For Quick Alerts
  ALLOW NOTIFICATIONS  
  For Daily Alerts

  ಹಿಂದಿಯಲ್ಲಿ ರಾಬರ್ಟ್ ಅಬ್ಬರ: 5 ದಿನದಲ್ಲಿ 20 ಮಿಲಿಯನ್ ವೀಕ್ಷಣೆ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಿತ್ರಗಳಿಗೆ ಹಿಂದಿಯಲ್ಲಿ ಬೇಡಿಕೆ ಹೆಚ್ಚಿದೆ ಎಂಬ ಮಾತಿದೆ. ಅದರಂತೆ ದರ್ಶನ್ ನಟಿಸಿರುವ ಬಹುತೇಕ ಚಿತ್ರಗಳು ಹಿಂದಿಗೆ ಡಬ್ ಆಗಿದ್ದು, ಯೂಟ್ಯೂಬ್ ಹಾಗೂ ಟಿವಿಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕನ್ನಡದಲ್ಲಿ ಡಿ ಬಾಸ್ ಸಿನಿಮಾ ಬರ್ತಿದೆ ಅಂದ್ರೆ ಹಿಂದಿ ಪ್ರೇಕ್ಷಕರು ಡಬ್ಬಿಂಗ್ ಚಿತ್ರಕ್ಕಾಗಿ ಕಾಯುವಂತಹ ಟ್ರೆಂಡ್ ಸೃಷ್ಟಿಯಾಗಿದೆ. ಇದಕ್ಕೆ ತಾಜಾ ಉದಾಹರಣೆ ರಾಬರ್ಟ್ ಸಿನಿಮಾ.

  ಕಳೆದ ಮಾರ್ಚ್ ತಿಂಗಳಲ್ಲಿ ರಾಬರ್ಟ್ ಸಿನಿಮಾ ಕನ್ನಡ, ತೆಲುಗು ಭಾಷೆಯಲ್ಲಿ ರಿಲೀಸ್ ಆಗಿತ್ತು. ಕೊರೊನಾ ಬಿಕ್ಕಟ್ಟಿನ ನಡುವಯೇ ರಾಬರ್ಟ್ ಬಹುದೊಡ್ಡ ಯಶಸ್ಸು ಕಂಡಿತ್ತು. ಶೋಗಳು ಹೌಸ್‌ಫುಲ್ ಆಗಿದ್ದವು. ನಿರೀಕ್ಷೆಗೂ ಮೀರಿದ ಗಳಿಕೆ ಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಸಂಭ್ರಮಿಸಿದ್ದು ಮರೆಯುವಂತಿಲ್ಲ.

  ಹಿಂದಿಯಲ್ಲಿ ಬರ್ತಿದೆ ರಾಬರ್ಟ್: ಬಾಲಿವುಡ್ ಸಣ್ಣ ಪರದೆಯಲ್ಲಿ ದರ್ಶನ್ಹಿಂದಿಯಲ್ಲಿ ಬರ್ತಿದೆ ರಾಬರ್ಟ್: ಬಾಲಿವುಡ್ ಸಣ್ಣ ಪರದೆಯಲ್ಲಿ ದರ್ಶನ್

  ಸೌತ್ ಇಂಡಸ್ಟ್ರಿಯಲ್ಲಿ ಸಕ್ಸಸ್ ಆಗಿದ್ದ ರಾಬರ್ಟ್ ಸಿನಿಮಾ ಇತ್ತೀಚಿಗಷ್ಟೆ ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಅದರ ಬೆನ್ನಲ್ಲೆ ಯೂಟ್ಯುಬ್‌ನಲ್ಲಿ ರಾಬರ್ಟ್ ಹಿಂದಿ ಸಿನಿಮಾ ಪೋಸ್ಟ್ ಆಗಿದೆ. ಯೂಟ್ಯುಬ್‌ಗೆ ಅಪ್‌ಲೌಡ್ ಆದ ಕೇವಲ 5 ದಿನದಲ್ಲಿ ದಾಖಲೆ ಮಾಡಿದೆ ಎಂದು ತಿಳಿದು ಬಂದಿದೆ. ಮುಂದೆ ಓದಿ...

  5 ದಿನದಲ್ಲಿ 20 ಮಿಲಿಯನ್ ವೀಕ್ಷಣೆ

  5 ದಿನದಲ್ಲಿ 20 ಮಿಲಿಯನ್ ವೀಕ್ಷಣೆ

  ಐದು ದಿನದ ಹಿಂದೆಯಷ್ಟೇ ರಾಬರ್ಟ್ ಹಿಂದಿ ವರ್ಷನ್ ಸಿನಿಮಾ ಯೂಟ್ಯೂಬ್‌ನಲ್ಲಿ ಅಪ್‌ಲೌಡ್ ಆಗಿದೆ. ಆರ್‌ಕೆಡಿ ಸ್ಟುಡಿಯೋಸ್ ಯೂಟ್ಯೂಬ್ ಚಾನಲ್ ರಾಬರ್ಟ್ ಡಬ್ಬಿಂಗ್ ಚಿತ್ರವನ್ನು ಪೋಸ್ಟ್ ಮಾಡಿದೆ. ಅಪ್‌ಲೌಡ್ ಮಾಡಿದ ಕೇವಲ ಐದು ದಿನದಲ್ಲಿ ದರ್ಶನ್ ಸಿನಿಮಾ 20 ಮಿಲಿಯನ್ ವೀಕ್ಷಣೆ ಕಾಣುವ ಮೂಲಕ ದಾಖಲೆ ಬರೆದಿದೆ. ಅಂದ್ಹಾಗೆ, ಆಗಸ್ಟ್ 29 ರಂದು ರಾಬರ್ಟ್ ಸಿನಿಮಾ ಹಿಂದಿಯಲ್ಲಿ ಪ್ರದರ್ಶನ ಕಂಡಿದೆ. ಕಲರ್ಸ್ ಸಿನಿಪ್ಲೆಕ್ಸ್ ವಾಹಿನಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗಿತ್ತು.

