ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ: 'ರಾಬರ್ಟ್' ರಿಲೀಸ್ ಡೇಟ್ ಫಿಕ್ಸ್?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಉಸಿರು ಬಿಡಿ ಹಿಡಿದು ಕಾಯುತ್ತಿದ್ದಾರೆ. ಬಾರಿ ನಿರೀಕ್ಷೆ ಮೂಡಿಸಿರುವ ರಾಬರ್ಟ್ ಚಿತ್ರದ ಟಾಕಿ ಭಾಗ ಮುಕ್ತಾಯವಾಗಿದೆ. ಸದ್ಯ ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ ಚಿತ್ರತಂಡ. ದರ್ಶನ್ ಮತ್ತು ನಟಿ ಆಶಾ ಭಟ್ ನಡುವಿನ ಡ್ಯುಯೆಟ್ ಹಾಡಿನ ಚಿತ್ರೀಕರಣ ಮಾಡಬೇಕಿದೆ ಚಿತ್ರತಂಡ. ಸಧ್ಯದಲ್ಲೇ ಹಾಡಿನ ಚಿತ್ರೀಕರಣ ಮುಗಿಸಿ ಪೊಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಿಕೊಳ್ಳಲಿದೆ ಚಿತ್ರತಂಡ.
ಈಗಾಗಲೆ ಅಭಿಮಾನಿಗಳ ನಿರೀಕ್ಷೆ ಮಟ್ಟ ಇಮ್ಮಡಿಗೊಳಿಸಿರುವ ರಾಬರ್ಟ್ ಅಡ್ಡಾದಿಂದ ಮತ್ತೊಂದು ಭರ್ಜರಿ ಸುದ್ದಿ ಹೊರಬಿದ್ದಿದೆ. ಹೌದು, ಡಿ ಬಾಸ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ರಾಬರ್ಟ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಮೂಲಗಳ ಪ್ರಕಾರ ಚಿತ್ರ ಏಪ್ರಿಲ್ 9ಕ್ಕೆ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೆ ರಾಬರ್ಟ್ ಸಿನಿಮಾ ಸಮ್ಮರ್ ಗೆ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ತಿಂಗಳು ಮತ್ತು ದಿನಾಂಕ ನಿಗದಿಯಾಗಿರಲಿಲ್ಲ. ಈಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ರಾಬರ್ಟ್ ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆಯಂತೆ. ವಿಶೇಷ ಅಂದರೆ ಗುಡ್ ಫ್ರೈಡೇ ಸಮಯದಲ್ಲಿ ರಾಬರ್ಟ್ ತೆರೆಗೆ ಬರುತ್ತಿದೆ.

ಪೋಸ್ಟರ್ ಗಳ ಮೂಲಕವೇ ಸಖತ್ ಕ್ರೇಸ್ ಸೃಷ್ಟಿಸಿರುವ ರಾಬರ್ಟ್ ಟೀಸರ್ ಗೆ ಕಾಯುತ್ತಿದ್ದಾರೆ ಅಭಿಮಾನಿಗಳು. ಟೀಸರ್ ಮತ್ತು ಟ್ರೈಲರ್ ರಿಲೀಸ್ ಗೂ ಮೊದಲೆ ಸಿನಿಮಾ ರಿಲೀಸ್ ಡೇಟ್ ವೈರಲ್ ಆಗಿದೆ. ಡಿ ಬಾಸ್ ಎಂಟ್ರಿಯಿಂದ ಈ ವರ್ಷ ಸಮ್ಮರ್ ಸಂಭ್ರಮ ಜೋರಾಗಿರಲಿದೆ.


Click it and Unblock the Notifications











