'Mr.ಐರಾವತ' ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿರುವ ಘಳಿಗೆಗೆ ಇನ್ನು ಮೂರೇ ದಿನ ಬಾಕಿ. ವರ್ಷದಿಂದ 'Mr.ಐರಾವತ' ಚಿತ್ರವನ್ನ ಕಣ್ಣಾರೆ ನೋಡಬೇಕು ಅಂತ ಹಪಹಪಿಸುತ್ತಿರುವ ಫ್ಯಾನ್ಸ್ ಗೆ ಇದೇ ಗುರುವಾರ (ಅಕ್ಟೋಬರ್ 1) ರಂದು 'Mr.ಐರಾವತ' ದರ್ಶನವಾಗಲಿದೆ.
ಬೆಂಗಳೂರಿನ ಕೆ.ಜಿ.ರೋಡ್ ನಲ್ಲಿರುವ ಪ್ರಮುಖ ಚಿತ್ರಮಂದಿರ ಸಂತೋಷ್ ಸೇರಿದಂತೆ ರಾಜ್ಯಾದ್ಯಂತ 300 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ 'Mr.ಐರಾವತ' ತೆರೆಗೆ ಅಪ್ಪಳಿಸಲಿದ್ದಾನೆ. 'Mr.ಐರಾವತ' ಚಿತ್ರದ ಥಿಯೇಟರ್ ಲಿಸ್ಟ್ ಇಲ್ಲಿದೆ ನೋಡಿ....

ಈ ಹಿಂದೆ ದರ್ಶನ್ ಅಭಿನಯದ 'ಅಂಬರೀಶ' ಚಿತ್ರಕ್ಕೆ ಗಾಂಧಿನಗರದಲ್ಲಿ ಮೇನ್ ಥಿಯೇಟರ್ ಸಿಕ್ಕಿರಲಿಲ್ಲ. ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರವನ್ನೇ ಮುಖ್ಯ ಚಿತ್ರಮಂದಿರವನ್ನಾಗಿಸಿದ ದರ್ಶನ್, ತಮ್ಮ 'ಅಂಬರೀಶ' ಚಿತ್ರವನ್ನ ಬಿಡುಗಡೆ ಮಾಡಿದ್ದರು. [ಹೊಸ ದಾಖಲೆ ನಿರ್ಮಿಸಿದ ಚಾಲೆಂಜಿಂಗ್ ಸ್ಟಾರ್ 'Mr.ಐರಾವತ']
ಆದ್ರೀಗ, 'Mr.ಐರಾವತ' ಚಿತ್ರಕ್ಕೆ ಎಲ್ಲರ ಫೇವರಿಟ್ ಸಂತೋಷ್ ಚಿತ್ರಮಂದಿರ ಸಿಕ್ಕಿದೆ. ಜೊತೆಗೆ ದರ್ಶನ್ ರವರ ಅಚ್ಚುಮೆಚ್ಚಿನ ಪ್ರಸನ್ನ ಥಿಯೇಟರ್ ನಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ಮಲ್ಟಿಪ್ಲೆಕ್ಸ್ ಗಳಲ್ಲೂ 'Mr.ಐರಾವತ'ನ ಅಬ್ಬರ ಜೋರಾಗಿದೆ. ['Mr.ಐರಾವತ' ಟಿಕೆಟ್ ಬೆಲೆ ಅಬ್ಬಬ್ಬಾ...ಅಷ್ಟೊಂದಾ.?!]
ಖಾಕಿ ಖದರ್ ನಲ್ಲಿ ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ಮಿಂಚಿರುವ ಸಿನಿಮಾ 'Mr.ಐರಾವತ'. ಐರಾವತ ದರ್ಶನ್ ಗೆ ಟಕ್ಕರ್ ಕೊಡುವುದಕ್ಕಂತಲೇ ಸಿನಿಮಾದಲ್ಲಿ ಪ್ರಕಾಶ್ ರೈ ವಿಲನ್ ಆಗಿ ಅಭಿನಯಿಸಿದ್ದಾರೆ. ಊರ್ವಶಿ ರೌಟೇಲ ದರ್ಶನ್ ಗೆ ಜೋಡಿಯಾಗಿ ನಟಿಸಿದ್ದಾರೆ. ಎ.ಪಿ.ಅರ್ಜುನ್ ನಿರ್ದೇಶನ ಚಿತ್ರಕ್ಕಿದೆ.


Click it and Unblock the Notifications