  ರಾಬರ್ಟ್ ಸಿಕ್ಕ ದೊಡ್ಡ ಯಶಸ್ಸು ಇದು

  ರಾಬರ್ಟ್ ಸಿಕ್ಕ ದೊಡ್ಡ ಯಶಸ್ಸು ಇದು

  ರಾಬರ್ಟ್ ಸಿನಿಮಾ 2 ದಿನದಲ್ಲಿ 10 ಮಿಲಿಯನ್ ಹಾಗೂ 5 ದಿನದಲ್ಲಿ 20 ಮಿಲಿಯನ್ ವೀಕ್ಷಣೆ ಕಂಡಿದೆ. ಇನ್ನು ದರ್ಶನ್ ಸಿನಿಮಾಗಳ ಪೈಕಿಯೂ ಅತಿ ವೇಗವಾಗಿ 20 ಮಿಲಿಯನ್ ವೀಕ್ಷಣೆ ಕಂಡಿರುವ ಸಿನಿಮಾ ರಾಬರ್ಟ್ ಎನ್ನಲಾಗಿದೆ. ತರುಣ್ ಸುಧೀರ್ ನಿರ್ದೇಶನ, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಆಶಾ ಭಟ್, ರವಿಶಂಕರ್ ಗೌಡ, ಜಗಪತಿ ಬಾಬು, ವಿನೋದ್ ಪ್ರಭಾಕರ್ ಸೇರಿದಂತೆ ಹಲವರು ನಟಿಸಿದ್ದಾರೆ.

  ದರ್ಶನ್ ಡಬ್ಬಿಂಗ್ ಸಿನಿಮಾಗಳು

  ದರ್ಶನ್ ಡಬ್ಬಿಂಗ್ ಸಿನಿಮಾಗಳು

  ದರ್ಶನ್ ನಟಿಸಿದ್ದ ಗಜ ಸಿನಿಮಾ (ಗಜ ಠಾಕೂರ್), ಪೊರ್ಕಿ ಸಿನಿಮಾ (ಮೈ ಹೂ ವಾಂಟೆಡ್), ಬಾಸ್ ಸಿನಿಮಾ (ಡಬಲ್ ಬಾಸ್), ಚಿಂಗಾರಿ ಸಿನಿಮಾ (ಚಿಂಗಾರ), ಅಂಬರೀಶ ಸಿನಿಮಾ (ಭಾಗಿ ದಿ ರೆಬಲ್), ಜಗ್ಗುದಾದ ಸಿನಿಮಾ (ಖತರ್‌ನಾಕ್ ಖಿಲಾಡಿ 3), ಮಿಸ್ಟರ್ ಐರಾವತ ಸಿನಿಮಾ (ವರ್ದಿವಾಲ ದಿ ಐರನ್ ಮ್ಯಾನ್), ವಿರಾಟ್ ಸಿನಿಮಾ (ವಿರಾಟ್), ಬೃಂದಾವನ ಸಿನಿಮಾ (ಪ್ರೇಮಲೀಲಾ) ಹೆಸರಿನಲ್ಲಿ ಡಬ್ ಆಗಿ ಯೂಟ್ಯೂಬ್ ಹಾಗೂ ಟಿವಿಯಲ್ಲಿ ಪ್ರಿಮೀಯರ್ ಕಂಡಿದೆ.

  ಕೆಜಿಎಫ್-ಪೊಗರು ದಾಖಲೆ

  ಕೆಜಿಎಫ್-ಪೊಗರು ದಾಖಲೆ

  ಕನ್ನಡದ ಹಲವು ನಟರ ಚಿತ್ರಗಳು ಹಿಂದಿಗೆ ಡಬ್ ಆಗುತ್ತೆ. ದರ್ಶನ್, ಸುದೀಪ್, ಯಶ್, ದುನಿಯಾ ವಿಜಯ್, ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ ಸಿನಿಮಾಗಳು ಡಬ್ ಆಗಿವೆ. ಕೆಜಿಎಫ್ ಹಿಂದಿ ಡಬ್ಬಿಂಗ್ ಸಿನಿಮಾ 304 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಚಿತ್ರ ಅಪ್‌ಲೋಡ್ ಅಗಿ ಕೇವಲ 8 ತಿಂಗಳು ಆಗಿದೆ. ಪೊಗರು ಸಿನಿಮಾ 163 ಮಿಲಿಯನ್ ವೀಕ್ಷಣೆ ಕಂಡಿದೆ.

  English summary
  Challenging star Darshan Starrer Roberrt Hindi dubbed movie crosses 20 million views within 5 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X