'ಒಡೆಯ' ಚಿತ್ರದ ಬಗ್ಗೆ ಅಪ್ಡೇಟ್ ನೀಡಿದ ಡಿ-ಬಾಸ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಈಗಾಗಲೇ ಟಾಕಿ ಪೋಷನ್ ಮುಗಿಸಿದ್ದರು. ಬಾಕಿ ಉಳಿದಿದ್ದ ಹಾಡು ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದು ಶುಭಂ ಹಾಡಿದ್ದಾರೆ.

ಸಿನಿಮಾ ಶೂಟಿಂಗ್ ಮುಗಿತು. ಇದುವರೆಗೂ ಒಡೆಯ ಚಿತ್ರದ ಪೋಸ್ಟರ್ ಗಳು ಬಿಟ್ಟರೇ ಟೀಸರ್ ಬಂದಿಲ್ಲ, ಹಾಗಾಗಿ, ಟೀಸರ್ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಇದೀಗ, ದೀಪಾವಳಿ ಹಬ್ಬಕ್ಕೆ ಶುಭಕೋರಿರುವ ದರ್ಶನ್ ಅವರು, ಟೀಸರ್ ರಿಲೀಸ್ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಒಡೆಯ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿದ್ದು, ಸದ್ಯದಲ್ಲೇ ಟೀಸರ್ ಬರಲಿದೆ ಎಂದು ತಿಳಿಸಿದ್ದಾರೆ.

Darshan Starrer Odeya Movie Teaser Update

''ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು. ಈ ಹಬ್ಬವು ನಿಮ್ಮ ಬಾಳಿಗೆ ಮತ್ತಷ್ಟು ಹೊಸ ಬೆಳಕನ್ನು ತರಲಿ ಎಂದು ಆಶಿಸುತ್ತೇನೆ. ಒಡೆಯ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿಗೆ ಸದಾ ಆಭಾರಿ. - ನಿಮ್ಮ ದಾಸ ದರ್ಶನ್''

ಒಡೆಯ ಸಿನಿಮಾ ಈ ವರ್ಷದ ಅಂತ್ಯಕ್ಕೆ ಬರುವ ತಯಾರಿಯಲ್ಲಿದೆ. ಎಲ್ಲ ಅಂದುಕೊಂಡಂತೆ ಆದರೆ ಡಿಸೆಂಬರ್ ಮೂರನೇ ವಾರಕ್ಕೆ ಒಡೆಯ ಚಿತ್ರಮಂದಿರಕ್ಕೆ ಬರಲಿದೆ ಎನ್ನಲಾಗುತ್ತಿದೆ. ಅದಕ್ಕೂ ಮುಂಚೆ ಟೀಸರ್, ಟ್ರೈಲರ್, ಹಾಡುಗಳು ಬರಬೇಕಿದೆ.

ಅಂದ್ಹಾಗೆ, ಇದು ತಮಿಳಿನ ಸೂಪರ್ ಹಿಟ್ ವೀರಂ ಚಿತ್ರದ ರೀಮೇಕ್ ಆಗಿದ್ದು, ಅಜಿತ್ ಮಾಡಿದ್ದ ಪಾತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಅಣ್ಣ-ತಮ್ಮಂದಿರ ಕಥೆ ಇದಾಗಿದ್ದು, ದರ್ಶನ್ ಅವರಿಗೆ ಸಹೋದರರಾಗಿ ಪಂಕಜ್, ಯಶಸ್ ಸೂರ್ಯ ಮತ್ತಿಬ್ಬರು ನಟಿಸಿದ್ದಾರೆ. ರಾಘವಿ ತಿಮ್ಮಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಂದೇಶ್ ನಿರ್ಮಿಸಿದ್ದು, ಎಂಡಿ ಶ್ರೀಧರ್ ನಿರ್ದೇಶಿಸಿದ್ದಾರೆ.

More from Filmibeat

English summary
Kannada actor Darshan starrer Odeya movie shooting completed. This movie is directed by M.D Shridhar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X