'ಕುರುಕ್ಷೇತ್ರ' ಬಗ್ಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ.?

By Bharath Kumar

'ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ...?' ಇಂತಹದೊಂದು ಪ್ರಶ್ನೆ ಸುಮಾರು ಒಂದು ವರ್ಷಗಳ ಕಾಲ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಶ್ನೆ ಚರ್ಚೆಯಾಗಿತ್ತು. ಇದೀಗ ಅಂತಹದ್ದೇ ಪ್ರಶ್ನೆಯೊಂದು ಸ್ಯಾಂಡಲ್ ವುಡ್ ಮಂದಿಯನ್ನ ಕಾಡುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಚಿತ್ರದ ಬಗ್ಗೆ ಈಗೊಂದು ಪ್ರಶ್ನೆ ದೊಡ್ಡದಾಗಿ ಕೇಳಿ ಬರುತ್ತಿದೆ. ದೊಡ್ಡ ದೊಡ್ಡ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು, ಫಸ್ಟ್ ಲುಕ್, ಚಿತ್ರದ ಪೋಸ್ಟರ್ ಹಾಗೂ ಟೀಸರ್ ಮೂಲಕ ಭಾರಿ ಕುತೂಹಲ ಕೆರಳಿಸಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ 'ಕುರುಕ್ಷೇತ್ರ' ಸಿನಿಮಾ ಇಷ್ಟೋತ್ತಿಗಾಗಲೇ ತೆರೆಮೇಲೆ ಅಪ್ಪಳಿಸಬೇಕಿತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. ಹೀಗಾಗಿ, ಡಿ-ಬಾಸ್ ಭಕ್ತರು ನಿರಾಸೆಗೊಂಡಿದ್ದಾರೆ. ಹೀಗಿರುವಾಗ, ಕುರುಕ್ಷೇತ್ರ ಚಿತ್ರದ ಬಗ್ಗೆ ದೊಡ್ಡ ಪ್ರಶ್ನೆಯೊಂದು ಕಾಡುತ್ತಿದೆ. ಈ ಪ್ರಶ್ನೆಗೆ ಯಾರೂ ಉತ್ತರ ನೀಡುತ್ತಿಲ್ಲ. ಯಾವುದು ಆ ಪ್ರಶ್ನೆ.? ಮುಂದೆ ಓದಿ....

'ಕುರುಕ್ಷೇತ್ರ' ಯಾವಾಗ ರಿಲೀಸ್.?

'ಕುರುಕ್ಷೇತ್ರ' ಯಾವಾಗ ರಿಲೀಸ್.?

ಈ ಮೊದಲೇ ಹೇಳಿದಂತೆ ಮಾರ್ಚ್ ತಿಂಗಳಲ್ಲಿ 'ಕುರುಕ್ಷೇತ್ರ' ತೆರೆಗೆ ಬರಬೇಕಿತ್ತು. ಆದ್ರೆ, ಕೆಲವು ಕಾರಣಗಳಿಂದ ಸಿನಿಮಾ ಪೂರ್ಣವಾಗಲಿಲ್ಲ. ಹೀಗಾಗಿ, ಹೇಳಿದ್ದ ದಿನಾಂಕಕ್ಕೆ ಬರಲಿಲ್ಲ. ಇದೀಗ, ಕುರುಕ್ಷೇತ್ರ ಯಾವಾಗ ಸಿನಿಮಾ ರಿಲೀಸ್ ಆಗುತ್ತೆ.? ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ.

ಎಲೆಕ್ಷನ್ ಗೆ ಮೊದಲೇ ಕುರುಕ್ಷೇತ್ರ ದರ್ಶನ'

ಎಲೆಕ್ಷನ್ ಗೆ ಮೊದಲೇ ಕುರುಕ್ಷೇತ್ರ ದರ್ಶನ'

ಸಿನಿಮಾ ಆರಂಭವಾದಾಗನಿಂದಲೂ ಈ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಲೇ ಇದೆ. ಕರ್ನಾಟಕ ವಿಧಾನಸಭೆ ಚುನಾವಣೆಗೂ ಮೊದಲೇ 'ಕುರುಕ್ಷೇತ್ರ' ಸಿನಿಮಾ ಬರುತ್ತೆ. ಅದಕ್ಕೆ ಪೌರಾಣಿಕ ಸಿನಿಮಾವಾಗಿದ್ದರೂ ಇಷ್ಟು ಬೇಗ ಶೂಟಿಂಗ್ ಮುಗಿಸಿ, ರಿಲೀಸ್ ಮಾಡಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಚುನಾವಣೆ ನಂತರ ದರ್ಶನ್ ಕುರುಕ್ಷೇತ್ರ

