'ಕುರುಕ್ಷೇತ್ರ' ಚಿತ್ರದ ಟಿಕ್ ಟಾಕ್ ಮಾಡಿ ಬಹುಮಾನ ಗೆಲ್ಲಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ಕುರುಕ್ಷೇತ್ರ ರಿಲೀಸ್ ಗೆ ಇನ್ನೇನು ದಿನಗಣನೆ ಶುರುವಾಗಿದೆ. ಈಗಾಗಲೆ ಕನ್ನಡದಲ್ಲಿ ಎರಡನೆ ಟ್ರೈಲರ್ ರಿಲೀಸ್ ಮಾಡಿ ಸದ್ದು ಮಾಡುತ್ತಿರುವ ಕುರುಕ್ಷೇತ್ರ ಪರಭಾಷೆಯಲ್ಲು ಆಡಿಯೋ ಮತ್ತು ಟ್ರೈಲರ್ ಅನ್ನು ರಿಲೀಸ್ ಮಾಡಿ ಬೇರೆ ಭಾಷೆಯಲ್ಲೂ ಸದ್ದು ಮಾಡುತ್ತಿದೆ.

ಇದರ ಜೊತೆಗೀಗ ಚಿತ್ರತಂಡ ಅಭಿಮಾನಿಗಳಿಗೆ ಬಂಪರ್ ಆಫರ್ ಒಂದನ್ನು ನೀಡಿದೆ. ಕುರುಕ್ಷೇತ್ರ ಚಿತ್ರಕ್ಕೆ ಸಂಬಂಧಿಸಿದ ಟಿಕ್ ಟಾಕ್ ಮಾಡಿ ಕಳುಹಿಸಿ ಬಹುಮಾನ ಗೆಲ್ಲುವ ಅವಕಾಶ ಒದಗಿಬಂದಿದೆ. ಎಲ್ಲಿಗೆ ಕಳುಹಿಸಬೇಕು ಏನು ಅಂತ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.

ನೀವು ಮಾಡಬೇಕಾಗಿದ್ದು ಇಷ್ಟೆ, ಕುರುಕ್ಷೇತ್ರ ಚಿತ್ರಕ್ಕೆ ಸಂಬಂಧಿಸದ ಡೈಲಾಗ್ ಮತ್ತು ಹಾಡುಗಳಿಗೆ ಟಿಕ್ ಟಾಕ್ ಮಾಡಬೇಕು. ಈ ವಿಡಿಯೋವನ್ನು ಕುರುಕ್ಷೇತ್ರ ಮತ್ತು ಡಿಬಾಸ್ ಎಂದು ಹ್ಯಾಶ್ ಟ್ಯಾಗ್ ಹಾಕಿ ಪೋಸ್ಟ್ ಮಾಡಬೇಕು. ಮುಂದಿನ ತಿಂಗಳು ಆಗಸ್ಟ್ 5 ಒಳಗೆ ವಿಡಿಯೋವನ್ನು ಪೋಸ್ಟ್ ಮಾಡಬೇಕು. ಅಂದ್ಹಾಗೆ ಕೇವಲ 15 ಜನ ಉತ್ತಮರನ್ನು ಮಾತ್ರ ಆಯ್ಕೆ ಮಾಡಲಾಗುತ್ತೆ. ಆಗಸ್ಟ್ 7ಕ್ಕೆ ವಿನ್ನರ್ಸ್ ಅನೌನ್ಸ್ ಮಾಡಲಾಗುತ್ತೆ.

Darshan starrer kurukshetra movie team organize Tik Tok competition

ಅಂದ್ಹಾಗೆ ವಿನ್ನರ್ಸ್ ಗೆ ಸಿಗುವ ಬಹುಮಾನ ಏನು ಅಂತ ಯೋಚಿಸುತ್ತಿದ್ದೀರಾ. 15 ಜನ ವಿನ್ನರ್ಸ್ ಗೆ ಕುರುಕ್ಷೇತ್ರ ಸಿನಿಮಾ ನೋಡಲು ಉಚಿತ ಟಿಕೆಟ್ ಸಿಗಲಿದೆ. ಉಚಿತವಾಗಿ ಸಿನಿಮಾ ನೋಡಬಯಸುವ ಡಿ ಬಾಸ್ ಅಭಿಮಾನಿಗಳು ಅದ್ಭುತವಾದ ಟಿಕ್ ಟಾಕ್ ಮಾಡಿ ಪೋಸ್ಟ್ ಮಾಡಿ ಟಿಕೆಟ್ ಗೆಲ್ಲಿರಿ.

More from Filmibeat

English summary
Kannada actor Darshan starrer kurukshetra movie team organize Tik Tok competition. Tik Tok for 'Kurukshetra' movie and win a prize.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X