ಚಿತ್ರಮಂದಿರಗಳಲ್ಲಿ ದರ್ಶನ್ ಅಬ್ಬರ: 'ರಾಬರ್ಟ್' ನೋಡಲು ಬೆಳ್ಳಂಬೆಳಗ್ಗೆ ಮುಗಿಬಿದ್ದ ಅಭಿಮಾನಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಇಂದು (ಮಾರ್ಚ್ 11) ಅದ್ದೂರಿಯಾಗಿ ತೆರೆಗೆ ಬಂದಿದೆ. ಶಿವರಾತ್ರಿ ಹಬ್ಬದ ಸಂಭ್ರಮ ಒಂದೆಡೆಯಾದರೆ ಡಿ ಬಾಸ್ ಅಭಿಮಾನಿಗಳಿಗೆ ರಾಬರ್ಟ್ ಹಬ್ಬದ ಸಡಗರ. ಈಗಾಗಲೇ ಬಹುತೇಕ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದನೇ ರಾಬರ್ಟ್ ಅದ್ದೂರಿ ಪ್ರದರ್ಶನ ಕಾಣುತ್ತಿದೆ.

Recommended Video

ಅದ್ದೂರಿಯಾಗಿ ತೆರೆಕಂಡ ರಾಬರ್ಟ್, ತೆಲುಗು ಪ್ರೇಕ್ಷಕರು ಫಿದಾ | Roberrt Fans First Rection | Darshan

ರಾಬರ್ಟ್ ನೋಡಲು ಡಿ ಬಾಸ್ ಅಭಿಮಾನಿಗಳು ಬೆಳ್ಳಂಬೆಳಗ್ಗೆ ಚಿತ್ರಮಂದಿರದ ಮುಂದೆ ಮುಗಿಬಿದ್ದಿದ್ದರು. ರಾತ್ರಿಯಿಂದನೇ ರಾಬರ್ಟ್ ಗಾಗಿ ಅಭಿಮಾನಿಗಳು ಕಾದುಕುಳಿತಿದ್ದರು. ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಎರಡು ದಿನಗಳ ಮುಂಚೆಯೇ ಚಿತ್ರಮಂದಿರಗಳು ಹೌಸ್ ಫುಲ್ ಆಗಿದ್ದು, ಇಂದು ಅನೇಕರು ಟಿಕೆಟ್ ಸಿಗದೆ ಪರದಾಡುತ್ತಿದ್ದಾರೆ.

ಸುಮಾರು ಒಂದು ವರ್ಷದಿಂದ ರಾಬರ್ಟ್ ದರ್ಶನಕ್ಕಾಗಿ ಕಾದುಕುಳಿತ್ತಿದ್ದ ಅಭಿಮಾನಿಗಳಿಗೆ ಇಂದು ಬೆಳಗ್ಗೆ ತೆರೆಮೇಲೆ ದರ್ಶನ್ ಅಬ್ಬರ ನೋಡಿ ಧನ್ಯರಾಗಿದ್ದಾರೆ. ಕರ್ನಾಟಕದಲ್ಲಿ ರಾಬರ್ಟ್ ಸುಮಾರು 656ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವುದು ಇದೇ ಮೊದಲು.

Darshan starrer Roberrt movie release in Karnataka and Andhra Pradesh

ಅಂದಹಾಗೆ ರಾಬರ್ಟ್ ಕನ್ನಡ ಮಾತ್ರವಲ್ಲದೆ ಆಂಧ್ರ ಪ್ರದೇಶದಲ್ಲೂ ಅದ್ದೂರಿಯಾಗಿ ರಿಲೀಸ್ ಆಗಿದೆ. ಡಿ ಬಾಸ್ ರಾಬರ್ಟ್ ಸಿನಿಮಾವನ್ನು ತೆಲುಗು ಅಭಿಮಾನಿಗಳು ಹೇಗೆ ಸ್ವೀಕರಿಸಲಿದ್ದಾರೆ, ತೆಲುಗು ಸಿನಿಪ್ರಿಯರ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವುದು ಸದ್ಯದ ಕುತೂಹಲ.

More from Filmibeat

English summary
Actor Darshan starrer Roberrt movie release in Karnataka and Andhra Pradesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X