ಮಾಸ್ಕ್ ನಲ್ಲಿಯೂ ಡಿ ಬಾಸ್ ದರ್ಶನ್ 'ರಾಬರ್ಟ್' ಹವಾ
ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾಗಿದೆ. ಆದರೀಗ ಮಾಸ್ಕ್ ಟ್ರೆಂಡ್ ಸೃಷ್ಟಿ ಮಾಡಿವೆ. ಮಾರುಕಟ್ಟೆ ವೆರೈಟಿ ಮಾಸ್ಕ್ ಗಳು ಕಾಣಸಿಗುತ್ತೆ. ಇನ್ನೂ ರಾಜಕೀಯ ವ್ಯಕ್ತಿಗಳು ತಮ್ಮ ತಮ್ಮ ಪಕ್ಷದ ಚಿನ್ಹೆಯನ್ನು ಮುದ್ರಿಸಿ ಮಾಸ್ಕ್ ಗಳನ್ನು ವಿತರಣೆ ಮಾಡುತ್ತಿದ್ದಾರೆ. ವಿಶೇಷ ಅಂದರೆ ಸಿನಿಮಾ ಮಂದಿ ಈ ಮಾಸ್ಕ್ ಮೂಲಕ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ.
Recommended Video
ಸಿನಿಮಾ ಹೆಸರಿನ ಮಾಸ್ಕ್ ಗಳು ಈಗ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ರಾಬರ್ಟ್ ಮಾಸ್ಕ್ ತಯಾರಿಸಿದ್ದಾರೆ. ಈ ರಾಬರ್ಟ್ ಮಾಸ್ಕ್ ಗಳ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಮೂಲಕ ಪ್ರಚಾರದ ಜೊತೆಗೆ ಮಾಸ್ಕ್ ನ ಮಹತ್ವವನ್ನು ಹೇಳುತ್ತಿದ್ದಾರೆ.
ಬಾಲಿವುಡ್ ನಲ್ಲಿ ಈಗಾಗಲೆ ಸಿನಿಮಾ ಪೋಸ್ಟರ್ ಇರುವ ಮಾಸ್ಕ್ ಗಳು ಬಂದಿದ್ದವು. ಇದೀಗ ಸ್ಯಾಂಡಲ್ ವುಡ್ ನಲ್ಲಿಯೂ ರಾಬರ್ಟ್ ಸಿನಿಮಾದ ಮಾಸ್ಕ್ ಗಳು ರಾರಾಜಿಸುತ್ತಿವೆ. ರಾಬರ್ಟ್ ಟೈಟಲ್ ಜೊತೆ ದರ್ಶನ್ ರಾಬರ್ಟ್ ಲುಕ್ ಮಾಸ್ಕ್ ನಲ್ಲಿದೆ. ಈ ಮಾಸ್ಕ್ ಅನ್ನು ಅಭಿಮಾನಿಗಳು ಧರಿಸಿ ಪೋಸ್ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ರಾಬರ್ಟ್ ದರ್ಶನ್ ಬಹುನಿರೀಕ್ಷೆಯ ಸಿನಿಮಾ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಬೇಕಿತ್ತು. ಆದರೆ ಕೊರೊನಾ ವೈರಸ್ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಮೂಲಗಳ ಪ್ರಕಾರ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗುವ ಸಾಧ್ಯತೆ ಇದೆ. ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಆಶಾ ಭಟ್ ಕನ್ನಡ ಸಿನಿಮಾ ಪ್ರಿಯರ ಮುಂದೆ ಬರ್ತಿದ್ದಾರೆ.


Click it and Unblock the Notifications











