For Quick Alerts
  ALLOW NOTIFICATIONS  
  For Daily Alerts

  ಕೇರಳ ಕಡೆ ಪಯಣ ಬೆಳೆಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  |
  ಕೇರಳಕ್ಕೆ ದಚ್ಚು ಹೊರಟಿದ್ದು ಟೆಂಪಲ್ ರನ್ ಮಾಡೋದಕ್ಕಲ್ಲ! | DARSHAN | KERALA | FILMIBEAT KANNADA

  ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗಷ್ಟೆ ಪತ್ನಿ ವಿಜಯಲಕ್ಷ್ಮಿ ಜೊತೆ ದೇವಸ್ಥಾನ ಸುತ್ತಾಡುತ್ತಿದ್ದರು. ತಮಿಳುನಾಡಿನ ಶನಿ ದೇವಸ್ಥಾನಕ್ಕೆ ತೆರಳಿದ್ದ ದರ್ಶನ್, ಈಗ ಕೇರಳ ಕಡೆ ಪಯಣ ಬೆಳೆಸಿದ್ದಾರೆ. ದಚ್ಚು ಟೆಂಪಲ್ ರನ್ ಮಾಡುತ್ತಿದ್ದಾರಾ ಅಂತ ಅಂದ್ಕೋಬೇಡಿ. ದರ್ಶನ್ ಕೇರಳ ಹೊರಟಿದ್ದು ಬಹುನಿರೀಕ್ಷೆಯ ಮದಕರಿ ನಾಯಕ ಚಿತ್ರದ ಚಿತ್ರೀಕರಣಕ್ಕೆ.

  ಹೌದು, ಡಿ ಬಾಸ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ 'ರಾಜವೀರ ಮದಕರಿ ನಾಯಕ' ಚಿತ್ರದ ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈಗ ಆ ಸಮಯ ಬಂದಿದೆ. ಮದಕರಿ ನಾಯಕ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಈಗಾಗಲೆ ಚಿತ್ರತಂಡ ಕೇರಳದಲ್ಲಿ ಬೀಡುಬಿಟ್ಟಿದೆ.

  ಪತ್ನಿ ಜೊತೆ ತಮಿಳುನಾಡಿನ ತಿರುನಲ್ಲರ್ ಗೆ ಭೇಟಿ ನೀಡಿದ ನಟ ದರ್ಶನ್ಪತ್ನಿ ಜೊತೆ ತಮಿಳುನಾಡಿನ ತಿರುನಲ್ಲರ್ ಗೆ ಭೇಟಿ ನೀಡಿದ ನಟ ದರ್ಶನ್

  ಈಗಾಗಲೆ ದರ್ಶನ್ ಕೂಡ ಕೇರಳ ಕಡೆ ಹೊರಟಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್ ಕೊಟ್ಟು ಕೇರಳ ಪ್ಲೈಟ್ ಹತ್ತಿದ್ದಾರೆ. ಅಭಿಮಾನಿಗಳು ಸಂತಸದಿಂದ ದಚ್ಚು ಜೊತೆಗಿರುವ ಫೋಟೋ ಶೇರ್ ಮಾಡಿ ಚಿತ್ರಕ್ಕೆ ಶುಭಕೋರುತ್ತಿದ್ದಾರೆ. ಅಂದ್ಹಾಗೆ ಚಿತ್ರದ ಮೊದಲ ದೃಶ್ಯದ ಚಿತ್ರೀಕರಣವನ್ನು ಕೇರಳಿಂದ ಪ್ರಾರಂಭಿಸುತ್ತಿದೆ ಚಿತ್ರತಂಡ.

  ಕೇರಳದ ಜಲಪಾತವೊಂದರಲ್ಲಿ ಮೊದಲ ದೃಶ್ಯ ಸೆರೆಹಿಡಿಯುತ್ತಿದೆ ಚಿತ್ರತಂಡ. ಕೆಲವೆ ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಲಿದೆ ಚಿತ್ರತಂಡ. ಇದರ ನಡುವೆ ದರ್ಶನ್ ಹುಟ್ಟುಹಬ್ಬ ಕೂಡ ಹತ್ತಿರವಾಗುತ್ತಿದೆ. ಇದೆ ತಿಂಗಳು 16ಕ್ಕೆ ಡಿ ಬಾಸ್ ಹುಟ್ಟುಹಬ್ಬ. ಹುಟ್ಟುಹಬ್ಬಕ್ಕೆ ರಜೆ ಪಡೆದು ಮತ್ತೆ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ದರ್ಶನ್.

  ರಾಜವೀರ ಮದಕರಿ ನಾಯಕ ರಾಜೇಂದ್ರ ಸಿಂಗ್ ಬಾಬು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ನಾದಬ್ರಹ್ಮ ಹಂಸಲೇಖ ಸಂಗೀತ ಚಿತ್ರಕ್ಕೆ ಇರಲಿದೆ. ಚಿತ್ರದಲ್ಲಿ ಹಿರಿಯ ನಟಿ, ಸಂಸದೆ ಸುಮಲತಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಯಾರೆಲ್ಲ ಬಣ್ಣಹಚ್ಚಲಿದ್ದಾರೆ. ನಾಯಕಿಯರಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಇನ್ನು ಬಹಿರಂಗವಾಗಿಲ್ಲ.

  English summary
  Darshan starrer Rajaveera Madakari Nayaka Shooting start from Kerala. Darshan and film team moved to Kerala For shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X