ರಾಬರ್ಟ್ ಟ್ರೈಲರ್: ದರ್ಶನ್ ಅಬ್ಬರಕ್ಕೆ ಅಭಿಮಾನಿಗಳು ಫಿದಾ

'ಒಬ್ರು ಲೈಫ್ ನಲ್ಲಿ ಹೀರೋ ಆಗಬೇಕು ಅಂದರೆ ಇನ್ನೊಬ್ರ ಲೈಫ್ ನಲ್ಲಿ ನಾವು ವಿಲನ್ ಆಗಬೇಕು...'ಎಂದು ಅಬ್ಬರಿಸುತ್ತಾ ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದ ದಿನ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಹೌದು, ಡಿ ಬಾಸ್ ಅಭಿನಯ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅಭಿಮಾನಿಗಳ ನಿದ್ದೆಗೆಡಿಸಿದೆ.

ಮಾಸ್ ಅಂಡ್ ಕ್ಲಾಸ್ ದರ್ಶನ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದರ್ಶನ್ ಅಭಿಮಾನಿಗಳಿಗೆ ರಾಬರ್ಟ್ ಟ್ರೈಲರ್ ಅನ್ನು ಭರ್ಜರಿ ಗಿಫ್ಟ್ ಆಗಿ ನೀಡುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾರೆ.

Darshan starrer Roberrt trailer released on the occasion of actor birthday

ವಸಿಷ್ಠ ಸಿಂಹ ಧ್ವನಿಯಿಂದ ಪ್ರಾರಂಭವಾಗುವ ಟ್ರೈಲರ್ ನೋಡುಗರ ಕುತೂಹಲ ಮತ್ತಷ್ಟು ಕೆರಳಿಸುತ್ತೆ. ಮಾಸ್ ಲುಕ್ ನಲ್ಲಿ ದರ್ಶನ್ ಎಂಟ್ರಿ, ನಾಯಕಿ ಆಶಾ ಭಟ್ ದರ್ಶನ, 'ಮನುಷ್ಯನಿಗೆ ಎರಡು ಬಾರಿ ಮೈ ನಡುಗುತ್ತೆ, ಒಂದು ಚಳಿ ಆದಾಗ ಮತ್ತೊಂದು ಭಯ ಆದಾಗ....' ಎಂದು ಜಗಪತಿ ಅವರ ಮೈ ನಡುಗಿಸುವ ಡೈಲಾಗ್ ಸಿನಿಮಾದ ಮೇಲಿನ ಕುತೂಹಲ, ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಬ್ಯಾಗ್ರೌಂಡ್ ಮ್ಯೂಸಿಕ್ ಸಹ ಟ್ರೈಲರ್ ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಸುಮಾರು ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ರಾಬರ್ಟ್ ಟ್ರೈಲರ್ ಸಖತ್ ಖುಷಿ ನೀಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿಶೇಷ ಎಂದರೆ ಕನ್ನಡದ ಜೊತೆಗೆ ತೆಲುಗು ಟ್ರೈಲರ್ ಸಹ ರಿಲೀಸ್ ಆಗಿದ್ದು, ತೆಲುಗು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ ರಾಬರ್ಟ್ ಸಿನಿಮಾ ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ರಾಬರ್ಟ್ ಚಿತ್ರಮಂದಿರಕ್ಕೆ ಅಬ್ಬರಿಸುತ್ತಿದೆ. ಕೇವಲ ಹಾಡುಗಳು ಮತ್ತು ಟೀಸರ್ ನೋಡಿ ಸಿನಿಮಾದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೀಗ ಟ್ರೈಲರ್ ನೋಡಿದ ಬಳಿಕ ಸಿನಿಮಾ ನೋಡಲು ಮತ್ತಷ್ಟು ಕಾತರರಾಗಿದ್ದಾರೆ.

More from Filmibeat

English summary
Challenging star Darshan starrer 'Roberrt' trailer released on the occasion of actor birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X