ಹೆಸರು ಬದಲಾಯಿಸಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾದ ನಾಯಕಿ ರಾಘವಿ ತಿಮ್ಮಯ್ಯ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅನೇಕ ನಾಯಕಿಯರು ಸಿನಿಮಾಗಾಗಿ ಹೆಸರನ್ನು ಬದಲಾಯಿಸಿಕೊಂಡ ಉದಾಹರಣೆಗಳಿವೆ. ರಮ್ಯಾ, ರಕ್ಷಿತಾ, ರಚಿತಾ ರಾಮ್, ಅದಿತಿ ಪ್ರಭುದೇವ ಸೇರಿದಂತೆ ಅನೇಕ ನಟಿಯರು ಹೆಸರು ಬದಲಾಯಿಸಿಕೊಂಡಿದ್ದಾರೆ. ಈಗ ಒಡೆಯ ಚಿತ್ರದ ನಾಯಕಿ ರಾಘವಿ ತಿಮ್ಮಯ್ಯ ಕೂಡ ಸಿನಿಮಾಗಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ಒಡೆಯ ಸಿನಿಮಾಗೆ ಎಂಟ್ರಿ ಕೊಡುವ ರಾಘವಿ ತಿಮ್ಮಯ್ಯ ಆಗಿದ್ದ ನಟಿ ಈಗ ಸನಾ ಆಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು, ರಾಘವಿ ತಿಮ್ಮಯ್ಯ ಈಗ ಸನಾ ತಿಮ್ಮಯ್ಯ ಆಗಿದ್ದಾರೆ. ಸಿನಿಮಾರಂಗಕ್ಕಾಗಿ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ರಾಘವಿ.
ಕೆಲವರಿಗೆ ಹೆಸರು ಬದಲಾಯಿಸಿಕೊಂಡರೆ ಲಕ್ ಬದಲಾಗುತ್ತೆ ಎನ್ನುವ ನಂಬಿಕೆ ಕೂಡ ಇದೆ.

ಸನಾ ತಿಮ್ಮಯ್ಯ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಒಡೆಯ ಮೂಲಕ ಮೊದಲ ಬಾರಿಗೆ ಸಿನಿಮಾದಲ್ಲಿ ಬಣ್ಣ ಹಚ್ಚುವ ಅವಕಾಶ ಪಡೆದುಕೊಂಡಿದ್ದಾರೆ. ಚೊಚ್ಚಲ ಸಿನಿಮಾದಲ್ಲೆ ಸ್ಟಾರ್ ನಟನ ಜೊತೆ ಅಭಿನಯಿಸುವ ಅವಕಾಶ ಪಡೆದುಕೊಂಡಿರುವ ಸನಾ ಸಂತಸದಲ್ಲಿದ್ದಾರೆ. ಈಗಾಗಲೆ ಒಡೆಯ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ನಲ್ಲಿ ಸಿನಿಮಾ ಬ್ಯುಸಿಯಾಗಿದೆ.
ಮೂಲಗಳ ಪ್ರಕಾರ ಒಡೆಯ ಡಿಸೆಂಬರ್ 20ಕ್ಕೆ ತೆರೆಗೆ ಬರುತ್ತೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡದ ಕಡೆಯಿಂದ ಅಧಿಕೃತವಾಗಿ ಬಹಿರಂಗವಾಗಿಲ್ಲ. ಅಂದ್ಹಾಗೆ ಚಿತ್ರಕ್ಕೆ ಎಂ.ಡಿ ಶ್ರೀಧರ್ ಆಕ್ಷನ್ ಕಟ್ ಹೇಳಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಒಡೆಯ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Click it and Unblock the Notifications











