ಕನ್ನಡ ವಾಹಿನಿ ಅವರ ಬಳಿ ಇತ್ತು. ಹಾಗಾಗಿ ಈ ಕಾರ್ಯಕ್ರಮ ಯಾವತ್ತು ಪ್ರಸಾರವಾಗಲಿದೆ ಎಂದು ಕುತೂಹಲದಿಂದ ಕಾಯುತ್ತಿದ್ದರು ಡಿ ಬಾಸ್ ಅಭಿಮಾನಿಗಳು.

ಆದ್ರೀಗ ಆ ಸಮಯ ಹತ್ತಿರ ಬಂದಿದೆ. ಇದೇ ವೀಕೆಂಡ್ ಅಂದ್ರೆ ಭಾನುವಾರ ಕುರುಕ್ಷೇತ್ರ ಆಡಿಯೋ ರಿಲೀಸ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಸಂಜೆ 4 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಸುಂದರ ಕಾರ್ಯಕ್ರಮವನ್ನು ನೋಡಲು ಅಭಿಮಾನಿಗಳು ಈಗಾಗಲೆ ತುದಿಗಾಲಿನಲ್ಲಿ ನಿಂತಿದ್ದಾರೆ.

ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಪೌರಾಣಿಕ ಚಿತ್ರ ಕುರುಕ್ಷೇತ್ರದ ಆಡಿಯೋವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡಲಾಗಿತ್ತು. ಈ ಕಾರ್ಯಕ್ರವನ್ನು ಖ್ಯಾತ ನಿರೂಪಕಿ ಅನುಶ್ರೀ ನಡೆಸಿಕೊಟ್ಟಿದ್ದರು. ಈ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರ ಸ್ವಾಮಿ ಬಿಟ್ಟರೆ ಉಳಿದ ಎಲ್ಲಾ ಚಿತ್ರತಂಡ ಭಾಗಿಯಾಗಿತ್ತು. ನಟಿಯರಾದ ಹರಿಪ್ರಿಯಾ, ಮೇಘನಾ ರಾಜ್ ಮತ್ತು ನಟ ದರ್ಶನ್, ವಿ ರವಿಚಂದ್ರನ್, ರವಿಶಂಕರ್, ಸೋನು ಸೂದ್, ಶಶಿಕುಮಾರ್ ಎಲ್ಲರೂ ಹಾಜರಿದ್ದರು.

Darshan Starrer Kurukshetra Audio Launch Event Will Be Aired On Television This Sunday

ಇನ್ನು ಸಾಕಷ್ಟು ಡ್ಯಾನ್ಸ್ ಕಾರ್ಯಕ್ರಮಗಳು ಸಹ ನಡೆದಿದೆ. ಹರಿಪ್ರಿಯಾ ಮತ್ತು ಮೇಘನಾ ರಾಜ್ ಸೇರಿದಂತೆ ಅನೇಕರ ಡ್ಯಾನ್ಸ್ ಕೂಡ ಕಾರ್ಯಕ್ರಮದ ಹೈಲೆಟ್ಸ್ ಆಗಿದೆ. ಅಂದ್ಹಾಗೆ ಕುರುಕ್ಷೇತ್ರ ಚಿತ್ರದ ಹಾಡುಗಳು ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಕುರುಕ್ಷೇತ್ರ ಆಡಿಯೋ ಕಾರ್ಯಕ್ರಮವನ್ನು ಇದೆ ವೀಕೆಂಡ್ ನೋಡಿ ಕಣ್ತುಂಬಿಕೊಳ್ಳಿ.

More from Filmibeat

English summary
Kannada actor Darshan starrer Kurukshetra grand audio launch event will be aired on television this Sunday from 4pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X