For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಹುಟ್ಟುಹಬ್ಬಕ್ಕೆ ರಾಬರ್ಟ್ ಟ್ರೈಲರ್, ಇನ್ನೊಂದು ಪ್ರಕಟಣೆ ಏನು?

  |

  ರಾಬರ್ಟ್ ಚಿತ್ರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 11 ರಂದು ಎರಡು ಪ್ರಮುಖ ಅಪ್‌ಡೇಟ್ ಹೇಳುವುದಾಗಿ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಅದರಂತೆ ಮೊದಲನೇ ಸುದ್ದಿ ದರ್ಶನ್ ಬರ್ತಡೇಗೆ ರಾಬರ್ಟ್ ಟ್ರೈಲರ್ ರಿಲೀಸ್ ಮಾಡಲಾಗುತ್ತಿದೆ.

  ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವಿದ್ದು, ಆ ವಿಶೇಷವಾಗಿ ರಾಬರ್ಟ್ ಟ್ರೈಲರ್ ಉಡುಗೊರೆಯಾಗಿ ನೀಡಲಾಗುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ರಾಬರ್ಟ್ ಟ್ರೈಲರ್ ರಿಲೀಸ್ ಆಗಲಿದೆ. ಎಷ್ಟು ಗಂಟೆಗೆ ಎನ್ನುವುದರ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ.

  ರಾಬರ್ಟ್ ಬಿಡುಗಡೆಗೆ ಮುನ್ನ ತಿರುಪತಿಗೆ ಭೇಟಿ ನೀಡಿದ ದರ್ಶನ್-ಉಮಾಪತಿ ರಾಬರ್ಟ್ ಬಿಡುಗಡೆಗೆ ಮುನ್ನ ತಿರುಪತಿಗೆ ಭೇಟಿ ನೀಡಿದ ದರ್ಶನ್-ಉಮಾಪತಿ

  ಎರಡನೇ ಸುದ್ದಿ ಏನಪ್ಪಾ ಅಂದ್ರೆ ರಾಬರ್ಟ್ ಚಿತ್ರದ ಜೈ ಶ್ರೀರಾಮ್ ಹಾಡಿನ ತೆಲುಗು ವರ್ಷನ್ ರಿಲೀಸ್ ಮಾಡಲಾಗುತ್ತಿದೆ. ಫೆಬ್ರವರಿ 12 ರಂದು ಸಂಜೆ 4.05 ಗಂಟೆಗೆ ಈ ಹಾಡು ಬಿಡುಗಡೆಯಾಗಲಿದೆ.

  ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿರುವ ಈ ಹಾಡನ್ನು ಶಂಕರ್ ಮಹಾದೇವನ್ ಹಾಡಿದ್ದರು. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದರು. ಕಳೆದ ಏಪ್ರಿಲ್ ತಿಂಗಳಲ್ಲಿ ಕನ್ನಡದಲ್ಲಿ ಜೈ ಶ್ರೀರಾಮ್ ಹಾಡು ರಿಲೀಸ್ ಆಗಿತ್ತು. ಈಗ ತೆಲುಗಿನಲ್ಲಿ ಜೈ ಶ್ರೀರಾಮ್ ಬರಲಿದೆ.

  ಕನ್ನಡ ಹೀರೋಗಳನ್ನು ಕಂಡು ಹೆದರಿತಾ ತೆಲುಗು ಚಿತ್ರರಂಗ? ಡಿ ಬಾಸ್ ಹೇಳಿದ್ದರ ಅರ್ಥವೇನು? ಕನ್ನಡ ಹೀರೋಗಳನ್ನು ಕಂಡು ಹೆದರಿತಾ ತೆಲುಗು ಚಿತ್ರರಂಗ? ಡಿ ಬಾಸ್ ಹೇಳಿದ್ದರ ಅರ್ಥವೇನು?

  ಇನ್ನುಳಿದಂತೆ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಾಣುತ್ತಿದೆ. ದರ್ಶನ್, ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ಹಲವರು ನಟಿಸಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸಿದ್ದು, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿದ್ದಾರೆ.

  Darshan fans like Roberrt 3d standee infront of theaters
  English summary
  Kannada actor Darshan Starrer Roberrt Movie Trailer to Release on February 16.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X