For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ' ಮಲಯಾಳಂ ವರ್ಷನ್ ರಿಲೀಸ್ ಗೆ ದಿನಾಂಕ ನಿಗದಿ

  |
  Darshan starrer Kurukshetra Malayalam Version Set to Release | FILMIBEAT KANNADA

  ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡಿದ ಪೌರಾಣಿಕ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಿ ಎರಡು ತಿಂಗಳ ಮೇಲಾಗಿದೆ. ಕನ್ನಡ ಚಿತ್ರಾಭಿಮಾನಿಗಳ ಮನಗೆದ್ದಿರುವ ಕುರುಕ್ಷೇತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ. ದೊಡ್ಡ ದೊಡ್ಡ ಕಲಾವಿದರು ಬಣ್ಣಹಚ್ಚಿರುವ ಕುರುಕ್ಷೇತ್ರ ನೋಡಿ ಅಭಿಮಾನಿಗಳು ಸಂತಸಪಟ್ಟಿದ್ದರು.

  ಕುರುಕ್ಷೇತ್ರ ಐದು ಭಾಷೆಯಲ್ಲಿ ತೆರೆಗೆ ಬರಲು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿತ್ತು. ಆದ್ರೆ ಮೊದಲು ಕನ್ನಡ ಮತ್ತು ತೆಲುಗು ವರ್ಷನ್ ಮಾತ್ರ ತೆರೆಗೆ ಬಂದಿತ್ತು. ಆಗಸ್ಟ್ 9ಕ್ಕೆ ಕುರುಕ್ಷೇತ್ರ ಅದ್ದೂರಿಯಾಗಿ ರಿಲೀಸ್ ಆಗಿತ್ತು. ನಂತರ ತಮಿಳು ವರ್ಷನ್ ರಿಲೀಸ್ ಆಗಿದೆ. ಆದ್ರೆ ಹಿಂದಿ ಮತ್ತು ಮಲಯಾಳಂ ವರ್ಷನ್ ಇನ್ನು ಬಿಡುಗಡೆಯಾಗಿರಲಿಲ್ಲ.

  ಸುದೀಪ್-ದರ್ಶನ್ ಮುಖಾಮುಖಿ: ಡಿಸೆಂಬರ್ ನಲ್ಲಿ ಬಾಕ್ಸ್ ಆಫೀಸ್ ವಾರ್?ಸುದೀಪ್-ದರ್ಶನ್ ಮುಖಾಮುಖಿ: ಡಿಸೆಂಬರ್ ನಲ್ಲಿ ಬಾಕ್ಸ್ ಆಫೀಸ್ ವಾರ್?

  ಹಿಂದಿ ವರ್ಷನ್ ಯಾವಾಗ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದರು. ಆದ್ರೀಗ ಮಲಯಾಳಂ ಅಭಿಮಾನಿಗಳಿಗೆ ಸಂತಸದ ಸುದ್ದಿ. ಕುರುಕ್ಷೇತ್ರ ಮಲಯಾಳಂನಲ್ಲಿ ಇದೆ ತಿಂಗಳು 18ಕ್ಕೆ ತೆರೆಗೆ ಬರುತ್ತಿದೆ. ಈ ಬಗ್ಗೆ ಪೋಸ್ಟರ್ ಒಂದು ವೈರಲ್ ಆಗಿದೆ.

  ಚಿತ್ರತಂಡ ಮಲಯಾಳಂನಲ್ಲಿ ಪ್ರಮೋಷನ್ ಚಟುವಟಿಕೆ ಇನ್ನು ಪ್ರಾರಂಭಿಸಿದಹಾಗಿಲ್ಲ. ಈ ಹಿಂದೆ ಚಿತ್ರತಂಡ ತೆಲುಗು ಮತ್ತು ತಮಿಳು ವರ್ಷನ್ ಪ್ರಮೋಷನ್ ಅನ್ನು ಭರ್ಜರಿಯಾಗಿ ಮಾಡಿದ್ದರು. ಮಲಯಾಳಂನಲ್ಲಿ ಕುರುಕ್ಷೇತ್ರ ರಿಲೀಸ್ ಗೆ ಇನ್ನೆರೆಡೆ ದಿನ ಬಾಕಿ ಇದೆ. ದರ್ಶನ್ ಸಿನಿಮಾವನ್ನು ಮಲಯಾಳಂ ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದು ಕಾದುನೋಡಬೇಕು.

  English summary
  Kannada actor Darshan starrer Kurukshetra Malayalam version set to release in October 18th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X