ರಾಬರ್ಟ್ ಅಬ್ಬರ: ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ನಂ 1, ಎಷ್ಟಾಗಿದೆ ವೀಕ್ಷಣೆ?

ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡ್ತಿರುವ ರಾಬರ್ಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿ, ದೊಡ್ಡ ಮಟ್ಟದ ಯಶಸ್ಸು ಗಳಿಸಿಕೊಂಡಿದೆ. ಬೆಳಗ್ಗೆ 10 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ರಿಲೀಸ್ ಆದ ರಾಬರ್ಟ್ ಟ್ರೈಲರ್ ಈಗ ನಂಬರ್ 1 ಟ್ರೆಂಡಿಂಗ್‌ನಲ್ಲಿದೆ.

6 ಗಂಟೆ 49 ನಿಮಿಷಕ್ಕೆ ಖುದ್ದು ಆನಂದ್ ಆಡಿಯೋ ಟ್ವಿಟ್ಟರ್ ಖಾತೆ ನೀಡಿರುವ ಮಾಹಿತಿ ಪ್ರಕಾರ, ರಾಬರ್ಟ್ ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ನಂಬರ್ ವನ್ 1 ಸ್ಥಾನದಲ್ಲಿದ್ದು, 2 ಮಿಲಿಯನ್ (2,152,183) ವೀಕ್ಷಣೆ ಕಂಡಿದೆ ಎಂದಿದೆ.

ಜೊತೆಗೆ 300K ಲೈಕ್ಸ್ ಹಾಗೂ 44K ಕಾಮೆಂಟ್ಸ್ ಬಂದಿದೆ ಎಂದು ತಿಳಿಸಿದೆ. ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ ಎಂಬ ಖುಷಿ ಒಂದು ಕಡೆಯಾದರೆ, ಆನಂದ್ ಆಡಿಯೋ ಅವರ ಮೇಲೆ ಡಿ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ.

Darshan Starrer Roberrt Trailer No 1 trending at Youtube

ಯೂಟ್ಯೂಬ್ ವೀಕ್ಷಣೆ ಈಗ ಸ್ಟಾರ್‌ಗಳ ಪ್ರತಿಷ್ಠೆಯಾಗಿದೆ. ಹೀಗಾಗಿ, ಹೆಚ್ಚು ವೀಕ್ಷಣೆ ಕಾಣಬೇಕು ಎಂಬ ನಿರೀಕ್ಷೆಯಿಂದ ದರ್ಶನ್ ಅಭಿಮಾನಿಗಳು ಕಾಯುತ್ತಿದ್ದರು. ಆದರೆ, ರಿಯಲ್ ಟೈಂ ವಿಚಾರದಲ್ಲಿ ಆನಂದ್ ಆಡಿಯೋ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಫ್ಯಾನ್ಸ್ ಮುಗಿಬಿದ್ದಿದ್ದಾರೆ.

ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿದ್ದಾರೆ. ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ರವಿ ಕಿಶನ್, ರವಿಶಂಕರ್ ಸೇರಿದಂತೆ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಒಳಗೊಂಡಿದೆ.

More from Filmibeat

English summary
Challenging star Darshan starrer Roberrt movie trailer trending at Youtube and With 2+ Million Views.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X