For Quick Alerts
  ALLOW NOTIFICATIONS  
  For Daily Alerts

  ಸುದೀಪ್-ದರ್ಶನ್ ಮುಖಾಮುಖಿ: ಡಿಸೆಂಬರ್ ನಲ್ಲಿ ಬಾಕ್ಸ್ ಆಫೀಸ್ ವಾರ್?

  |

  Recommended Video

  Odeya vs Dabangg-3 will Released May Same Day | ಮತ್ತೆ ಶುರುವಾಗುತ್ತಾ ಸ್ಟಾರ್ ವಾರ್?

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವಿನ ಸ್ನೇಹ ಮುರಿದು ಬಿದ್ದಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೆ. ಅಲ್ಲದೆ ಇತ್ತೀಚಿಗಷ್ಟೆ ಇಬ್ಬರು ನಟರ ಅಭಿಮಾನಿಗಳ ಕಿತ್ತಾಟ ಸಾಮಾಜಿಕ ಜಾಲತಾಣದಲ್ಲಿ ತಾರಕಕ್ಕೇರಿತ್ತು.

  ಅಭಿಮಾನಿಗಳ ಕಿತ್ತಾಟ ಸದ್ಯ ಕೊಂಚ ತಣ್ಣಗಾಗಿದೆ. ಇದರ ನಡುವೆ ಈಗ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ದರ್ಶನ್ ಮತ್ತು ಸುದೀಪ್ ಸಿನಿಮಾ ಒಂದೆ ದಿನ ತೆರೆಗೆ ಬರಲು ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕುರುಕ್ಷೇತ್ರ ಮತ್ತು ಪೈಲ್ವಾನ್ ಸಿನಿಮಾ ಒಂದೆ ದಿನ ತೆರೆಗೆ ಬರುವ ತಯಾರಿ ನಡೆಸಿತ್ತು. ಆದ್ರೆ ಪೈಲ್ವಾನ್ ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಮೂಲಕ ಬಾಕ್ಸ್ ಆಫೀಸ್ ವಾರ್ ಗೆ ಬ್ರೇಕ್ ಬಿದ್ದಿತ್ತು. ಆದ್ರೀಗ ಮತ್ತೆ ಇಬ್ಬರ ಸಿನಿಮಾ ಒಂದೆ ದಿನ ತೆರೆಗೆ ಬರಲು ಸಜ್ಜಾಗಿವೆ.

  ದರ್ಶನ್-ಸುದೀಪ್ ಸಿನಿಮಾ ಒಂದೆ ದಿನ ತೆರೆಗೆ

  ದರ್ಶನ್-ಸುದೀಪ್ ಸಿನಿಮಾ ಒಂದೆ ದಿನ ತೆರೆಗೆ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಮತ್ತು ಸುದೀಪ್ ಅಭಿನಯದ ಹಿಂದಿಯ ದಬಾಂಗ್-3 ಸಿನಿಮಾ ಒಂದೆ ದಿನ ತೆರೆಗೆ ಬರಲು ಸಜ್ಜಾಗಿವೆ. ಈಗಾಗಲೆ ದಬಾಂಗ್-3 ಸಿನಿಮಾ ಡಿಸೆಂಬರ್ 20ಕ್ಕೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ. ಅದೇ ದಿನ ದರ್ಶನ್ ಅಭಿನಯದ ಒಡೆಯ ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗುತ್ತಿದೆ ಎಂದು ಹೇಳಲಾಗುತ್ತಿದೆ.

  ದಬಾಂಗ್-3 ಚಿತ್ರದಲ್ಲಿ ಸುದೀಪ್ ವಿಲನ್

  ದಬಾಂಗ್-3 ಚಿತ್ರದಲ್ಲಿ ಸುದೀಪ್ ವಿಲನ್

  ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಈಗಾಗಲೆ ಸುದೀಪ್ ಫಸ್ಟ್ ಲುಕ್ ರಿವೀಲ್ ಆಗಿದ್ದು ಚಿತ್ರದ ಮೇಲಿನ ಕುತೂಹಲ ಹೆಚ್ಚಾಗಿದೆ. ಮೊದಲ ಬಾರಿಗೆ ಸುದೀಪ್, ಸಲ್ಮಾನ್ ಖಾನ್ ವಿರುದ್ಧ ಅಖಾಡಕ್ಕೆ ಇಳಿದಿದ್ದಾರೆ. ಇಬ್ಬರ ಕಾದಾಟ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  ಒಡೆಯ ಚಿತ್ರದ ಹಾಡಿನ ಚಿತ್ರೀಕರಣ ಬಾಕಿ

  ಒಡೆಯ ಚಿತ್ರದ ಹಾಡಿನ ಚಿತ್ರೀಕರಣ ಬಾಕಿ

  ಒಡೆಯ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು ಹಾಡಿನ ಚಿತ್ರೀಕರಣವೊಂದು ಬಾಕಿ ಇದೆ. ಸದ್ಯ ಹಾಡಿನ ಚಿತ್ರೀಕರಣಕ್ಕೆಂದು ಒಡೆಯ ಟೀಂ ಇದೆ ತಿಂಗಳು 15ಕ್ಕೆ ಸ್ವಿಡ್ಜರ್ ಲ್ಯಾಂಡ್ ಗೆ ತೆರಳಿದೆ. ಸದ್ಯ ದರ್ಶನ್ ರಾಬರ್ಟ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಾಬರ್ಟ್ ಗೆ ಕೊಂಚ ಬ್ರೇಕ್ ನೀಡಿ ಒಡೆಯ ಚಿತ್ರದ ಎರಡು ಹಾಡಿನ ಚಿತ್ರೀಕರಣ ಮುಗಿಸಲಿದ್ದಾರೆ ದರ್ಶನ್. ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಒಡೆಯ ಡಿಸೆಂಬರ್ 20ಕ್ಕೆ ತೆರೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ.

  ಕನ್ನಡದಲ್ಲೂ ತೆರೆಗೆ ಬರುತ್ತಿದೆ ದಬಾಂಗ್-3

  ಕನ್ನಡದಲ್ಲೂ ತೆರೆಗೆ ಬರುತ್ತಿದೆ ದಬಾಂಗ್-3

  ದಬಾಂಗ್-3 ಸಿನಿಮಾ ಕನ್ನಡದಲ್ಲು ತೆರೆಗೆ ಬರುತ್ತಿದೆ. ಹಾಗಾಗಿ ಬಾಕ್ಸ್ ಆಫೀಸ್ ವಾರ್ ಬಿಸಿ ಕೊಂಚ ಜಾಸ್ತಿಯೆ ಇರಲಿದೆ. ಬಾಕ್ಸ್ ಆಫೀಸ್ ವಾರ್ ಜೊತೆಗೆ, ಸದ್ಯ ತಣ್ಣಗಾಗಿರುವ ಅಭಿಮಾನಿಗಳ ಕಿತ್ತಾಟ ಮತ್ತೆ ಜಾಸ್ತಿ ಆಗುವ ಸಾಧ್ಯತೆ ಇದೆ. ದಬಾಂಗ್-3 ಚಿತ್ರ ರಿಲೀಸ್ ದಿನವೆ ಒಡೆಯ ತೆರೆಗೆ ಬರುತ್ತಾ ಎನ್ನುವುದು ಸಧ್ಯದಲ್ಲೇ ಬಹಿರಂಗವಾಗಲಿದೆ.

  English summary
  Kannada actor Darshan starrer Odeya and Sudeep starrer Dabangg-3 will released may same day. Box Office will clash with Sudeep and darshan.
  Monday, October 14, 2019, 12:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X