ಚುನಾವಣೆ ನಂತರ ದರ್ಶನ್ ಕುರುಕ್ಷೇತ್ರ

ಇನ್ನೊಂದು ಕಡೆಯಿಂದ ದರ್ಶನ್ 'ಕುರುಕ್ಷೇತ್ರ' ಸಿನಿಮಾ ಬರೋದು ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದಮೇಲೆ ಅಂತೆ. ಚಿತ್ರದ ಗ್ರಾಫಿಕ್ಸ್ ವರ್ಕ್, ಪೊಸ್ಟ್ ಪ್ರೊಡಕ್ಷನ್ ಕೆಲಸ ಹೆಚ್ಚಿದ್ದು, ಅದಕ್ಕೆ ಇನ್ನು ಸಮಯ ಬೇಕಾಗಿದೆ. ಹೀಗಾಗಿ, ಎಲೆಕ್ಷನ್ ಮುಗಿದ ಮೇಲೆ ಆರಾಮಾಗಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ.

ಡಬ್ಬಿಂಗ್ ಕೆಲಸದಲ್ಲಿ ದುರ್ಯೋಧನ

ಡಬ್ಬಿಂಗ್ ಕೆಲಸದಲ್ಲಿ ದುರ್ಯೋಧನ

ಸದ್ಯ, 'ಕುರುಕ್ಷೇತ್ರ' ಚಿತ್ರದ ಟಾಕಿ ಪೋಷನ್ ಸಂಪೂರ್ಣವಾಗಿ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಮಾಡುತ್ತಿರುವ ಈ ಚಿತ್ರದ ಎರಡನೇ ಹಂತದ ಡಬ್ಬಿಂಗ್ ಕೆಲಸ ಮಾಡಲಾಗುತ್ತಿದೆಯಂತೆ. ಈಗಾಗಲೇ ಒಂದು ಸುತ್ತಿನ ಡಬ್ಬಿಂಗ್ ಮಾಡಿದ್ದು, ಈಗ ಎರಡನೇ ಹಂತದಲ್ಲಿ ಮಾತು ಜೋಡಣೆ ಮಾಡಲಾಗುತ್ತಿದೆ.

ಬೆಳಿಗ್ಗೆ ಮುಂಜಾನೆಯೇ ಡಬ್ಬಿಂಗ್ ನೀಡಲಾಗುತ್ತಿದೆ

ಬೆಳಿಗ್ಗೆ ಮುಂಜಾನೆಯೇ ಡಬ್ಬಿಂಗ್ ನೀಡಲಾಗುತ್ತಿದೆ

ಬೆಂಗಳೂರಿನ ಆಕಾಶ್ ಆಡಿಯೋದಲ್ಲಿ 'ಕುರುಕ್ಷೇತ್ರ' ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಬೆಳಿಗ್ಗೆ ಎದ್ದ ಕೂಡಲೇ ಡಬ್ಬಿಂಗ್ ಸ್ಟುಡಿಯೋಗೆ ಬಂದು ಫ್ರೆಶ್ ವಾಯ್ಸ್ ನಲ್ಲೇ ದರ್ಶನ್ ಡಬ್ಬಿಂಗ್ ಮಾಡ್ತಿದ್ದಾರೆ. 'ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೂ ಹೀಗೆ ಮಾಡಿದ್ದರು.

ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ

ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ

ಸದ್ಯ ದರ್ಶನ್ 'ಯಜಮಾನ' ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರಿನಲ್ಲಿ ಚಿತ್ರೀಕರಣ ಮಾಡುತ್ತಿರುವ ದಾಸ ಈ ಮಧ್ಯೆ ಬಿಡುವು ಮಾಡಿಕೊಂಡು 'ಕುರುಕ್ಷೇತ್ರ' ಡಬ್ಬಿಂಗ್ ಮಾಡ್ತಿದ್ದಾರೆ. ಹೀಗೆ, ಪ್ರತಿಯೊಂದು ಹಂತದಲ್ಲೂ ನಿರೀಕ್ಷೆ ಹೆಚ್ಚಿಸುತ್ತಿರುವ 'ಕುರುಕ್ಷೇತ್ರ' ರಿಲೀಸ್ ಯಾವಾಗ.? ಎಂಬುದು ನಮಗೂ ಕಾಡುತ್ತಿರುವ ಪ್ರಶ್ನೆ.

More from Filmibeat

English summary
When is Challenging star Darshan starrer Kurukshetra movie release date. it's million dollar question in sandalwood industry. the movie directed by naganna and produced by munirathna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X