ದರ್ಶನ್ 'ರಾಜವೀರ ಮದಕರಿನಾಯಕ' ಚಿತ್ರದಿಂದ ಬಂತು ಭರ್ಜರಿ ಸುದ್ದಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾರಿ ನಿರೀಕ್ಷೆಯ 'ರಾಜವೀರ ಮದಕರಿನಾಯಕ' ಸಿನಿಮಾದ ಮುಹೂರ್ತ ನಡೆದು ಅನೇಕ ದಿನಗಳಾಯಿತು. ಚಿತ್ರದುರ್ಗದಲ್ಲಿ ಮೊದಲ ಮುಹೂರ್ತ ಮಾಡಿಕೊಂಡು ನಂತರ ಬೆಂಗಳೂರಿನಲ್ಲಿ ಎರಡನೆ ಬಾರಿ ಅದ್ದೂರಿ ಮುಹೂರ್ತ ಮಾಡಿಕೊಳ್ಳುವ ಮೂಲಕ ಎರೆಡೆರಡು ಬಾರಿ ಮುಹೂರ್ತ ಮಾಡಿಕೊಂಡಿರುವ ಮದಕರಿನಾಯಕ ಇನ್ನು ಚಿತ್ರೀಕರಣಕ್ಕೆ ಇಳಿದಿಲ್ಲ.
ಯಾವಾಗ ಚಿತ್ರೀಕರಣ ಪ್ರಾರಂಭವಾಗುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆದರೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಯಾಕಂದ್ರೆ ಮದಕರಿನಾಯಕ ಇದೆ ತಿಂಗಳು 21ರಿಂದ ಚಿತ್ರೀಕರಣಕ್ಕೆ ಹೊರಡುತ್ತಿದ್ದಾರೆ. ಈಗಾಗಲೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಚಿತ್ರತಂಡ ಈಗ ಚಿತ್ರೀಕರಣದ ಅಖಾಡಕ್ಕೆ ಇಳಿಯುತ್ತಿದೆ.
ವಿಶೇಷ ಅಂದರೆ ಈಗಾಗಲೆ ದರ್ಶನ್ ಅವರಿಗೆ ಮದಕರಿನಾಯಕ ಕಾಸ್ಟ್ಯೂಮ್ ಹಾಕಿ ಕಾಸ್ಟ್ಯೂಮ್ ಟೆಸ್ಟ್ ಕೂಡ ಮುಗಿದಿದೆಯಂತೆ. ಇನ್ನೇನಿದ್ದರು ಚಿತ್ರೀಕರಣಕ್ಕೆ ಹೊರಡುವುದೊಂದೆ ಬಾಕಿ ಉಳಿಸಿಕೊಂಡಿದೆ. ಚಿತ್ರದ ಚಿತ್ರೀಕರಣ ಕೇರಳದಿಂದ ಪ್ರಾರಂಭಿಸುವ ನಿರ್ಧಾರ ಮಾಡಿದೆ ಮದಕರಿನಾಯಕ ತಂಡ.

ಕೇರಳದ ಸುಂದರ ಜಲಪಾತದ ಬಳಿ ಮೊದಲು ಮೂರ್ನಾಲ್ಕು ದಿನಗಳ ಚಿತ್ರೀಕರಣ ನಡೆಸಿ ನಂತರ ಮತ್ತೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಆ ನಂತರ ಬೆಂಗಳೂರಿನ ಸ್ಟೂಡಿಯೊದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತೆ. ಇನ್ನು ಚಿತ್ರದಲ್ಲಿ ಯಾರೆಲ್ಲ ಕಾಣಿಕೊಳ್ಳಲಿದ್ದಾರೆ ಎನ್ನುವುದು ಇನ್ನು ಫೈನಲ್ ಆಗಿಲ್ಲ.
ಈಗಾಗಲೆ ಕಲಾವಿದರ ಆಯ್ಕೆಯಲ್ಲಿ ಚಿತ್ರತಂಡ ನಿರವಾಗಿದೆ. ಸಾಕಷ್ಟು ಬಾರಿ ಚರ್ಚೆನಡೆಸುತ್ತಿದ್ದಾರಂತೆ. ದರ್ಶನ್ ಜೊತೆ ನಾಯಕಿಯಾಗಿ ಯಾರು ಕಾಣಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ. ದೊಡ್ಡ ದೊಡ್ಡ ನಟಿಯ ಹೆಸರು ಕೇಳಿಬರುತ್ತಿದೆ. ಆದರೆ ಯಾರು ನಾಯಕಿಯಾಗಿಯಾಗ್ತಾರೆ ಎನ್ನುವುದೆ ಸದ್ಯದ ಕುತೂಹಲ. ಆದರೆ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ ವೀರ ಮದಕರಿ ನಾಯಕ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ. ಚಿತ್ರಕ್ಕೆ ನಿರ್ಮಾಪಕ ರಾಜ್ ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ರಾಜ ವೀರ ಮದಕರಿನಾಯಕ ಭಾರತೀಯ ಚಿತ್ರರಂಗದಲ್ಲಿಯೆ ಅದ್ದೂರಿ ಸಿನಿಮಾವಾಗಲಿದೆ ಎನ್ನುವುದು ಚಿತ್ರತಂಡದ ನಂಬಿಕೆ.


Click it and Unblock the Notifications











